
ಹೆಬ್ರಿ : ಆರ್ಡಿಯ ಗ್ರಾಮೀಣ ಪರಿಸರದಲ್ಲಿ ಹುಟ್ಟಿ ಬೆಳೆದು ಅಪಾರ ಪರಿಶ್ರಮದಿಂದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶ್ರೇಷ್ಠ ಸಾಧನೆ ಮಾಡಿದ ಪ್ರವೀಣ್ ಶಣೈ ಅವರಿಗೆ ಈಗ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.
ಹೆಬ್ರಿಯ ಪ್ರತಿಷ್ಠಿತ ಅಮೃತ ಭಾರತಿಯಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ 586 ಅಂಕ ಪಡೆದು ಸಾಧನೆ ಮಾಡುವ ಮೂಲಕ ಪ್ರವೀಣ್ ಈಗ ಹುಟ್ಟೂರಿಗೆ ಕೀರ್ತಿ ತಂದಿದ್ದಾರೆ.
ಈ ವರ್ಷ ಶತಮಾನೋತ್ಸವ ಆಚರಿಸುತ್ತಿರುವ ಸಂಭ್ರಮದಲ್ಲಿರುವ ಆಡಿ೯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಚಾಮ೯ಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢ ಶಾಲೆಯ ಹಳೆ ವಿದ್ಯಾರ್ಥಿ ಆಡಿ೯ ಪ್ರಕಾಶ ಶೆಣೈ ಹಾಗೂ ವಿದ್ಯಾ ಶೆಣೈ ಸುಪುತ್ರ ಪ್ರವೀಣ್ ಶೆಣೈ ನಮ್ಮೂರ ಹೆಮ್ಮೆಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದ
ನಮ್ಮೂರಿನ ಹೆಮ್ಮೆಯ ವಿದ್ಯಾರ್ಥಿ.
ಪ್ರಸ್ತುತ ಹೆಬ್ರಿ ಅಮೃತ ಭಾರತಿ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು. ಈ ಬಾರಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲಿಸಿದ ಈ ವಿದ್ಯಾರ್ಥಿಗೆ ಈಗ ಆರ್ಡಿ ಪರಿಸರದಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.ಪ್ರಕಾಶ ಶೆಣೈ ಹಾಗೂ ವಿದ್ಯಾ ಅವರು ಆರ್ಡಿ ಪರಿಸರದಲ್ಲಿ ಚಿರಪರಿಚಿತರು. ಅವರ ಸುಪುತ್ರ ಈಗ ಕಠಿಣ ಪರಿಶ್ರಮ ಹಾಗೂ ಉತ್ತಮ ಗುರಿ ಇಟ್ಟುಕೊಂಡು ಸಾಧನೆ ಮಾಡಿರುವುದು ಅಭಿನಂದನೆಗೆ ಪಾತ್ರವಾಗಿದೆ.
ಸಿಎ ಆಗುವಾಸೆ : ಉನ್ನತ ವಿದ್ಯಾಭ್ಯಾಸದ ಆಕಾಂಕ್ಷೆ ಇಟ್ಟುಕೊಂಡಿರುವ ಪ್ರವೀಣ್ ಶೆಣೈ ಅವರು ಸಿಎ ಆಗುವುದಾಗಿ ಪ್ರತಿಕ್ರಿಯೆ ನೀಡಿದ್ದಾರೆ.