ದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬಿಜೆಪಿ ಬೂತ್ ಅಧ್ಯಕ್ಷರ ಜೊತೆ ಸಮಾಲೋಚನೆ ನಡೆಸಿದರು. ನಮೋ ಆಪ್ ಮೂಲಕ ಮಾತನಾಡುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೇರಾ ಬೂತ್ ಸಬ್ಸೆ ಮಜಬೂತ್ ಎಂಬ ಕಾರ್ಯಕ್ರಮದಲ್ಲಿ ಬೆಳಗಾವಿಯ ಬಿಜೆಪಿ ಬೂತ್ ನಂಬರ್ 80ರ ಅಧ್ಯಕ್ಷೆ ಶ್ರತಿ ಅಪ್ಟೇಕರ್ ಅವರ ಜೊತೆ ಸುಮಾರು 3.46 ನಿಮಿಷಗಳ ಕಾಲ ಮಾತನಾಡಿದರು. ಬೆಳಗಾವಿ ಸೇರಿದಂತೆ ಕರ್ನಾಟಕದಲ್ಲಿ ಬಿಜೆಪಿ ಬೆಳವಣಿಗೆ ಕುರಿತು ಪ್ರಧಾನಿ ಮೋದಿ ಅವರು ಸಂವಹನ ನಡೆಸಿದರು.

ಚಹಾ ಪೇ ಚರ್ಚಾ ಸೇರಿದಂತೆ ನಿಮ್ಮ ಬೂತ್ ಬಗ್ಗೆ ವಿಚಾರಿಸಿದರು. ಅನ್ನದಾತರ ಕೇಂದ್ರ ಸರ್ಕಾರ ಜಾರಿಗೊಳಿಸಿದ ಯೋಜನೆ ಹಾಗೂ ಸೌಲಭ್ಯ ಕುರಿತು ಮಾತುಕತೆ ನಡೆಸಿದರು.