ಬೆಳಗಾವಿ :ದಿನಾಂಕ: 20-03-2024 ರಂದು ಅಬಕಾರಿ ಅಪರ ಆಯುಕ್ತರು ಬೆಳಗಾವಿ ಕೇಂದ್ರ ಸ್ಥಾನ, ಅಬಕಾರಿ ಜಂಟಿ ಆಯುಕ್ತರು (ಜಾರಿ ಮತ್ತು ತನಿಖೆ) ಬೆಳಗಾವಿ ವಿಭಾಗ ಅಬಕಾರಿ ಉಪ ಆಯುಕ್ತರು ಬೆಳಗಾವಿ ದಕ್ಷಿಣ ಜಿಲ್ಲೆ, ಅಬಕಾರಿ ಅಧೀಕ್ಷಕರು ರಾಮದುರ್ಗ ಉಪ ವಿಭಾಗರವರ ಮಾರ್ಗದರ್ಶನದಲ್ಲಿ ಸವದತ್ತಿ ತಾಲೂಕಿನ ಮುನವಳ್ಳಿಯಿಂದ ಕಿಟದಾಳಕ್ಕೆ ಹೋಗುವ ರಸ್ತೆಯಲ್ಲಿ ರಸ್ತೆಗಾವಲು ಮಾಡುತ್ತಿರುವಾಗ ಬಸಪ್ಪ ಬಂಡ್ರೋಳ್ಳಿ ಎಂಬಾತನು ತನ್ನ ದ್ವಿಚಕ್ರ ವಾಹನದ ಮೇಲೆ ಅಕ್ರಮವಾಗಿ 8.640 ಲೀಟರ್ ಮದ್ಯವನ್ನು ಸಾಗಾಟ ಮಾಡುತ್ತಿರುವಾಗ ಸಿಕ್ಕಿದ್ದು ಸ್ಥಳ ಪಂಚನಾಮೆಯಡಿ ಮುದ್ದೆ ಮಾಲು ಹಾಗು ದ್ವಿಚಕ್ರ ವಾಹನ ನೊಂದಣಿ ಸಂಖ್ಯೆ ಕೆ- 69 ಇ-8594 ವನ್ನು ವಶಪಡಿಸಿಕೊಂಡು ಘೋರ ಪ್ರಕರಣವನ್ನು ದಾಖಲಿಸಲಾಗಿದೆ.

ಆರೋಪಿತನಿಗೆ ಸಿ ಆರ್ ಪಿ ಸಿ 41ಎ ರಡಿ ನೋಟಿಸ್ ಅನ್ನು ನೀಡಲಾಗಿರುತ್ತದೆ
ಜಪ್ತು ಮದ್ಯದ ಮೌಲ್ಯ-3850
ಜಪ್ತು ವಾಹನದ ಮೌಲ್ಯ-110000
ಒಟ್ಟು ಮೌಲ್ಯ – ರೂ. 1,13,850
ಈ ಪ್ರಕರಣವನ್ನು ಅಬಕಾರಿ ನಿರೀಕ್ಷಕರು ಸವದತ್ತಿ ವಲಯ ಅವರು ದಾಖಲಿಸಿಕೊಂಡಿರುತ್ತಾರೆ.