ಮುದ್ರಾಡಿ : ಮುದ್ರಾಡಿ ಹಳೆಬೀಡು ಕೃಷ್ಣ ಶೆಟ್ಟಿಗಾರ್ ಇವರ ಗದ್ದೆಯಲ್ಲಿ ವಿದ್ಯಾರ್ಥಿಗಳಗೆ ನಾಟಿ ಪ್ರಾತ್ಯಕ್ಷಿಕೆ ನಡೆಯಿತು. ಸಂಪನ್ಮೂಲ ವ್ಯಕ್ತಿ 65 ವರ್ಷದ ಮುದ್ರಾಡಿ ಹಳೆಬೀಡು ಸುಂದರ ಶೆಟ್ಟಿಗಾರ್ ಇವರು ಮಕ್ಕಳಿಗೆ ನೇಜಿ ನೆಡುವ ವಿಧಾನದ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.7 ನೇ ತರಗತಿ ಕನ್ನಡ ವಿಷಯದಲ್ಲಿ ಶೀನ ಶೆಟ್ಟರು ನಮ್ಮ ಟೀಚರು ಪಾಠದ ಅನುಭವವನ್ನು ವಿದ್ಯಾರ್ಥಿಗಳು ಪಡೆದರು.ಮಕ್ಕಳು ನೇಜಿ ನೆಟ್ಟು ಖುಷಿಪಟ್ಟರು.ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ಶುಭದರ ಶೆಟ್ಟಿ, ಮುಖ್ಯಶಿಕ್ಷಕ ಶ್ರೀನಿವಾಸ ಭಂಡಾರಿ, ಕೃಷ್ಣ ಶೆಟ್ಟಿಗಾರ್ ಮನೆಯವರು ಉಪಸ್ಥಿತರಿದ್ದರು. ಅತ್ಯುತ್ತಮವಾಗಿ ಕಾರ್ಯಕ್ರಮ ಆಯೋಜಿಸಿದ ಕೃಷ್ಣ ಶೆಟ್ಟಿಗಾರ್ ಮತ್ತು ಅವರ ಮನೆಯವರಿಗೆ ಧನ್ಯವಾದ ಸಲ್ಲಿಸಲಾಯಿತು.