This is the title of the web page
This is the title of the web page

Live Stream

September 2023
S M T W T F S
 12
3456789
10111213141516
17181920212223
24252627282930

| Latest Version 9.4.1 |

State News

ಹಿಂದುಗಳಲ್ಲಿ ಆತಂಕ ಹುಟ್ಟಿಸಲು ಪ್ರವೀಣ್ ಕೊಲೆ 

Join The Telegram Join The WhatsApp

ಮಂಗಳೂರು: 

ಬಿಜೆಪಿ ಯುವ ಮೋರ್ಚಾದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್‌ ನೆಟ್ಟಾರು ಅವರನ್ನು ಹಿಂದೂ ಸಮುದಾಯದವರಲ್ಲಿ ಆತಂಕ ಹುಟ್ಟಿಸಲೆಂದೇ ಹತ್ಯೆ ಮಾಡಲಾಗಿತ್ತು. ಈ ಕೃತ್ಯವನ್ನು ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಸಂಘಟನೆಯ ಸದಸ್ಯರೇ ನಡೆಸಿದ್ದಾರೆ ಎಂದು ಈ ಪ್ರಕರಣದ ತನಿಖೆ ನಡೆಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನ್ಯಾಯಾಲಯಕ್ಕೆ ತಿಳಿಸಿದೆ.

ಸುಳ್ಯ ತಾಲ್ಲೂಕಿನ ಬೆಳ್ಳಾರೆಯಲ್ಲಿ 2022ರ ಜುಲೈ 26 ರಂದು ನಡೆದಿದ್ದ ಈ ಹತ್ಯೆಯ ಸಂಬಂಧ ಎನ್‌ಐಎ ಒಟ್ಟು 20 ಆರೋಪಿಗಳ ವಿರುದ್ಧ ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಶುಕ್ರವಾರ (ಜ.20) ಆರೋಪಪಟ್ಟಿಯನ್ನು ಸಲ್ಲಿಸಿದೆ. ಆರೋಪ ಪಟ್ಟಿಯಲ್ಲಿರುವ ಪ್ರಮುಖ ಅಂಶಗಳು ಲಭ್ಯವಾಗಿವೆ.

ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 120 ಬಿ, 153 ಎ, 302, ಮತ್ತು 34, 1967ರ ಕಾನೂನುಬಾಹಿರ ಚಟುವಟಿಕೆ ತಡೆ (ಯುಎಪಿ) ಕಾಯ್ದೆಯ ಸೆಕ್ಷನ್‌ 16, 18 ಮತ್ತು 20 ಮತ್ತು ಸಶಸ್ತ್ರ ಕಾಯ್ದೆಯ ಸೆಕ್ಷನ್‌ 25 (1) (ಎ) ಅಡಿ ಮೊಕದ್ದಮೆಗಳನ್ನು ದಾಖಲಿಸಲಾಗಿದೆ.

ಆರೋಪಿಗಳು; ವಿಳಾಸ

1. ಮಹಮ್ಮದ್‌ ಸಯ್ಯದ್‌ (ಒಂದನೇ ಆರೋಪಿ), ಮಹಮ್ಮದ್ ಸಾಜಿದ್‌ ಅವರ ಮಗ, ಸುಳ್ಯ, ದಕ್ಷಿಣ ಕನ್ನಡ

2. ಅಬ್ದುಲ್‌ ಬಷೀರ್‌ (ಎರಡನೇ ಆರೋಪಿ) (29 ವರ್ಷ), ಮಹಮ್ಮದ್‌ ಕುಞಿ ಅವರ ಮಗ, ಯೆತ್ತಿನಹೊಳೆ, ಎಲಿಮಲೆ ಸುಳ್ಯ ತಾಲ್ಲೂಕು, ದಕ್ಷಿಣ ಕನ್ನಡ. (ಅಡ್ಕಾರು ಗ್ರಾಮದಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದ)

3. ರಿಯಾಜ್‌ (ಮೂರನೇ ಆರೋಪಿ) (28 ವರ್ಷ), ಅಬ್ದುಲ್‌ ಲತೀಫ್‌ ಅವರ ಮಗ, ಅಂಕತಡ್ಕ ಹೌಸ್‌, ಪಾಲ್ತಾಡಿ ಗ್ರಾಮ, ಪುತ್ತೂರು ತಾಲ್ಲೂಕು, ದಕ್ಷಿಣ ಕನ್ನಡ.

