ಸೊರಬ :  ರಾಹುಲ್ ಗಾಂಧಿ ಹೇಳಿಕೆಯನ್ನು ಖಂಡಿಸಿರುವ ಬಿಜೆಪಿ ಮಹಿಳಾ ಘಟಕ, ಅವರಿಗೆ ಸದ್ಬುದ್ಧಿ ದೊರೆಯಲಿ ಅಂದು ಆಶಿಸಿ ಪಟ್ಟಣದ ಎಲ್ಲಮ್ಮ ದೇವಿ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿದ್ದಾರೆ.

ನಂತರ ಮಾತನಾಡಿದ ತಾಲೂಕು ಬಿಜೆಪಿ ಮಹಿಳಾ ಅಧ್ಯಕ್ಷೆ ಹೊಳಿಯಮ್ಮ ಚನ್ನಪಟ್ಟಣ, ನಾವು ಶಕ್ತಿ ಉಪಾಸನೆ ಮಾಡುವ ದೇವಿಯ ಆರಾಧಕರು. ಮಹಿಳೆಯರು, ತಾಯಿ, ಸಹೋದರಿ, ಮಗಳು ಶಕ್ತಿಯ ಸಂಕೇತ. ಈ ಶಕ್ತಿ ಆರಾಧನೆಯ ಕುರಿತು ಕ್ಷುಲ್ಲಕವಾಗಿ ಮಾತನಾಡಿದ ಹಿಂದು ಸಮಾಜದ ನಂಬಿಕೆಗಳನ್ನು ನಾಶ ಮಾಡಲು ಹೊರಟ ರಾಹುಲ್ ಗಾಂಧಿಯ ಹೇಳಿಕೆಯನ್ನು ಖಂಡಿಸುತ್ತೇವೆ ಎಂದು ತಿಳಿಸಿದರು.
ಹಿಂದೂ ಸಮಾಜವನ್ನು ಅಂತ್ಯ ಮಾಡಲು ರಾಹುಲ್ ಗಾಂಧಿ ನೇತೃತ್ವದ ಇಂಡಿ ಒಕ್ಕೂಟ ಸಂಕಲ್ಪ ಮಾಡಿದೆ.  ಹಿಂದು ಧರ್ಮದ ಶಕ್ತಿ ಆರಾಧನೆಯ ಬಗ್ಗೆ ಲಘುವಾಗಿ ಮಾತನಾಡಿರುವುದರ ಹಿಂದೆ ಭಾರತೀಯ ಸಂಸ್ಕೃತಿಯ ನಾಶ ಮಾಡುವ ಹಿಡನ್ ಅಜೆಂಡಾ ಅಡಗಿದೆ. ಇಂಡಿ ಒಕ್ಕೂಟ ತಮ್ಮ ಪ್ರಣಾಳಿಕೆಯಲ್ಲಿ ಶಕ್ತಿಯನ್ನು ಮುಗಿಸುತ್ತೇವೆ ಎಂದು ಹೇಳಿದೆ. ಆದರೆ ಅದಕ್ಕೆ ಭಾರತೀಯ ನಾರಿ ಶಕ್ತಿ ಅವಕಾಶ ಕೊಡುವುದಿಲ್ಲ ಎಂದರು.
ಪ್ರಧಾನ ಕಾರ್ಯದರ್ಶಿ ಭಾಗ್ಯ ಪ್ರಶಾಂತ, ಶಿಲ್ಪಾ ರವಿ, ಪ್ರಮುಖರಾದ ಆಶಕ್ಕ, ಗೌರಮ್ಮ, ಸುಧ, ರೇವತಿ, ಸವಿತ, ಭವಾನಿ, ಪುರಸಭೆ ಸದಸ್ಯೆ ಜಯಲಕ್ಷ್ಮಿ ಇದ್ದರು.