ನವದೆಹಲಿ : 2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ನೇತೃತ್ವದ ವಿಪಕ್ಷಗಳ ಇಂಡಿಯಾ ಮೈತ್ರಿಕೂಟವು ಬಿಜೆಪಿಯನ್ನು ಸೋಲಿಸುವ ಸಾಧ್ಯತೆಗಳನ್ನು ತಳ್ಳಿಹಾಕಿದ ತಂತ್ರಗಾರ ಪ್ರಶಾಂತ ಕಿಶೋರ ಅವರು, ಪ್ರಧಾನಿ ಮೋದಿ ಸರ್ಕಾರ ಹಿನ್ನಡೆಯ ಸ್ಥಿತಿಯಲ್ಲಿದ್ದಾಗ ವಿಪಕ್ಷಗಳ ಒಕ್ಕೂಟ ಅದರ ಲಾಭ ಪಡೆಯಲು ಅನೇಕ ಬಾರಿ ವಿಫಲವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ರಾಮಮಂದಿರ (ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಶಂಕುಸ್ಥಾಪನೆ) ಬಗ್ಗೆ ನಿರ್ದಿಷ್ಟವಾಗಿ ಪ್ರಸ್ತಾಪಿಸಿದ ಪ್ರಶಾಂತ ಕಿಶೋರ, “ವಿಪಕ್ಷಗಳು ವಾಸ್ತವಿಕವಾಗಿ ಇದರ ನಂತರ ಶಸ್ತ್ರಾಸ್ತ್ರಗಳನ್ನು ತ್ಯಜಿಸಿದವು (ಘಟನೆಯ ನಂತರ). ವಿಪಕ್ಷಗಳು ಫೆಬ್ರವರಿಯಲ್ಲಿ ಎಚ್ಚೆತ್ತುಕೊಳ್ಳುವ ಹೊತ್ತಿಗೆ ಅದು ತುಂಬಾ ತಡವಾಗಿತ್ತು ಎಂದು ಅವರು ಹೇಳಿದರು.

“ಇಂಡಿಯಾ ಮೈತ್ರಿಕೂಟವು ಕ್ರಿಯೆಗೆ ಇಳಿಯುವ ಹೊತ್ತಿಗೆ ಅದು ತುಂಬಾ ತಡವಾಗಿತ್ತು… ಬಿಜೆಪಿಯು ತಾನು ಕಳೆದುಕೊಂಡಿದ್ದ ಜಾಗದಲ್ಲಿ ಈಗಾಗಲೇ ಚೇತರಿಸಿಕೊಂಡಿದೆ” ಎಂದು ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟದ ಸದಸ್ಯರಾದ ತೃಣಮೂಲ ಕಾಂಗ್ರೆಸ್‌, ಕಾಂಗ್ರೆಸ್ ಮತ್ತು ಡಿಎಂಕೆ ಪಕ್ಷಗಳ ಪ್ರಚಾರವನ್ನು ಆಯೋಜಿಸಿದ್ದ ರಾಜಕೀಯ ತಂತ್ರಜ್ಞ ಪ್ರಶಾಂತ ಕಿಶೋರ ಮಂಗಳವಾರ ಎನ್‌ಡಿಟಿವಿ(NDTV) ಜೊತೆ ಮಾತನಾಡುವಾಗ ಹೇಳಿದ್ದಾರೆ.
ಪ್ರಧಾನ ಮಂತ್ರಿ ಅಭ್ಯರ್ಥಿಯನ್ನು ಘೋಷಿಸುವಲ್ಲಿ ಇಂಡಿಯಾ ಮೈತ್ರಿಕೂಟ ವಿಫಲವಾಗಿರುವುದು ಅವರ ಹಿನ್ನಡೆಗೆ ಮತ್ತೊಂದು ಕಾರಣ ಎಂದು ಅವರು ಹೇಳಿದ್ದಾರೆ. ಇದು ಬಿಜೆಪಿ ಕೂಡ ಮತದಾರರ ಮುಂದೆ ಇಂಡಿಯಾ ಮೈತ್ರಿಕೂಟಕ್ಕೆ “ವಿಶ್ವಾಸಾರ್ಹ ಪ್ರಧಾನಿ ಅಭ್ಯರ್ಥಿಯ ಮುಖವೇ ಇಲ್ಲ … ಅಥವಾ ಬಿಜೆಪಿ ವಿರುದ್ಧ ಬಲವಾದ ನಿರೂಪಣೆಯೇ ಅವರಲ್ಲಿ ಇಲ್ಲ ಎಂದು ಬಿಜೆಪಿ ಹೇಳಲು ಕಾರಣವಾಯಿತು ಎಂದು ಪ್ರಶಾಂತ ಕಿಶೋರ ಹೇಳಿದ್ದಾರೆ.