4. ಮುಸ್ತಾಫ ಫೈಚಾರ್‌ (ನಾಲ್ಕನೇ ಆರೋಪಿ) ಅಲಿಯಾಸ್‌ ಮಹಮ್ಮದ್‌ ಮುಸ್ತಾಫ ಎಸ್‌. (48 ವರ್ಷ), ಉಮರ್‌ ಅವರ ಮಗ, ಶಾಂತಿನಗರ, ಸುಳ್ಯ ಕಸಬಾ, ಸುಳ್ಯ ತಾಲ್ಲೂಕು, ದಕ್ಷಿಣ ಕನ್ನಡ

5. ಮಸೂದ್‌ ಕೆ.ಎ. (ಐದನೇ ಆರೋಪಿ), (40 ವರ್ಷ), ಅಬೂಬಕ್ಕರ್‌ ಕೆ.ಎ. ಅವರ ಮಗ, ಅಂಗಡಿ ಹೌಸ್‌, 34 ನೆಕ್ಕಿಲಾಡಿ, ದಕ್ಷಿಣ ಕನ್ನಡ

6. ಕೊಡಾಜೆ ಮಹಮ್ಮದ್‌ ಶರೀಫ್‌ (ಆರನೇ ಆರೋಪಿ), (53 ವರ್ಷ), ಕೊಡಾಜೆ ಅದ್ದ ಅವರ ಮಗ, ಕೊಡಾಝೆ, ಬಂಟ್ವಾಳ ತಾಲ್ಲೂಕು, ದಕ್ಷಿಣ ಕನ್ನಡ

7. ಅಬೂಬಕ್ಕರ್‌ ಸಿದ್ದಿಕ್‌ (ಏಳನೇ ಆರೋಪಿ) (38 ವರ್ಷ), ಅಲಿ ಕುಞಿ ಅವರ ಮಗ, ಬೆಳ್ಳಾರೆ ಹೌಸ್‌, ಮುಖ್ಯ ರಸ್ತೆ, ಬೆಳ್ಳಾರೆ, ಸುಳ್ಯ ತಾಲ್ಲೂಕು, ದಕ್ಷಿಣ ಕನ್ನಡ

8. ನೌಫಾಲ್‌ ಎಂ (ಎಂಟನೇ ಆರೋಪಿ) (38 ವರ್ಷ), ಮೊಹಮ್ಮದ್‌ ಟಿ.ಎ. ಅವರ ಮಗ, ತಂಬಿನಮಕ್ಕಿ ಹೌಸ್‌, ಬೆಳ್ಳಾರೆ ಅಂಚೆ, ಸುಳ್ಯ ತಾಲ್ಲೂಕು, ದಕ್ಷಿಣ ಕನ್ನಡ.

9. ಇಸ್ಮಾಯಿಲ್‌ ಶಾಫಿ ಕೆ. (ಒಂಬತ್ತನೇ ಆರೋಪಿ), ಆಡಂ ಕುಞಿ ಕೆ. ಅವರ ಮಗ,ಕುಞಿಗುಡ್ಡೆ, ಬೆಳ್ಳಾರೆ,

10. ಕೆ.ಮಹಮ್ಮದ್‌ ಇಕ್ಬಾಲ್‌ (ಹತ್ತನೇ ಆರೋಪಿ), ಆಡಂ ಕುಞಿ ಕೆ. ಅವರ ಮಗ,ಕುಞಿಗುಡ್ಡೆ, ಬೆಳ್ಳಾರೆ, ಸುಳ್ಯ ತಾಲ್ಲೂಕು, ದಕ್ಷಿಣ ಕನ್ನಡ.

11. ಶಹೀದ್‌ ಎಂ (11ನೇ ಆರೋಪಿ) (38 ವರ್ಷ), ಅಬ್ದುಲ್‌ ಕರಿಂಗಾಡ್‌ ಅವರ ಮಗ, ಕಲ್ಕಟ್ಟ ಮಂಗಳಂತಿ, ಮಂಜನಾಡಿ, ದಕ್ಷಿಣ ಕನ್ನಡ.

12. ಮಹಮ್ಮದ್ ಶಫೀಕ್‌ (12ನೇ ಆರೋಪಿ) (28 ವರ್ಷ), ದರ್ಖಾಸ್‌ ಹೌಸ್‌, ಸುಳ್ಯ ತಾಲ್ಲೂಕು, ದಕ್ಷಿಣ ಕನ್ನಡ

13. ಉಮರ್‌ ಫಾರೂಕ್‌ ಎಂ.ಆರ್‌. (13ನೆ ಆರೋಪಿ), ರಫೀಕ್‌ ಎಂ.ಆರ್‌. ಅವರ ಮಗ, (22 ವರ್ಷ) ಕಲ್ಲುಮುಟ್ಲು ಹೌಸ್‌, ಸುಳ್ಯ, ದಕ್ಷಿಣ ಕನ್ನಡ.

