Join The Telegram | Join The WhatsApp |
ಬೆಳಗಾವಿ :
ಕರ್ನಾಟಕ ವಿಧಾನ ಪರಿಷತ್ ಉಪಸಭಾಪತಿಯಾಗಿ ಬಿಜೆಪಿಯ ಎಂ.ಕೆ.ಪ್ರಾಣೇಶ್ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಅನಿಲ್ ಕುಮಾರ್ ಅರಳಿ ಸ್ಪರ್ಧಿಸಿದ್ದರು. ಬಿಜೆಪಿ ಅಗತ್ಯ ಸಂಖ್ಯಾಬಲ(39) ಹೊಂದಿದ್ದರೂ ಅಡ್ಡಮತದ ಭೀತಿಯಿಂದ ವಿಪ್ ಜಾರಿ ಮಾಡಿತ್ತು. ಜೆಡಿಎಸ್ ಈ ಬಾರಿ ತಟಸ್ಥ ನಿಲುವು ಹೊಂದಿದ್ದರಿಂದ ಕಾಂಗ್ರೆಸ್ ಅಭ್ಯರ್ಥಿ ಕೇವಲ 26 ಮತಗಳನ್ನು ಪಡೆದುಕೊಂಡಿದ್ದಾರೆ. ಈ ಮೂಲಕ ಪ್ರಾಣೇಶ್ ಉಪ ಸಭಾಪತಿಯಾಗಿ ಆಯ್ಕೆಯಾಗಿದ್ದಾರೆ.
ಪ್ರಾಣೇಶ್ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರಾಗಿದ್ದರು. 1989 ರಿಂದ ಬಿಜೆಪಿ ಸದಸ್ಯರಾಗಿದ್ದಾರೆ. ಮಾಜಿ ಉಪ ಪ್ರಧಾನಿ ಎಲ್ .ಕೆ.ಅಡ್ವಾಣಿ ಅವರು ಅಯೋಧ್ಯೆಯ ರಾಮ ಮಂದಿರಕ್ಕಾಗಿ ರಥಯಾತ್ರೆ ಪ್ರಾರಂಭಿಸಿದಾಗ ಪ್ರಾಣೇಶ್ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದರು. ಪ್ರಾಣೇಶ್ ಅವರು 2021 ರಲ್ಲಿ ನಡೆದ ಉಪ ಸಭಾಪತಿ ಚುನಾವಣೆಯಲ್ಲಿ ಸ್ಪರ್ಧಿಸಿ ಕಾಂಗ್ರೆಸ್ ಪಕ್ಷದ ಕೆ.ಸಿ. ಕೊಂಡಯ್ಯ ಅವರನ್ನು ಸೋಲಿಸಿ ಆಯ್ಕೆಯಾಗಿದ್ದರು. ಇದೀಗ ಮತ್ತೊಮ್ಮೆ ಆಯ್ಕೆಯಾಗಿದ್ದಾರೆ.
Join The Telegram | Join The WhatsApp |