ಅಬುಧಾಬಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಬುಧಾಬಿ ಪ್ರವಾಸ ಸಂದರ್ಭದಲ್ಲಿ ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ಮಾತನಾಡುವ ಮೂಲಕ ಗಮನ ಸೆಳೆದಿದ್ದಾರೆ. ಅದರಲ್ಲೂ ಅರಬರ ನಾಡಲ್ಲಿ ಕನ್ನಡದ ಕಂಪನನ್ನು ಪಸರಿಸುವ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ.

ಅಬುಧಾಬಿಯಲ್ಲಿ ನಡೆದ ‘ಅಹ್ಲಾನ್ ಮೋದಿ’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಭಾರತದ ನಾಲ್ಕು ದಕ್ಷಿಣ ರಾಜ್ಯಗಳಲ್ಲಿ ಮಾತನಾಡಿದ್ದಾರೆ. ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಮಾತನಾಡಿ ಖುಷಿ ಪಟ್ಟಿದ್ದಾರೆ. ಈ ಪ್ರದೇಶದಲ್ಲಿ ಕನ್ನಡಿಗರು ಸೇರಿದಂತೆ ದಕ್ಷಿಣ ಭಾರತದ ಹಲವಾರು ಮಂದಿ ಇದ್ದಾರೆ. ಹೀಗಾಗಿ ಅವರಿಗೆ ಖುಷಿ ನೀಡುವ ಉದ್ದೇಶದಿಂದ ನಾಲ್ಕು ಭಾಷೆಗಳಲ್ಲಿ ಮಾತನಾಡಿದ್ದಾರೆ.

ಯುಎಇಯ ವಿವಿಧ ಪ್ರದೇಶಗಳು ಮತ್ತು ಭಾರತದ ವಿವಿಧ ರಾಜ್ಯಗಳ ಜನರು ಸ್ಥಳದಲ್ಲಿ ಜಮಾಯಿಸಿದ್ದಾರೆ ಮತ್ತು “ಪ್ರತಿಯೊಬ್ಬರ ಹೃದಯಗಳು ನನ್ನ ಸಂಪರ್ಕಿಸಿವೆ ಎಂದು ಪಿಎಂ ಮೋದಿ ಹೇಳಿದ್ದಾರೆ

“ಇಂದು ಅಬುಧಾಬಿಯಲ್ಲಿ ನೀವು ಹೊಸ ಇತಿಹಾಸವನ್ನು ರಚಿಸಿದ್ದೀರಿ. ನೀವು ಯುಎಇಯ ಎಲ್ಲಾ ಮೂಲೆಗಳಲ್ಲಿ ಇದ್ದೀರಿ ಹಾಗೂ ಭಾರತದ ವಿವಿಧ ರಾಜ್ಯಗಳಿಂದ ಇಲ್ಲಿಗೆ ಬಂದಿದ್ದೀರಿ. ಆದರೆ ಎಲ್ಲರ ಹೃದಯದೊಂದಿಗೆ ಸಂಪರ್ಕ ಹೊಂದಿದ್ದೇನೆ ಈ ಐತಿಹಾಸಿಕ ಕ್ರೀಡಾಂಗಣದಲ್ಲಿ, ಪ್ರತಿ ಭಾರತೀಯನ ಹೃದಯ ಬಡಿತ, ಪ್ರತಿ ಉಸಿರು, ಪ್ರತಿ ಧ್ವನಿ ಕೇಳುತ್ತಿದೆ. ಭಾರತ-ಯುಎಇ ಸ್ನೇಹವು ದೀರ್ಘಕಾಲ ಬಾಳಲಿ” ಎಂದು ಪ್ರಧಾನಿ ಮೋದಿ ಹೇಳಿದರು.

ನಾನು 140 ಕೋಟಿ ಭಾರತೀಯರಿಂದ ಸಂದೇಶವನ್ನು ನನ್ನೊಂದಿಗೆ ತಂದಿದ್ದೇಣೆ. ಅದು ಸರಳ ಮತ್ತು ಆಳವಾಗಿದೆ – ಭಾರತವು ನಿಮ್ಮ ಬಗ್ಗೆ ಹೆಮ್ಮೆಪಡುತ್ತದೆ” ಎಂದು ಪಿಎಂ ಮೋದಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಹೇಳಿದರು. ನಿಮ್ಮ ಉತ್ಸಾಹವು ‘ಏಕ್ ಭಾರತ್, ಶ್ರೇಷ್ಠ ಭಾರತ್’ ನ ಸುಂದರವಾದ ಚಿತ್ರವನ್ನು ಬಿಡಿಸುತ್ತಿದೆ ಎಂದು ಹೇಳಿದ್ದಾರೆ.

