ಬೆಳಗಾವಿ: ಮನೆಗಳ್ಳತನಕ್ಕೆ ಸಂಬಂಧಿಸಿ ಬೆಳಗಾವಿ ಪೊಲೀಸರು ಇಬ್ಬರನ್ನು ಬಂಧಿಸಿ ಸುಮಾರು ಏಳು ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ನ್ಯೂ ಗಾಂಧಿನಗರದ ಪರ್ವೇಜ್ ಜಮೀರ್ ಪಾರೀಶವಾಡಿ (25) ಮತ್ತು ಫರ್ಹಾನ್ ರಿಯಾಜ್ ಅಹಮದ್ ದಲಾಯಕ್ (22)ಬಂಧಿತರಾಗಿದ್ದಾರೆ. ಮಹಾಂತೇಶ ನಗರ ಮತ್ತು ಅಮಾನ್ ನಗರ ಸೇರಿದಂತೆ ವಿವಿಧ ಕಡೆ ಮನೆಗಳ್ಳತನ ನಡೆದಿತ್ತು. ಪೊಲೀಸರು ತನಿಖೆ ಕೈಗೊಂಡು ಇಬ್ಬರನ್ನು ಬಂಧಿಸಿದ್ದು 2.5 ಲಕ್ಷದ ಬೆಳ್ಳಿ ಆಭರಣ, 80,000 ರೂ. ಲ್ಯಾಪ್ ಟಾಪ್ ಸೇರಿದಂತೆ 2.20 ಲಕ್ಷ ರೂ.ನಗದು ಸೇರಿ 7 ಲಕ್ಷ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ. ಮಾಳ ಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.