ಬೆಂಗಳೂರು: ಹೊಸ ವರ್ಷಕ್ಕೆ ಪುರಿ ಜಗನ್ನಾಥ, ದ್ವಾರಕೆ, ದಕ್ಷಿಣ ಭಾರತ ಕ್ಷೇತ್ರಗಳ ಯಾತ್ರೆಗೆ ತೆರಳ ಬಯಸುವ ಭಕ್ತರಿಗೆ ಮೂರು ಪ್ರವಾಸಿ ಪ್ಯಾಕೇಜ್ ಮಾಡಿರುವ ಧಾರ್ಮಿಕ ದತ್ತಿ ಇಲಾಖೆ ‘ಕರ್ನಾಟಕ ಭಾರತ್‌ ಗೌರವ್ ಯಾತ್ರೆ’ ಸಹಾಯಧನ ಘೋಷಿಸಿದೆ.

ದಕ್ಷಿಣ ಭಾರತ ಯಾತ್ರೆ: ದಕ್ಷಿಣ ಯಾತ್ರೆಯ ಜ.25ರಿಂದ ಜ.30 ರವರೆಗೆ ರಾಮೇಶ್ವರ,
ಕನ್ಯಾಕುಮಾರಿ, ಮಧುರೈ, ತಿರುವನಂತಪುರಂಗೆ 6 ದಿನ ಇರಲಿದೆ. ₹25000 ವೆಚ್ಚವಾಗುತ್ತದೆ. ಸರ್ಕಾರ ₹15000 ಭರಿಸಲಿದ್ದು, ಯಾತ್ರಾರ್ಥಿಗಳು ₹10000 ನೀಡಬೇಕು. ಬೆಂಗಳೂರು ಸರ್‌ಎಂ.ವಿಶ್ವೇಶ್ವರಯ್ಯ ರೈಲ್ವೆ ನಿಲ್ದಾಣ, ಬೆಳಗಾವಿ, ಹುಬ್ಬಳ್ಳಿ, ಹಾವೇರಿ, ದಾವಣಗೆರೆ, ಬೀರೂರು, ತುಮಕೂರಿನಲ್ಲಿ ರೈಲು ಹತ್ತಿ ಇಳಿಯುವ ಅವಕಾಶವಿದೆ.

ದ್ವಾರಕಾ, ಪುರಿ ಜಗನ್ನಾಥ ಯಾತ್ರೆ: ಎರಡನೆಯದ್ದಾಗಿ ದ್ವಾರಕಾ, ನಾಗೇಶ್ವರ, ಸೋಮನಾಥ್, ತ್ರಯಂಬಕೇಶ್ವರ ಅವರನ್ನೊಳಗೊಂಡ 8 ದಿನಗಳ ಯಾತ್ರಾ ಪ್ಯಾಕೇಜ್ ಇದೆ. ಮೂರನೆಯದಾಗಿ ಪುರಿ, ಕೊನಾರ್ಕ್, ಗಂಗಾಸಾಗರ್, ಕೋಲ್ಕತಾ ಒಳಗೊಂಡ 8 ದಿನಗಳ ಯಾತ್ರಾ ಪ್ಯಾಕೇಜ್‌ಗಳಿವೆ. ಇವೆರಡಕ್ಕೂ ₹32500 ವೆಚ್ಚವಾಗಲಿದ್ದು, ಸರ್ಕಾರ 17500 ಸರ್ಕಾರದಿಂದ ಭರಿಸಲಾಗುತ್ತದೆ. ಉಳಿದ ₹15000 ಯಾತ್ರಿಕರು ಪಾವತಿಸಬೇಕು. ದ್ವಾರಕಾ ಯಾತ್ರೆ ಜ.6ರಂದು ಹೊರಡಲಿದ್ದು, ಜ.13ರಂದು ಮುಗಿ ಯಲಿದೆ. ಪುರಿಜಗನ್ನಾಥ ದರ್ಶನಕ್ಕೆ ಜ.3ರಂದು ರೈಲು ಹೊರಡಲಿದ್ದು, ಫೆ.10 ರಂದು ಮುಗಿಯಲಿದೆ. ಬೆಂಗಳೂರು, ಎಸ್‌ಎಂವಿಟಿ, ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹಾವೇರಿ, ಬೆಳಗಾವಿಗಳಲ್ಲಿ ಯಾತ್ರಿಗಳು ಹತ್ತಿ ಇಳಿಯಬಹುದು.