Join The Telegram | Join The WhatsApp |
ಬೆಳಗಾವಿ –ಬೆಳಗಾವಿಯ ಕೆ. ಎಲ್.ಇ ವಿಶ್ವವಿದ್ಯಾಲಯದ ವಿಶ್ವನಾಥ ಕತ್ತಿ ದಂತ ಮಹಾವಿದ್ಯಾಲಯದ ಸಾರ್ವಜನಿಕ ಆರೋಗ್ಯ ದಂತ ಶಾಸ್ತ್ರ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿ ಡಾ. ಅತ್ರೆ ಜಗದೀಶ್ ಪೈ ಖೋತ್ ಇವರು ದಂತ ವೈದ್ಯಕೀಯ ಕ್ಷೇತ್ರದ ಸಂಶೋಧನೆಗೆ ಲಂಡನ್ನಿನ ಕಿಂಗ್ಸ್ ಕಾಲೇಜಿ ಪ್ರತಿಷ್ಠಿತ “ರಿಚರ್ಡ್ ಲಾ ಅವಾರ್ಡ್ -2022” ಪ್ರಶಾಂಡ್ತೀಯನ್ನು ನೀಡಿ ಪುರಸ್ಕಾರಿಸಿದೆ ಮತ್ತು ಇವರ ಸಂಶೋಧನ ಪ್ರಬಂಧವನ್ನ ಲಂಡನ್ (ಯು ಕೆ ) ಗ್ಲೋಬಲ್ ಚೈಲ್ಡ್ ಡೆಂಟಲ್ ಫೌಂಡ್ ಅಧಿಕೃತ ವೇಬಸೈಟ್ನಲ್ಲಿ ಪ್ರಕಟಿಸಿದೆ.ಇತ್ತೀಚಿಗೆ ಬ್ರೈನಿಯಕ್ ಐ ಪಿ ಸಲೋಷನ್ಸ್ ಆಯೋಜಿಸಿದ್ದ ಇಂಡಿಯನ್ ಬ್ರೈನಿಯಾಕ್ ಇನ್ನೊವೇಷನ್ ಸ್ಪರ್ಧೆ -2022 ಅತ್ಯಂತ ಪರಿಣಾಮಿಕಾರಿ ಪ್ರಶಸ್ತಿಗಾಗಿ ವೈದ್ಯರಿಗೆ ನೀಡುವ ಈ ಪ್ರಶಸ್ತಿಯನ್ನ ಇವರು ಈ ಬಾರಿ ಪಡೆದು ಕೆ ಎಲ್ ಇ ವಿಶ್ವಾವಿದ್ಯಾಲಯಕ್ಕೆ ಗೌರವ ತಂದಿದ್ದಾರೆ.
ನಾವಿನ್ಯತೆಗಳ ಮೂಲಕ ಸೃಜನಶೀಲ ರೀತಿಯಲ್ಲಿ ಸಮಾಜದ ದೊಡ್ಡ ಸವಾಲುಗಳನ್ನ ಪರಿಹರಿಸಲು ತಾಂತ್ರಿಕ ಕ್ರಾಂತಿಕಾರಿಕ ಸೃಜನಶೀಲ ದೃಷ್ಟಿಕೋನಕ್ಕೆ ಇದು ವೇದಿಕೆಯಾಗಿದೆ. ಪ್ರಾಶುಪಾಲರಾದ ಡಾ. ಅಲ್ಕಾ ಕಾಳೆ, ವಿಭಾಗದ ಮುಖ್ಯಸ್ಥರಾದ ಡಾ. ಅನಿಲ್ ಅಂಕೋಲಾ,ಮತ್ತು ಡಾ. ರೊಪಾಲಿ ಸಂಕೇಶ್ವರಿ, ಡಾ. ವಿನುತಾ ಹಂಪಿಹೊಳಿ, ಡಾ. ಸಾಗರ್ ಜಾಳಿಹಳ್, ಸೇರಿದಂತೆ ಸಿಬ್ಬಂದಿ ವರ್ಗದವರು ಇವರಿಗೆ ಸಮರ್ಥ ಮಾರ್ಗದರ್ಶನ ನೀಡಿದ್ದರು.
Join The Telegram | Join The WhatsApp |