ಹೆಬ್ರಿ : ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನಲ್ಲಿ ವಾಣಿಜ್ಯ ವಿದ್ಯಾರ್ಥಿಗಳಿಗಾಗಿ ಅಮೃತ ಆವಿಷ್ಕಾರ ಎಂಬ ವಿನೂತನ ಪ್ರಾಡಕ್ಟ್ ಲಾಂಚ್ ಕಾರ್ಯಕ್ರಮ ನಡೆಯಿತು.

ಕಾರ್ಕಳದ ಉದ್ಯಮಿ ವಿಕ್ಯಾತ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ , ಇಂದಿನ ವಿದ್ಯಾರ್ಥಿಗಳಿಗೆ ಕೌಶಲ್ಯ ಭರಿತ ಕ್ರಿಯೇಟಿವ್ ಶಿಕ್ಷಣದ ಅವಶ್ಯಕತೆ ಇದೆ. ಕೇವಲ ಪಠ್ಯದ ಬೋಧನೆ ಮಾತ್ರ ವಿದ್ಯಾರ್ಥಿಗಳನ್ನು ಸರ್ವತೋಮುಖವಾಗಿ ಬೆಳೆಸುವುದಿಲ್ಲ. ಜೀವನದ ಪಾಠವನ್ನು ಬೋಧಿಸಬಲ್ಲ ಪ್ರಾಯೋಗಿಕ ಶಿಕ್ಷಣ ವಿದ್ಯಾರ್ಥಿಗಳಿಗೆ ಅವಶ್ಯ . ಆ ರೀತಿಯ ಶಿಕ್ಷಣವನ್ನ ಅಮೃತ ಭಾರತಿ ನೀಡುತ್ತಾ ಬಂದಿದೆ. ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಹೊಸ ಹೊಸ ಆವಿಷ್ಕಾರಗಳನ್ನು ಮಾಡಬೇಕು , ಮುಂದೆ ನವ ಉದ್ಯಮವನ್ನು ಆರಂಭಿಸಬೇಕು ಎಂದರು.

ಸಂಸ್ಥೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ವಿಜಯಕುಮಾರ್ ಶೆಟ್ಟಿ ಸಭಾ ಅಧ್ಯಕ್ಷತೆ ವಹಿಸಿ ಮಾತನಾಡಿ, ಹತ್ತು ನಿಮಿಷದ ಒಂದು ಪ್ರಾಡಕ್ಟ್ ಲಾಂಚ್ ಪ್ರದರ್ಶನಕ್ಕಾಗಿ ನಿಮ್ಮ ಹತ್ತಾರು ಗಂಟೆಗಳ ಮಾಹಿತಿ ಸಂಗ್ರಹದ ಕಾರ್ಯ, ನಿಮ್ಮಲ್ಲಿ ಇಂಡಸ್ಟ್ರಿಯ ಕುರಿತು ಬಹಳಷ್ಟು ಜ್ಞಾನವನ್ನು ತುಂಬುತ್ತದೆ . ಈ ಜ್ಞಾನವನ್ನು ಬಳಸಿಕೊಂಡು ಭವಿಷ್ಯದಲ್ಲಿ ತಾವುಗಳು ಯಶಸ್ವಿ ಉದ್ಯಮಿಗಳಾಗಿ, ಮೋದಿಯವರ ಸ್ಟಾರ್ಟ್ ಅಪ್ ಇಂಡಿಯಾ , ಮೇಕ್ ಇನ್ ಇಂಡಿಯಾದ ಕನಸನ್ನು ನನಸಾಗಿಸಿ ಎಂದರು. ವಾಣಿಜ್ಯ ವಿಭಾಗದ ಹಿರಿಯ ಉಪನ್ಯಾಸಕರಾದ ಅನುಸೂಯ ಮಲ್ಯ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಪ್ರದ್ಯುಮ್ನ ಸ್ವಾಗತಿಸಿ , ಆದಿತ್ಯ ಅತಿಥಿಗಳನ್ನು ಪರಿಚಯಿಸಿ , ಗಗನ್ ರಾಜ್ ವಂದಿಸಿದರು . ಲಹರಿ ತುಂಗಾ ನಿರೂಪಿಸಿದರು. ಉಪನ್ಯಾಸಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಬಳಿಕ ವಿದ್ಯಾರ್ಥಿಗಳಿಂದ ಪ್ರಾಡಕ್ಟ್ ಲಾಂಚ್ ಸ್ಪರ್ಧೆ ಮತ್ತು ಮಾಡೆಲ್ ಗಳ ಪ್ರದರ್ಶನ ನಡೆಯಿತು .