ಬೆಳಗಾವಿ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ಸುವರ್ಣ ಸಂಭ್ರಮ ಹಾಗೂ ರಾಜ್ಯಮಟ್ಟದ 11ನೇ ಬ್ರಾಹ್ಮಣ ಮಹಾಸಮ್ಮೇಳನ ಸಮಿತಿಯ ಉಪಾಧ್ಯಕ್ಷರನ್ನಾಗಿ ಬೆಳಗಾವಿಯ ಪ್ರಿಯಾ ಪುರಾಣಿಕ ಅವರನ್ನು ನೇಮಕ ಮಾಡಲಾಗಿದೆ.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಅಶೋಕ ಹಾರನಹಳ್ಳಿ ಈ ನೇಮಕ ಮಾಡಿದ್ದಾರೆ. 2025ರ ಜನೆವರಿ 18 ಹಾಗೂ 19 ಸುವರ್ಣ ಸಂಭ್ರಮ ಹಾಗೂ ಮಹಾಸಮ್ಮೇಳನ ನಡೆಯಲಿದೆ. ಈ ಕಾರ್ಯಕ್ರಮದ ಹಿನ್ನೆಲೆಯಲ್ಲಿ ವಿಪ್ರರನ್ನು ಸಂಘಟಿಸುವುದು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮಾಡಬೇಕೆಂದು ಅಶೋಕ ಹಾರನಳ್ಳಿ ಸೂಚಿಸಿದ್ದಾರೆ.