ಬೆಂಗಳೂರು : ಖ್ಯಾತ ಹಾಸ್ಯನಟ ಚಿಕ್ಕಣ್ಣಗೂ ನೋಟಿಸ್​ ನೀಡಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ದರ್ಶನ್‌ ಶೆಡ್‌ಗೆ ಹೋಗುವ ಮೊದಲು ವಿನಯ್ ಒಡೆತನದ ಸ್ಟೋನಿಬ್ರೂಕ್ ನಲ್ಲಿ ಪಾರ್ಟಿ ಮಾಡಿದ್ದರು. ಈ ಪಾರ್ಟಿಯಲ್ಲಿ ಹಾಸ್ಯ ನಟ ಚಿಕ್ಕಣ್ಣ ಹಾಗೂ ನಿರ್ಮಾಪಕರು ಭಾಗಿಯಾಗಿದ್ದರು. ಪಾರ್ಟಿಯಿಂದ ಎದ್ದು ನಟ ದರ್ಶನ್ ಮನೆಗೆ ಹೊಗಬೇಕಿತ್ತು.

ಆದರೆ, ಅವರು ತೆರಳಿದ್ದು ಪಟ್ಟಣಗೆರೆ ಶೆಡ್​ಗೆ. ಪಾರ್ಟಿ ಮುಗಿಸಿ ಬಂದು ಹಲ್ಲೆಗೈದು ರೇಣುಕಾಸ್ವಾಮಿ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ಪಾರ್ಟಿಯಲ್ಲಿ ದರ್ಶನ್ ಜತೆ ಭಾಗಿಯಾದ ಹಿನ್ನೆಲೆಯಲ್ಲಿ ಹಾಸ್ಯ ನಟ ಚಿಕ್ಕಣ್ಣ ಅವರಿಗೆ ನೋಟಿಸ್​ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎನ್ನಲಾಗಿದೆ.
ನೋಟಿಸ್​ ನೀಡಲು ಅನ್ನಪೂರ್ಣೇಶ್ವರಿನಗರ ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಕೊಲೆ ವಿಚಾರವಾಗಿ ಸ್ಟೋನಿಬ್ರೂಕ್ ನಲ್ಲಿ ಏನಾದರು ಚರ್ಚೆಯಾಗಿತ್ತೆ ಎನ್ನುವ ಬಗ್ಗೆ ಮಾಹಿತಿ ಪಡೆಯಬಹುದು ಎಂದು ಹೇಳಲಾಗುತ್ತಿದೆ. ನಾಳೆ ಹಾಜರಾಗುವಂತೆ ಖ್ಯಾತ ಹಾಸ್ಯ ನಟನಿಗೆ ನೊಟೀಸ್ ನೀಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ದರ್ಶನ್ ಪಟ್ಟಣಗೆರೆ ಶೆಡ್‌ಗೆ ಹೋಗುವ ಕೆಲವೇ ಗಂಟೆ ಮುಂಚಿತವಾಗಿ ನಡೆದಿದ್ದ ಪಾರ್ಟಿ ಇದಾಗಿತ್ತು. ಇಂದು ಸಂಜೆ ವೇಳೆಗೆ ಹಾಸ್ಯನಟನಿಗೆ ನೋಟಿಸ್ ನೀಡಲು ಪೊಲೀಸರ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಪಟ್ಟಣಗೆರೆಯ ಶೆಡ್‌ನಲ್ಲಿ ಕೂಡಿಹಾಕಿ ಥಳಿಸಿ ಸಾಯಿಸಲಾಗಿತ್ತು. ನಂತರ ಇದನ್ನು ಮುಚ್ಚಿಹಾಕುವುದು ಹೇಗೆ ಎಂಬ ಕುರಿತು ಸ್ಟೋನಿ ಬ್ರೂಕ್ ರೆಸ್ಟೋರೆಂಟ್‌ನಲ್ಲಿ ನಟ ಹಾಗೂ ಆರೋಪಿಗಳು ಕುಳಿತು ಮಾತನಾಡಿದ್ದರು. ಇಲ್ಲೇ 30 ಲಕ್ಷ ರೂಪಾಯಿಯ ಡೀಲ್‌ ಕೂಡ ನಡೆದಿತ್ತು. ಇದೀಗ ಎರಡೂ ಕಡೆಗಳ ಸಿಸಿಟಿವಿ ಹಾರ್ಡ್ ಡ್ರೈವ್‌ಗಳು ನಾಶವಾಗಿವೆ ಎಂದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಸ್ಟೋನಿ ಬ್ರೂಕ್ ರೆಸ್ಟೋರೆಂಟ್‌ನ ಮಾಲಿಕ‌ ವಿನಯ್‌ನನ್ನು ಪ್ರಶ್ನಿಸಲಾಗುತ್ತಿದೆ. ‌