ಬೆಳಗಾವಿ : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ 14 ನೇ ಆರೋಪಿ ಪ್ರದೂಷ್. ಈತ ದರ್ಶನ್ ಅತ್ಯಾಪ್ತ ಅಂತಲೂ ಕರೆಸಿಕೊಳ್ಳುವ ವ್ಯಕ್ತಿ. ಪ್ರದೋಷ್ ರೇಣುಕಸ್ವಾಮಿ ಮೃತದೇಹವನ್ನು ಬಿಸಾಡಿ, ಕೇಸ್ ಮುಚ್ಚಿ ಹಾಕುವ ಜವಾಬ್ದಾರಿ ಹೊತ್ತು ಕೊಂಡಿದ್ದ ಎನ್ನುವ ಆರೋಪವಿದೆ.ಅಂತಹ ಪ್ರದೋಷ್ ಇವತ್ತು ಪರಪ್ಪನ ಅಗ್ರಹಾರದಿಂದ ಹೆಜ್ಜೆ ಮುಂದಿಡೂದಕ್ಕೂ ನರಳಡ್ತಿದ್ದ. ಪ್ರದೋಷ್ ನನ್ನ ಬೆಳಗಾವಿಯ ಹಿಂಡಲಗಾ ಜೈಲಿಗೆ ಕಳಿಸಲಾಗಿದೆ, ಜೈಲಿನ ಹೆಸರು ಕೇಳಿಯೇ ಪ್ರದೋಷ ಎದೆ ನಡುಗಿ ಹೋಗಿದೆ. ಹೀಗಾಗಿ, ಕೋರ್ಟ್‌ನಲ್ಲಿ ಜಡ್ಜ್ ಮುಂದೆ ಪರಿಪರಿಯಾಗಿ ಬೇಡಿ ಕೊಂಡಿದ್ದಾನೆ. ಸ್ವಾಮಿ, ದಯವಿಟ್ಟು ನನ್ನ ಬೇರೆ ಜೈಲಿಗೆ ಕಳಿಸಬೇಡಿ ಅಂತ ಕೇಳಿಕೊಂಡಿದ್ದ.
ನನ್ನ ಬೇರೆ ಜೈಲಿಗೆ ಶಿಫ್ಟ್ ಮಾಡಬೇಡಿ.. ನಮ್ಮ ತಂದೆಗೆ ಕ್ಯಾನ್ಸರ್ ಇದೆ. ಇಲ್ಲಿ ನಮ್ಮ ಮನೆಯವರ ಭೇಟಿಗೆ ಬಿಡ್ತಿಲ್ಲ. ನಮ್ಮ ಮನೆಯಲ್ಲಿ ಕ್ಯಾನ್ಸರ್ ಪೇಷೆಂಟ್‌ನ ಅಡ್ಮಿಟ್ ಮಾಡಿದ್ದಾರೆ. ಹೀಗಿರುವಾಗ, ನಾನು ಬೇರೆ ಕಡೆ ಹೋದ್ರೆ ಕಷ್ಟ ಆಗುತ್ತೆ ಸರ್.ನನ್ನ ಬೆಂಗಳೂರು ಜೈಲಿನಲ್ಲೇ ಇಡೋದಕ್ಕೆ ಅವಕಾಶ ಮಾಡಿಕೊಡಿ ಎಂದು ಅವಲತ್ತು ತೋಡಿಕೊಂಡಿದ್ದ.
ನಮ್ಮನ್ನ ಆ ಜೈಲಿಗೆ ಕಳಿಸ್ಟೇಡಿ
ಸಾರ್. ನಾವ್ ಇಲ್ಲೇ ಇರ್ತಿವೆ. ನಾವೆಲ್ಲೂ ಹೋಗಲ್ಲ. ಇದು ರೇಣುಕಸ್ವಾಮಿ ಕೊಲೆ ಕೇಸ್‌ನಲ್ಲಿ ಪರಪ್ಪನ ಅಗ್ರಹಾರ ಸೇರಿದ್ದ ದರ್ಶನ್ ಅತ್ಯಾಪ್ತರ ಗೋಳಾಟ. ರಾಜಾತಿಥ್ಯದ ಫೋಟೋ ಬಳಿಕ ಡಿ ಗ್ಯಾಂಗ್ ಅಕ್ಷರಶಃ ಕಂಗಾಲಾಗಿ ಹೋಗಿದೆ. ಒಬ್ಬೊಬ್ಬರು ಒಂದೊಂದು ದಿಕ್ಕಿಗೆ ಶಿಫ್ಟ್ ಆಗ್ತಿದ್ದಾರೆ.. ನಮ್ಮಪ್ಪ ಕ್ಯಾನ್ಸರ್ ಪೇಷೆಂಟ್ ಸಾರ್ ಅಂತ ಪ್ರದೂಷ್ ಪರದಾಡಿದ್ರೆ, ಬೆಳಗಾವಿ ಜೈಲಿನ ಹೆಸರು ಕೇಳಿ ವಿಲ ವಿಲ ಅಂದಿದ್ದ !