ಬೆಳಗಾವಿ: ಬೆಳಗಾವಿಯ ದ್ವಿತೀಯ ಪಿಯುಸಿ ರಾಜ್ಯಶಾಸ್ತ್ರ ಮೌಲ್ಯಮಾಪನ ಕೇಂದ್ರದಲ್ಲಿ ನಿವೃತ್ತರಿಗೆ ಸನ್ಮಾನ ಹಾಗೂ ಮೌಲ್ಯಮಾಪನ ಶಿಬಿರದ ಸಮಾರೋಪ ಸಮಾರಂಭ ಜರುಗಿತು. ಕೇಂದ್ರ ಮುಖ್ಯಸ್ಥ ಬಿ.ಐ. ಬಡಿಗೇರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮೌಲ್ಯಮಾಪನ ಶಿಬಿರಾಧಿಕಾರಿ ಪ್ರಾಚಾರ್ಯ ಶಿವರಾಜ್ ಬೊಮ್ಮಶೆಟ್ಟಿ, ವೀಕ್ಷಕ ವೈ.ಎನ್.ಪಾಟೀಲ, ರಾಜ್ಯಶಾಸ್ತ್ರ ವಿಭಾಗದ ಬೆಳಗಾವಿ ಸಂಘದ ಅಧ್ಯಕ್ಷ ಬಿ.ಕೆ. ಉಳ್ಳಾಗಡ್ಡಿ, ವಿಜಯಪುರ ಸಂಘದ ಮುಖ್ಯಸ್ಥ ಎಂ.ಬಿ. ರಜಪೂತ, ಬಾಗಲಕೋಟೆ ಮುಖ್ಯಸ್ಥ ಮಲ್ಲು ಕೊಪ್ಪದ, ಡಿ.ವೈ.ಕಟ್ಟಿ, ಪಿ.ಎಸ್.ಕಿಲಬನವರ, ಸುಜಲಾ ಜೈನಾಪುರ ಉಪಸ್ಥಿತರಿದ್ದರು.

ನಿವೃತ್ತಿ ಹೊಂದುತ್ತಿರುವ ಉಪನ್ಯಾಸಕರಾದ ಎಸ್.ಎಸ್.ಹುಬ್ಬಳ್ಳಿ, ಲಕ್ಷ್ಮೀ ನರಸಯ್ಯ, ಮಹೇಶ ದುದಗಿ ಅವರಿಗೆ ಸನ್ಮಾನಿಸಲಾಯಿತು
ವೀಕ್ಷಕ ವೈ.ಎನ್.ಪಾಟೀಲ ಮಾತನಾಡಿ, ಮೌಲ್ಯಮಾಪನದಿಂದ ಪರಿಪೂರ್ಣ ಉಪನ್ಯಾಸಕನಾಗಲು ಸಹಕಾರಿಯಾಗಿದೆ. ಕೇಂದ್ರದ ಕಾರ್ಯ ಯಶಸ್ವಿಯಾಗಿದೆ ಎಂದರು.

ಮಹೇಶ ದುದಗಿ ಮಾತನಾಡಿ, ಮೌಲ್ಯಮಾಪನ ಅನುಭವ ಹಂಚಿಕೊಳ್ಳುವ ಒಂದು ವೇದಿಕೆಯಾಗಿದೆ. ನಿಷ್ಟಾವಂತಿಕೆಯ ಸೇವೆ ನನಗೆ ತೃಪ್ತಿ ತಂದಿದೆ ಎಂದರು.

ಎನ್. ಲಕ್ಷ್ಮೀ ನರಸಿಂಹಯ್ಯ ಮಾತನಾಡಿ, ದೇಶದ ಮಹಾನ್ ವ್ಯಕ್ತಿಗಳ ನಿರ್ಮಾತೃ ಶಿಕ್ಷಕ. ಹಾಗಾಗಿ ಶಿಕ್ಷಕ ವೃತ್ತಿಗೆ ಅಪಾರವಾದ ಗೌರವ ಇದೆ ಎಂದರು.
ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳ ಉಪನ್ಯಾಸಕರು ಇದ್ದರು.