Join The Telegram | Join The WhatsApp |
ಮೈಸೂರು-
ಇಂದು ಮಧ್ಯಾಹ್ನ ಕರ್ನಾಟಕದ ಮೈಸೂರು ಬಳಿ ಪ್ರಧಾನಿ ನರೇಂದ್ರ ಮೋದಿ ಸಹೋದರ ಪ್ರಹ್ಲಾದ್ ಮೋದಿ ಕಾರು ಅಪಘಾತಕ್ಕೀಡಾಗಿ ಗಾಯಗೊಂಡಿದ್ದಾರೆ.
ಪ್ರಹ್ಲಾದ್ ಮೋದಿ ಅವರು ತಮ್ಮ ಪತ್ನಿ, ಮಗ, ಸೊಸೆ ಮತ್ತು ಮೊಮ್ಮಗನೊಂದಿಗೆ ಮರ್ಸಿಡಿಸ್ ಬೆಂಜ್ ಎಸ್‌ಯುವಿಯಲ್ಲಿ ಬಂಡೀಪುರಕ್ಕೆ ತೆರಳುತ್ತಿದ್ದಾಗ ಮಧ್ಯಾಹ್ನ 2 ಗಂಟೆ ಸುಮಾರಿಗೆ ಡಿವೈಡರ್‌ಗೆ ಕಾರು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಅವರ ಬೆಂಗಾವಲು ಪಡೆ ಕೂಡ ಅವರೊಂದಿಗೆ ಪ್ರಯಾಣಿಸುತ್ತಿತ್ತು.
ಸ್ಥಳದಿಂದ ಬಂದ ದೃಶ್ಯಗಳು ಕಾರಿನ ಮುಂಭಾಗಕ್ಕೆ ತೀವ್ರ ಹಾನಿಯನ್ನು ತೋರಿಸಿದೆ.ಪ್ರಹ್ಲಾದ್ ಮೋದಿಯವರ ಮೊಮ್ಮಗನ ಕಾಲಿಗೆ ಮೂಳೆ ಮುರಿತವಾಗಿದ್ದು ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಮೈಸೂರಿನ ಜೆಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
Join The Telegram | Join The WhatsApp |