ಕಳೆದ ವರ್ಷ ಜೂನ್‌ನಲ್ಲಿ ಇಂಡಿಯಾ ಮೈತ್ರಿಕೂಟ ರಚನೆಯಾದ ನಂತರವೂ ವಿಪಕ್ಷಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ವಿಫಲವಾಗಿದೆ ಎಂದು ಅವರು ಟೀಕಿಸಿದರು.
2024 ರ ಲೋಕಸಭೆ ಚುನಾವಣೆ ಸೇರಿದಂತೆ ಪ್ರತಿ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದು ತನ್ನ ಉದ್ದೇಶವಾಗಿತ್ತು ಎಂದು ಇಂಡಿಯಾ ಮೈತ್ರಿಕೂಟ ಘೋಷಷಿಕೊಂಡಿತು, ಆದರೆ ಇಂಡಿಯಾ ಮೈತ್ರಿಕೂಟ ನವೆಂಬರ್‌ನಲ್ಲಿ ನಡೆದ ಐದು ರಾಜ್ಯಗಳ ಚುನಾವಣೆಗಳಲ್ಲಿ ಕಾಮನ್‌ ಪ್ಲಾಟ್‌ ಫಾರ್ಮ್‌ ಕಂಡುಕೊಳ್ಳಲು ವಿಫಲವಾಯಿತು. ವಾಸ್ತವವಾಗಿ, ಮಧ್ಯಪ್ರದೇಶದ ಆರು ಸ್ಥಾನಗಳಿಗೆ ಸಂಬಂಧಿಸಿದಂತೆ ಅಖಿಲೇಶ ಯಾದವ್ ಅವರ ಸಮಾಜವಾದಿ ಪಕ್ಷದೊಂದಿಗಿನ ಕಾಂಗ್ರೆಸ್‌ ಭಿನ್ನಾಭಿಪ್ರಾಯಗಳು ಹೆಡ್‌ಲೈನ್ಸ್‌ ಪಡೆಯುವಂತಾಯಿತು ಎಂದು ಹೇಳಿದರು.

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಅನ್ನು ಬಿಜೆಪಿ ಸೋಲಿಸಿತು, ನಂತರ ತೃಣಮೂಲ ಕಾಂಗ್ರೆಸ್‌ ಮುಖ್ಯಸ್ಥೆ ಮತ್ತು ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಅಖಿಲೇಶ ಯಾದವ್ ಇಬ್ಬರೂ ಕಾಂಗ್ರೆಸ್‌ ಅನ್ನು ಟೀಕಿಸಿದರು. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಜೊತೆಗೆ ಸ್ಥಾನ ಹೊಂದಾಣಿಕೆ ಮಾಡಿಕೊಳ್ಳಲು ತೃಣಮೂಲ ಕಾಂಗ್ರೆಸ್‌ಗೆ ತನ್ನದೇ ಆದ ಸಮಸ್ಯೆಗಳಿತ್ತು, ಇದರ ಪರಿಣಾಮವಾಗಿ ಈ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಜೊತೆಗೆ ಸ್ಥಾನ ಹೊಂದಾಣಿಕೆ ಮಾಡಿಕೊಳ್ಳದೆ ತೃಣಮೂಲ ಕಾಂಗ್ರೆಸ್‌ ಏಕಾಂಗಿಯಾಗಿ ಸ್ಪರ್ಧಿಸಿತು. ಇದು ಬಿಜೆಪಿಯ ಪರವಾಗಿ ಮತಗಳನ್ನು ವಿಭಜಿಸುವ ಸಾಧ್ಯತೆಯಿದೆ, ಆದರೂ ತೃಣಮೂಲ ಕಾಂಗ್ರೆಸ್‌ ಇಂಡಿಯಾ ಮೈತ್ರಿಕೂಟದ ಭಾಗವಾಗಿ ಉಳಿದಿದೆ ಎಂದು ಚುನಾವಣಾ ತಂತ್ರಜ್ಞ ಪ್ರಶಾಂತ ಕಿಶೋರ ಒತ್ತಿ ಹೇಳಿದ್ದಾರೆ.

