
ಆರ್ಡಿ : ಕೊಂಜಾಡಿ (ಕಲ್ಮರ್ಗಿ) ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣರಾಜೋತ್ಸವ,ಪ್ರತಿಭಾ ಪುರಸ್ಕಾರ ಮಕ್ಕಳ ಸಾಂಸ್ಕೃತಿಕ ಕಲರವ ಜ.26 ನೇ ಭಾನುವಾರ ಬೆಳಗ್ಗೆ ಗಂ.8.30 ರಿಂದ ಆರಂಭಗೊಂಡು ಮಧ್ಯಾಹ್ನದ ತನಕ ನಡೆಯಲಿದೆ.
ಕೊಂಜಾಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ 1956 ರಲ್ಲಿ ಆರಂಭಗೊಂಡು ಸಾವಿರಾರು ಮಕ್ಕಳ ವಿದ್ಯಾಭ್ಯಾಸಕ್ಕೆ
ವರದಾನವಾಗಿತ್ತು, ಮಕ್ಕಳ ದಾಖಲಾತಿ ಹೆಚ್ಚಿಸಲು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಕ್ಕಳ ದಾಖಲಾತಿ ಹೆಚ್ಚಿಸುವಲ್ಲಿ ಇತರ ಶಾಲೆಗಳಿಗೆ ಮಾದರಿಯಾಗಿದೆ. ಶಾಲೆಯಲ್ಲಿ ಸರ್ಕಾರಿ ಸೌಲಭ್ಯಗಳೊಂದಿಗೆ ದಾನಿಗಳ ಸಹಕಾರದೊಂದಿಗೆ ಮಕ್ಕಳ ದಾಖಲಾತಿ ಹೆಚ್ಚಿಸುವ ಕುರಿತು ಶಾಲೆಯ ಸುತ್ತ ಮುತ್ತಲಿನ ಭಾಗಗಳಲ್ಲಿ ಮನೆ-ಮನೆಗಳಿಗೆ ಭೇಟಿ ನೀಡಿ,ಶಾಲೆಯಲ್ಲಿ ಮಕ್ಕಳ ಶಿಕ್ಷಣಕ್ಕೆ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿ ಮಕ್ಕಳ ಪೋಷಕರ ಜೊತೆ ಚರ್ಚಿಸಿ ವಿನೂತನ ಸೌಲಭ್ಯಗಳನ್ನು ಪ್ರತಿ ಶೈಕ್ಷಣಿಕ ವರ್ಷಗಳಲ್ಲಿಯೂ ನೀಡಲಾಗುತ್ತಿದೆ. ದಾನಿಗಳು, ಶಿಕ್ಷಣಾಭಿಮಾನಿಗಳು,
ಹಳೇ ವಿದ್ಯಾರ್ಥಿಗಳು,ಎಸ್‌ಡಿಎಂಸಿ ಹಾಗೂ ಶಿಕ್ಷಕ ವೃಂದವರು ಶಾಲೆಯಲ್ಲಿ ಇನ್ನಷ್ಟು ಪ್ರಗತಿ, ಮಕ್ಕಳ ದಾಖಲಾತಿ ಏರಿಕೆ,ಶಾಲೆಯ ಏಳಿಗೆಯಲ್ಲಿ ಸಹಕರಿಸುತ್ತಿದ್ದಾರೆ. ಮಕ್ಕಳ ಪೋಷಕರಿಗೆ ಶಾಲೆಯ ಬಗ್ಗೆ ಗೌರವ ಹೆಚ್ಚಿದೆ. ಹಳೆ ವಿದ್ಯಾರ್ಥಿಗಳ
ಸಹಕಾರದಲ್ಲಿ ಶಾಲೆಯು ಈ ವರ್ಷ ಆಕರ್ಷಕ ಬಣ್ಣದೊಂದಿಗೆ ಹೊಸ ರೂಪದೊಂದಿಗೆ ಕಂಗೊಳಿಸುತ್ತಿದೆ. ತರಕಾರಿ ಹಾಗೂ ಶಾಲಾ ಉದ್ಯಾನವನ ನಿರ್ಮಾಣ ನಡೆದಿದೆ. ಶಾಲೆಯಲ್ಲಿ ಮಕ್ಕಳ ದಾಖಲಾತಿ ಸಂಖ್ಯೆಯನ್ನು ಉಳಿಸಿಕೊಂಡು ಶಾಲೆಯು ದಿನದಿಂದ ದಿನಕ್ಕೆ ಪ್ರಗತಿಯೊಂದಿಗೆ ಹೊಸ ಚೈತನ್ಯ ಕಂಡಿದೆ. ಉಚಿತ ಸೌಲಭ್ಯಗಳು: ಉಚಿತ ನೋಟ್ ಪುಸ್ತಕ, ಶಾಲಾ ಬ್ಯಾಗ್,