14. ಅಬ್ದುಲ್ ಕಬೀರ್‌ ಸಿ.ಎ (14ನೇ ಆರೋಪಿ) ಅಬ್ಬಾಸ್‌ ಅವರ ಮಗ, (33 ವರ್ಷ), ಜಟ್ಟಿಪಳ್ಳ ಹೌಸ್‌, ಮಸೀದಿ ಬಳಿ, ಸುಳ್ಯ, ದಕ್ಷಿಣ ಕನ್ನಡ.

15. ಮುಹಮ್ಮದ್‌ ಇಬ್ರಾಹಿಂ ಷಾ (15ನೇ ಆರೋಪಿ), ಮುಹಮ್ಮದ್‌ ಎಂ.ಎ. ಅರ ಮಗ, (23 ವರ್ಷ), ಜೀರ್ಮುಖಿ ಹೌಸ್‌, ನೆಲ್ಲೂರು ಕೆಮ್ರಾಜೆ, ಸುಳ್ಯ ತಾಲ್ಲೂಕು, ದಕ್ಷಿಣ ಕನ್ನಡ

16. ಸೈನುಲ್‌ ಆಬೀದ್‌ (16ನೇ ಆರೋಪಿ) (23 ವರ್ಷ), ಯಾಕೂಬ್‌ ಅವರ ಮಗ, ಗಾಂಧಿನಗರ ಹೌಸ್‌, ನಾವೂರು, ಸುಳ್ಯ ತಾಲ್ಲೂಕು, ದಕ್ಷಿಣ ಕನ್ನಡ

17 ಶೇಖ್‌ ಸದ್ದಾಂ ಹುಸ್ಸೇನ್‌ (17ನೇ ಆರೋಪಿ) (28 ವರ್ಷ), ಶೇಖ್‌ ಅಬ್ದುಲ್‌ ರಷೀದ್‌ ಅವರ ಮಗ, ಬೀಡು ಹೌಸ್‌, ಬೆಳ್ಳಾರೆ, ಸುಳ್ಯ ತಾಲ್ಲೂಕು, ದಕ್ಷಿಣ ಕನ್ನಡ

18. ಝಾಕೀರ್‌ ಎ (18ನೇ ಆರೋಪಿ), (30 ವರ್ಷ), ಹನೀಫ್‌ ಅವರ ಮಗ, ಅತ್ತಿಕೆರೆ ಹೌಸ್‌, ಪುತ್ತೂರು ತಾಲ್ಲೂಕು, ದಕ್ಷಿಣ ಕನ್ನಡ

19. ಎನ್‌.ಅಬ್ದುಲ್‌ ಹ್ಯಾರಿಸ್‌ (19ನೇ ಆರೋಪಿ) (40 ವರ್ಷ), ಎನ್‌.ಇಸ್ಮಾಯಿಲ್‌ ಅವ ಮಗ, ಬೋಡು ಹೌಸ್‌, ಬೆಳ್ಳಾರೆ, ಸುಳ್ಯ ತಾಲ್ಲೂಕು, ದಕ್ಷಿಣ ಕನ್ನಡ

20. ತುಫಾಯಿಲ್‌ ಎಂ.ಎಚ್‌. (20ನೇ ಆರೋಪಿ) (36 ವರ್ಷ), ಬೆಹಂದ್‌,ಗದ್ದಿಗೆ, ಮಡಿಕೇರಿ, ಕೊಡಗು ಜಿಲ್ಲೆ.

ತಲೆ ಮರೆಸಿಕೊಂಡಿರುವ ಐವರು ಆರೋಪಿಗಳು

ಆರೋಪಿಗಳಲ್ಲಿ ನಾಲ್ಕನೇ ಆರೋಪಿ ಮುಸ್ತಾಫಾ ಪೈಚಾರು, ಆರನೇ ಆರೋಪಿ ಕೊಡಾಜೆ ಮೊಹಮ್ಮದ್‌ ಷರೀಫ್‌, ಐದನೇ ಆರೋಪಿ ಮಸೂದ್‌ ಕೆ.ಎ, ಏಳನೇ ಆರೋಪಿ ಅಬೂಬಕ್ಕರ್‌ ಸಿದ್ದಿಕ್‌ ಹಾಗೂ 20ನೇ ಆರೋಪಿ ತುಫಾಯಿಲ್‌ ಎಂ.ಎಚ್‌. ತಲೆಮರೆಸಿಕೊಂಡಿದ್ದಾರೆ.

ಇವರ ಕುರಿತು ಸುಳಿವು ನೀಡಿದವರಿಗೆ ಎನ್‌ಐಎ ಬಹುಮಾನ ಘೋಷಣೆ ಮಾಡಿದೆ.


Join The Telegram Join The WhatsApp
Admin
the authorAdmin

Leave a Reply