ಸರಿಸುಮಾರು 3.5 ಮಿಲಿಯನ್ ಭಾರತೀಯ ವಲಸಿಗ ಸಮುದಾಯವು ಯುಎಇಯ ಅತಿದೊಡ್ಡ ಜನಾಂಗೀಯ ಸಮುದಾಯವಾಗಿದ್ದು, ದೇಶದ ಜನಸಂಖ್ಯೆಯ ಸುಮಾರು 35 ಪ್ರತಿಶತದಷ್ಟಿದೆ.

ಯುಎಇ ಅಧ್ಯಕ್ಷರನ್ನು “ಸಹೋದರ’ ಎಂದು ಕರೆದ ಪ್ರಧಾನಿ ಮೋದಿ
ಪ್ರಸ್ತುತ ಯುಎಇ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಅಲ್ಲಿನ ಅಧ್ಯಕ್ಷ ಮೊಹಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು ಮತ್ತು ಹಲವಾರು ತಿಳುವಳಿಕಾ ಒಪ್ಪಂದಗಳನ್ನು ವಿನಿಮಯ ಮಾಡಿಕೊಂಡರು. ಯುಎಇ ಅಧ್ಯಕ್ಷರ ಜತೆಗಿನ ಬಾಂಧವ್ಯವನ್ನು ಪುನರುಚ್ಚರಿಸಿದ ಪ್ರಧಾನಿ ಮೋದಿ ಅವರು, ಅವರನ್ನು ತಮ್ಮ ಸಹೋದರ ಎಂದು ಕರೆದರು. ಕಳೆದ ಏಳು ತಿಂಗಳಲ್ಲಿ ನಾವಿಬ್ಬರೂ ಐದು ಬಾರಿ ಭೇಟಿಯಾಗಿ ಮಾತುಕತೆ ನಡಸಿದ್ದೇವೆ ಎಂದು ಹೇಳಿಕೊಂಡರು.

ಸಹೋದರ, ಮೊದಲನೆಯದಾಗಿ, ನಿಮ್ಮ ಆತ್ಮೀಯ ಸ್ವಾಗತಕ್ಕಾಗಿ ನಾನು ನಿಮಗೆ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸಲು ಬಯಸುತ್ತೇನೆ. ಕಳೆದ ಏಳು ತಿಂಗಳಲ್ಲಿ ನಾವು ಐದು ಬಾರಿ ಭೇಟಿಯಾಗಿದ್ದೇವೆ, ಇದು ತುಂಬಾ ಅಪರೂಪ. ನನಗೆ ಏಳು ಬಾರಿ ಇಲ್ಲಿಗೆ ಬರುವ ಅವಕಾಶವೂ ಸಿಕ್ಕಿದೆ … ನಾವು ಪ್ರತಿ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದ ರೀತಿಯಲ್ಲಿ, ಪ್ರತಿಯೊಂದು ಕ್ಷೇತ್ರದಲ್ಲೂ ಭಾರತ ಮತ್ತು ಯುಎಇ ನಡುವೆ ಜಂಟಿ ಸಹಭಾಗಿತ್ವವಿದೆ ಎಂದು ಯುಎಇ ಅಧ್ಯಕ್ಷರೊಂದಿಗಿನ ಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದರು.

ಇದೇ ವೇಳೆ ದೇಶದ ಮೊದಲ ಹಿಂದೂ ದೇವಾಲಯ ನಿರ್ಮಾಣಕ್ಕೆ ನಿರ್ವಹಿಸಿದ ಪ್ರಮುಖ ಪಾತ್ರಕ್ಕಾಗಿ ಯುಎಇ ನಾಯಕರಿಗೆ ಧನ್ಯವಾದ ತಿಳಿಸಿದರು. ನಿಮ್ಮ ಬೆಂಬಲ ಇಲ್ಲದೇ ಬಿಎಪಿಎಸ್ ದೇವಾಲಯ ನಿರ್ಮಾಣ ಸಾಧ್ಯವಾಗುತ್ತಿರಲಿಲ್ಲ ಎಂದು ಪ್ರಧಾನಿ ಮೋದಿ ಅವರು ಹೇಳಿದರು. ಫೆ. 14, ಬುಧವಾರ ಈ ದೇವಾಲಯವನ್ನು ಮೋದಿ ಅವರು ಉದ್ಘಾಟನೆ ಮಾಡಲಿದ್ದಾರೆ.