
ಬೆಳಗಾವಿ : ಯಮಕನಮರಡಿ ಸಮೀಪದ ಕುರಣಿ ಗ್ರಾಮ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಹಾಂತೇಶ ಮಗದುಮ್ಮ ಅವರ ಬಣವು 12 ಜನ ನಿರ್ದೇಶಕರ ಸ್ಥಾನಗಳ ಪೈಕಿ 11 ಸ್ಥಾನಗಳಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಮಹಾಂತೇಶ ಮಲ್ಲಪ್ಪ ಮಗದುಮ್ಮ, ಭೀಮಪ್ಪ ಕಲ್ಲಪ್ಪ ಕುದನೂರಿ, ಬಸಗೌಡ ಈರಪ್ಪ ಗುಡಸಿ, ರಾಜಶೇಖರ ಈರಪ್ಪ ಸಾವಳಗಿ, ಆನಂದ ಮಚ್ಚೆಂದ್ರ ಹಾಲಿ, ಸಿದ್ರಾಮ ಬಾಳಪ್ಪ ಬಾಗೇವಾಡಿ, ಸತ್ಯಪ್ಪ ಸಿದ್ದಪ್ಪ ಗೋಠಿ, ಐರಾವತಿ ಕಾಡಪ್ಪ ಕರಗುಪ್ಪಿ, ಜಯಶ್ರೀ ಸಂತೋಷ ಮಗದುಮ್ಮ, ಚಂಪಕ್ಕಾ ಸುಭಾಸ ಗಿಡಿಗಾರ, ಬಸವಣ್ಣಿ ಯಲ್ಲಪ್ಪ ಮಾದರ, ಶಿವಪ್ಪ ಬಸವಣ್ಣಿ ಗುಡಸಿ ನೂತನವಾಗಿ ಆಯ್ಕೆಯಾದ ನಿರ್ದೇಶಕರಾಗಿದ್ದಾರೆ ಎಂದು ಚುನಾವಣಾಧಿಕಾರಿ ಚೇತನ ಹಂಜಿ ತಿಳಿಸಿದ್ದಾರೆ. ಮುಕಾನಿ ಸುನೀಲ ನಾಶಿಪುಡಿ ಮತ್ತಿತರರು ಇದ್ದರು.