ಬೆಳಗಾವಿ :
ನಗರದ ಆರ್.ಎಲ್.ಎಸ್ ಮಹಾವಿದ್ಯಾಲಯದಲ್ಲಿ ಡಾ.ಡಿ.ಎಸ್. ಕರ್ಕಿ ಅವರ 116 ಜಯಂತ್ಯುತ್ಸವ ಪ್ರಯುಕ್ತ ಅಂತರ್ ಕಾಲೇಜು ಸಮೂಹ ಭಾವಗೀತೆಗಳ ಸ್ಪರ್ಧೆಯನ್ನು 20 ನವೆಂಬರ್ 2023 ರಂದು ಕಾಲೇಜಿನ ಡಾ. ಸಿ.ವಿ.ರಾಮನ್ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.
ಪ್ರೇರಣಾ ಮಹಾವಿದ್ಯಾಲಯದ ವಿದ್ಯಾರ್ಥಿನಿಯರಾದ ಸಾಕ್ಷಿ, ಅಮೃತಾ, ಅಂಕಿತಾ, ನವ್ಯಾ,ಹಾಗೂ ಖುಷಿ ಭಾಗವಹಿಸಿ ಪ್ರಥಮ ಸ್ಥಾನವನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಡಾ.ಡಿ.ಎಸ್.ಕರ್ಕಿ ಅವರ ಜಯಂತ್ಯುತ್ಸವ ಪ್ರಯುಕ್ತ 22 ನವೆಂಬರ್ ರಂದು ಆರ್. ಎಲ್. ಎಸ್ ಮಹಾವಿದ್ಯಾಲಯದಲ್ಲಿ ಪ್ರಥಮ ಬಹುಮಾನ ಪಡೆದ ಈ ನಾಲ್ವರು ವಿದ್ಯಾರ್ಥಿನಿಯರಿಗೆ ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನ ನೀಡಲಾಯಿತು.
ಮರಾಠಾ ಮಂಡಳ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕಿ ಹಾಗೂ ಸಾಹಿತಿ ವಿಜಯಲಕ್ಷ್ಮೀ ಪುಟ್ಟಿ ಬಹುಮಾನ ವಿತರಣೆ ಮಾಡಿ ಮಾತನಾಡಿದರು.