Join The Telegram | Join The WhatsApp |
ಕೋಲ್ಕತ್ತ/ನವದೆಹಲಿ: ಗುಜರಾತ್‌ನ ಗಾಂಧಿನಗರದಲ್ಲಿ ತಾಯಿ ಹೀರಾಬೆನ್ ಅಂತ್ಯಸಂಸ್ಕಾರ ನೆರವೇರಿಸಿ ಪ್ರಧಾನಿ ನರೇಂದ್ರ ಮೋದಿ ಕರ್ತವ್ಯಕ್ಕೆ ಮರಳಿದ್ದಾರೆ.
ಹೌರಾ ಮತ್ತು ನ್ಯೂ ಜಲಪಾಯ್‌ಗುರಿ ನಡುವಿನ ‘ವಂದೇ ಭಾರತ್ ಎಕ್ಸ್‌ಪ್ರೆಸ್’ ರೈಲಿಗೆ ಚಾಲನೆ ಸೇರಿದಂತೆ ಪಶ್ಚಿಮ ಬಂಗಾಳದ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ.
ಇಂದು ಬೆಳಿಗ್ಗೆ ಅವರು ₹7,800 ಕೋಟಿ ಮೊತ್ತದ ಕಾಮಗಾರಿಗಳಿಗೆ ಚಾಲನೆ ನೀಡಬೇಕಿತ್ತು. ತಾಯಿ ನಿಧನದ ಹಿನ್ನೆಲೆಯಲ್ಲಿ ಅವರು ದಿಢೀರ್ ಅಹಮದಾಬಾದ್‌ಗೆ ತೆರಳಿದ್ದರು.
‘ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಳದ ನಿಗದಿತ ಕಾರ್ಯಕ್ರಮಗಳನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ನೆರವೇರಿಸಲಿದ್ದಾರೆ. ರಾಷ್ಟ್ರೀಯ ಗಂಗಾ ಪರಿಷತ್ ಸಭೆ ಮತ್ತು ಪ್ರಮುಖ ಸಾರಿಗೆ ಸಂಪರ್ಕಕ್ಕೆ ಸಂಬಂಧಿಸಿದ ಕಾಮಗಾರಿಗಳ ಉದ್ಘಾಟನೆಯಲ್ಲಿ ಮೋದಿ ಭಾಗವಹಿಸಲಿದ್ದಾರೆ’ ಎಂದು ಪ್ರಧಾನಿ ಸಚಿವಾಲಯ ಟ್ವೀಟಿಸಿದೆ. ಇದರಲ್ಲಿ ₹2,550 ಕೋಟಿ ವೆಚ್ಚದ ಒಳಚರಂಡಿ ಮೂಲಸೌಕರ್ಯ ಯೋಜನೆಗಳು ಸೇರಿವೆ.
ಕೋಲ್ಕತ್ತಾ ಮೆಟ್ರೋ ರೈಲು ಪರ್ಪಲ್ ಲೈನ್‌ನ ಜೋಕಾ-ತಾರಾಟಾಲಾ ವಿಸ್ತರಣೆ ಮತ್ತು ನ್ಯೂ ಜಲಪಾಯ್‌ಗುರಿ ರೈಲು ನಿಲ್ದಾಣದಲ್ಲಿ ಪುನರಾಭಿವೃದ್ಧಿ ಕೆಲಸಗಳು ಸೇರಿದಂತೆ ಇತರೆ ರೈಲ್ವೆ ಯೋಜನೆಗಳು ಉದ್ಘಾಟನೆಗೊಳ್ಳಲಿವೆ.
ಬಿಜೆಪಿಯ ವಿಚಾರವಾದಿ ಶ್ಯಾಮ ಪ್ರಸಾದ್ ಮುಖರ್ಜಿ ಅವರ ಹೆಸರಿನ ರಾಷ್ಟ್ರೀಯ ನೀರು ಮತ್ತು ನೈರ್ಮಲ್ಯ ಸಂಸ್ಥೆ ಉದ್ಘಾಟನೆಯಾಗಲಿದೆ.
ಮೋದಿ ಅವರು ಕೋಲ್ಕತ್ತಾದಲ್ಲಿ ರಾಷ್ಟ್ರೀಯ ಗಂಗಾ ಪರಿಷತ್ತಿನ (ಎನ್‌ಜಿಸಿ) ಎರಡನೇ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ.
Join The Telegram | Join The WhatsApp |