ಕ್ರೀಡಾ ಸಮವಸ್ತ್ರ, ಐಡಿ.ಕಾರ್ಡ್, ಸ್ಕೂಲ್ ಬೆಲ್ಟ್, ಕ್ರೀಡಾ ಸಮವಸ್ತ್ರ, ಒಳಾಂಗಣ ಕ್ರೀಡಾಂಗಣ,ಕ್ರೀಡಾ ಸೌಲಭ್ಯಗಳು,
ಶೈಕ್ಷಣಿಕ ಪ್ರವಾಸ,ತರಕಾರಿ ಹಾಗೂ ಶಾಲಾ ಉದ್ಯಾನವನ ನಿರ್ಮಾಣ, ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವ ಸೌಲಭ್ಯಗಳು, ವಿನೂತನ ಮಾದರಿ ಕಾರ್ಯಕ್ರಮಗಳನ್ನು
ಇಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ.ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಶಾಲಾ ವಾರ್ಷಿಕೋತ್ಸವ, ಉಚಿತ ಸಾರಿಗೆ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ನೀಡುವ ಗುರಿಯಿದೆ.
ಕಾರ್ಯಕ್ರಮಗಳು: ಬೆಳಗ್ಗೆ ಗಂ 8.30ಕ್ಕೆ
ಧ್ವಜಾರೋಹಣ,ಗಂ 9 ರಿಂದ ಸಭಾ ಕಾರ್ಯಕ್ರಮ, ಕುಡಿಯುವ ನೀರಿನ ಯಂತ್ರದ ಕೂಡುಗೆ ಹಸ್ತಾಂತರ,
ಪ್ರತಿಭಾ ಪುರಸ್ಕಾರ,ಬಹುಮಾನ ವಿತರಣೆ,
ವಾರ್ಷಿಕ ಕ್ರೀಡಾಕೂಟದ ಸ್ಫರ್ಧಾ ವಿಜೇತರಿಗೆ ಆರ್ಡಿ, ಬೆಳ್ವೆ, ಗೋಳಿಯಂಗಡಿ ಲಯನ್ಸ್ ಕ್ಲಬ್ ಪ್ರಾಯೋಜಕತ್ವದಲ್ಲಿ
ವಾರ್ಷಿಕ ಕ್ರೀಡಾಕೂಟದ ಸ್ಫರ್ಧಾ ವಿಜೇತರಿಗೆ ಬಹುಮಾನ ವಿತರಣೆ, ಗಂ.10 ರಿಂದ ಕಲ್ಮರ್ಗಿ ಅಂಗನವಾಡಿ ಕೇಂದ್ರದ
ಪುಟಾಣಿಗಳಿಂದ ಚಿಣ್ಣರ ಚಿಲಿಪಿಲಿ ನೃತ್ಯ,ಶಾಲಾ ವಿದ್ಯಾರ್ಥಿಗಳಿಂದ ವೈವಿಧ್ಯಮಯ ನೃತ್ಯ ಸಿಂಚನ,ಸಾಂಸ್ಕೃತಿಕ ಕಲರವ, “ಮಾಯಾವಿ”ಕಿರು ನಾಟಕ ನಡೆಯಲಿದೆ.ಸರ್ಕಾರಿ ಸೌಲಭ್ಯಗಳೊಂದಿಗೆ ದಾನಿಗಳು, ಹಳೆ ವಿದ್ಯಾರ್ಥಿಗಳು,ಎಸ್‌ಡಿಎಂಸಿ, ಶಿಕ್ಷಕ ವೃಂದದವರ ಸಹಕಾರದಲ್ಲಿ ಶಾಲೆಯ ಪ್ರಗತಿಗಾಗಿ ಶ್ರಮಿಸಲಾಗುತ್ತಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಅವಕಾಶವಿದೆ, ಉಚಿತ ಸೌಲಭ್ಯಗಳನ್ನು ನೀಡಿ ಪ್ರೋತ್ಸಾಹಿಸಲಾಗುವುದು. ಪೋಷಕರು ಮಕ್ಕಳನ್ನು ಶಾಲೆಗೆ ದಾಖಲಿಸುವುದರೊಂದಿಗೆ ಶಾಲೆಯ ಬೆಳವಣಿಗೆಗೆ ಸಹಕರಿಸಬೇಕು.