ಪ್ರತಿಪಕ್ಷಗಳಿಗೆ ಪ್ರಶಾಂತ ಕಿಶೋರ ಅವರ ಎಚ್ಚರಿಕೆಯು ಅವರು ಏಪ್ರಿಲ್‌ನಲ್ಲಿ ಹೇಳಿದ್ದನ್ನು ಪ್ರತಿಧ್ವನಿಸುತ್ತದೆ. ಕರ್ನಾಟಕವನ್ನು ಹೊರತುಪಡಿಸಿ ದಕ್ಷಿಣ ಮತ್ತು ಪೂರ್ವ ಭಾರತದಲ್ಲಿ ತನ್ನ ಹಿಡಿತವು ದುರ್ಬಲವಾಗಿರುವ-ಅಸ್ತಿತ್ವದಲ್ಲಿ ಇಲ್ಲದಿರುವ ಎರಡು ಪ್ರದೇಶಗಳಲ್ಲಿ ಬಿಜೆಪಿ ತನ್ನ ಸ್ಥಾನಗಳನ್ನು ಮತ್ತು ಮತಗಳ ಪಾಲನ್ನು ಗಮನಾರ್ಹವಾಗಿ ಹೆಚ್ಚಿಸಿಕೊಳ್ಳಲಿದೆ ಎಂದು ಅವರು ಹೇಳಿದ್ದರು. ಬಿಜೆಪಿ ಮತ್ತು ಮೋದಿ ಅಜೇಯರಲ್ಲ, ಆದರೆ ವಿಪಕ್ಷಗಳು ಬಿಜೆಪಿಯನ್ನು ಸೋಲಿಸಲು ಮೂರು ವಿಭಿನ್ನ ಮತ್ತು ವಾಸ್ತವಿಕ ಅವಕಾಶಗಳನ್ನು ಕಳೆದುಕೊಂಡಿವೆ ಎಂದು ಅವರು ಹೇಳಿದ್ದರು.
ಅವರು ಉಲ್ಲೇಖಿಸಿದ್ದ ಮೂರು ಅವಕಾಶಗಳೆಂದರೆ 2015 ಮತ್ತು 2016 ರಲ್ಲಿ ಬಿಜೆಪಿಯ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣಾ ಫಲಿತಾಂಶಗಳಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿತು. ಆ 24 ತಿಂಗಳುಗಳಲ್ಲಿ ಪಕ್ಷವು ಅನೇಕ ವಿಧಾನಸಭೆ ಚುನಾವಣೆಗಳಲ್ಲಿ ಸೋತಿತ್ತು. ಎರಡನೇ ಅವಕಾಶವೆಂದರೆ ನೋಟು ಅಮಾನ್ಯೀಕರಣದ ನಂತರ, ಒಂದು ದಶಕದಲ್ಲಿ ಮೊದಲ ಬಾರಿಗೆ 2017ರಲ್ಲಿ ಬಿಜೆಪಿ ಉತ್ತರ ಪ್ರದೇಶದಲ್ಲಿ ದೊಡ್ಡ ಗೆಲುವು ಸಾಧಿಸಿತು. ಇದೇವೇಳೆ 1995 ರಿಂದ ಆಡಳಿತ ನಡೆಸುತ್ತ ಬಂದಿದ್ದ ಗುಜರಾತ್ (ಪ್ರಧಾನಿ ತವರು ರಾಜ್ಯ) ಅನ್ನು ಬಹುತೇಕ ಕಳೆದುಕೊಂಡಿತ್ತು. ಆದರೆ 2019 ರ ಚುನಾವಣೆಯಲ್ಲಿ ಕಾಂಗ್ರೆಸ್ “ಪ್ರಮಾದ” ಮಾಡಿತು, ಅದರಲ್ಲಿ ಅದು ಕೇವಲ 52 ಸ್ಥಾನಗಳನ್ನು ಪಡೆದುಕೊಂಡಿತು ಎಂದು ಪ್ರಶಾಂತ ಕಿಶೋರ ಹೇಳಿದರು.

ಪ್ರಶಾಂತ ಕಿಶೋರ್‌ ಹೇಳಿದಂತೆ, ಕೊನೆಯ “ಡ್ರಾಪ್ ಕ್ಯಾಚ್” ಕೋವಿಡ್ ಸಾಂಕ್ರಾಮಿಕದ ನಂತರದ ಪ್ರಧಾನಿಯ ಅನುಮೋದನೆ ರೇಟಿಂಗ್‌ಗಳಲ್ಲಿ ಕುಸಿತ ಮತ್ತು ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಬಿಜೆಪಿಯ ಕಳಪೆ ಪ್ರದರ್ಶನ. “ನೀವು ಕ್ಯಾಚ್‌ಗಳನ್ನು ಬಿಡುವುದನ್ನು ಮುಂದುವರಿಸಿದರೆ, ಬ್ಯಾಟರ್ ಶತಕ ಗಳಿಸುತ್ತಾರೆ, ವಿಶೇಷವಾಗಿ ಅವರು ಉತ್ತಮ ಬ್ಯಾಟರ್ ಆಗಿದ್ದರೆ ಎಂದು ಕಿಶೋರ್ ಎರಡು ತಿಂಗಳ ಹಿಂದೆ ಎಚ್ಚರಿಕೆ ನೀಡಿದ್ದರು.