ಬೆಳಗಾವಿ:
ಬೆಳಗಾವಿಯಲ್ಲಿ ಸದ್ಯ ನಡೆದಿರುವ ವಿಧಾನ ಮಂಡಲದ ಚಳಿಗಾಲ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳು,ಸುವರ್ಣ ವಿಧಾನಸೌಧಕ್ಕೆ ಕಚೇರಿಗಳ ಸ್ಥಳಾಂತರ ಮತ್ತು ಬೆಳಗಾವಿಯನ್ನು ಎರಡನೇ ರಾಜಧಾನಿ ಎಂದು ಘೋಷಿಸುವ ಕುರಿತು ಚರ್ಚಿಸಬೇಕೆಂದು ಆಗ್ರಹಿಸಲು
ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ
ಕ್ರಿಯಾ ಸಮಿತಿಯ ಪದಾಧಿಕಾರಿಗಳು ಇಂದು ಸುವರ್ಣ ಸೌಧದಲ್ಲಿ ವಿವಿಧ ಪಕ್ಷಗಳ ಗಣ್ಯರನ್ನು,ಸಚಿವರನ್ನು,
ಶಾಸಕರನ್ನು ಭೇಟಿಯಾಗಿ ಚರ್ಚಿಸಿದರು.

ಸಚಿವರಾದ ಎಚ್.ಕೆ.ಪಾಟೀಲ, ಭೈರತಿ ಸುರೇಶ,
ರಾಮಲಿಂಗಾರೆಡ್ಡಿ, ಬಿಜೆಪಿ ಶಾಸಕ ಅಭಯ ಪಾಟೀಲ, ಬಿಜೆಪಿ ರಾಜ್ಯಾಧ್ಯಕ್ಷ,ಶಾಸಕ ಬಿ.ವೈ. ವಿಜಯೇಂದ್ರ, ಕಾಂಗ್ರೆಸ್ ಎಂ.ಎಲ್.ಸಿ.ಗಳಾದ ಜಗದೀಶ ಶೆಟ್ಟರ್, ಬಿ.ಕೆ.ಹರಿಪ್ರಸಾದ, ನಾಗರಾಜ ಯಾದವ ಅವರನ್ನು
ನಿಯೋಗ ಭೇಟಿಯಾಗಿದೆ.