Join The Telegram | Join The WhatsApp |
ಗೋಕಾಕ :
ವಿಚಾರಣಾಧೀನ ಕೈದಿ ಇಲ್ಲಿನ ಉಪ ಕಾರಾಗೃಹದ ಸೆಲ್ ಹೊರ ಭಾಗದಲ್ಲಿರುವ ಕಟ್ಟಿಗೆಯ ಜಂತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಅಥಣಿ ತಾಲೂಕು ತೆಲಸಂಗ ಗ್ರಾಮದ ಮೋದಿನಾಲಿ ಗೋಟೆ (24 ವರ್ಷ) ಎಂದು ಗುರುತಿಸಲಾಗಿದೆ.
ಈತ ಕೊಲೆ ಪ್ರಕರಣದಲ್ಲಿ ಬಂಧಿತನಾಗಿ ಬೆಳಗಾವಿ ಹಿಂಡಲಗಾ ಜೈಲಿನಲ್ಲಿದ್ದ. 15 ದಿನಗಳ ಹಿಂದಷ್ಟೇ ಹಿಂಡಲಗಾದಿಂದ ಗೋಕಾಕ ಕಾರಾಗೃಹಕ್ಕೆ ಈತನನ್ನು ಕರೆತರಲಾಗಿತ್ತು. ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಗೋಕಾಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Join The Telegram | Join The WhatsApp |