– ಪ್ರಸಾದ್ ತೊನ್ನಾಸೆ,ಅಧ್ಯಕ್ಷರು,
ಹಳೆ ವಿದ್ಯಾರ್ಥಿ ಸಂಘ,ಸರ್ಕಾರಿ
ಕಿರಿಯ ಪ್ರಾಥಮಿಕ ಶಾಲೆ ಕೊಂಜಾಡಿ.(ಕಲ್ಮರ್ಗಿ)
—————-
ಶಿಕ್ಷಣ ಇಲಾಖೆ ಹಾಗೂ ದಾನಿಗಳ ಸಹಕಾರದಲ್ಲಿ ಹಾಗೂ ಶಾಲೆಯ ಕೀರ್ತಿ ಹೆಚ್ಚಿಸುವಲ್ಲಿ ಮಕ್ಕಳ ಭವಿಷ್ಯ
ರೂಪಿಸಿಕೊಳ್ಳಲು ಗುಣಮಟ್ಟದ ಶಿಕ್ಷಣ ನೀಡಲು ಪ್ರಾಮಾಣಿಕವಾಗಿ ಶ್ರಮಿಸುತ್ತೇವೆ. ಶಾಲೆಯಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸುವಲ್ಲಿ ಸರ್ಕಾರಿ ಸೌಲಭ್ಯಗಳೊಂದಿಗೆ ದಾನಿಗಳ ಸಹಕಾರದೊಂದಿಗೆ ವಿವಿಧ ಸೌಲಭ್ಯಗಳು,
ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪೋಷಕರು ಮಕ್ಕಳನ್ನು ಶಾಲೆಗೆ ದಾಖಲಿಸುವ ಮೂಲಕ ಸಹಕರಿಸ ಬೇಕು – ನಾರಾಯಣ ನಾಯ್ಕ,ಮುಖ್ಯ ಶಿಕ್ಷಕರು, ಸ.ಕಿ.ಪ್ರಾ.ಶಾಲೆ, ಕೊಂಜಾಡಿ (ಕಲ್ಮರ್ಗಿ)———————–
ಶಾಲೆಯಲ್ಲಿ ಉತ್ತಮ ವ್ಯವಸ್ಥೆಗಳಿವೆ.ಮಕ್ಕಳನ್ನು
ದಾಖಲಾತಿಸುವಂತೆ ಪೋಷಕರಿಗೆ ತಿಳಿಸಲಾಗಿದೆ. ಶಾಲೆಯಲ್ಲಿ ಮಕ್ಕಳಿಗೆ ಹಿಂದೆ ದಾನಿಗಳು, ಹಳೆ ವಿದ್ಯಾರ್ಥಿಗಳ ಸಹಕಾರದಲ್ಲಿ ನೀಡುತ್ತಿದ್ದ ಸೌಲಭ್ಯಗಳನ್ನು ಪ್ರತಿ ವರ್ಷ ನೀಡಲಾಗುತ್ತಿದೆ.ಶಾಲೆಯ ಪ್ರಗತಿಯಲ್ಲಿ ಎಲ್ಲರ ಸಹಕಾರ ಅಗತ್ಯವಿದೆ.- ಗಿರೀಶ್ ನಾಯ್ಕ,ಕಲ್ಮರ್ಗಿ, ಅಧ್ಯಕ್ಷರು,ಎಸ್‌ಡಿಎಂಸಿ,ಸ.ಕಿ.ಪ್ರಾ.ಶಾಲೆ, ಕೊಂಜಾಡಿ (ಕಲ್ಮರ್ಗಿ)