ಗೆಲುವಿನ ನಗೆ ಬೀರಿದ ಪ್ರಿಯಂಕಾ ಜಾರಕಿಹೊಳಿ-ರಾಷ್ಟ್ರ ರಾಜಕಾರಣಕ್ಕೆ ಎಂಟ್ರಿ ಕೊಟ್ಟ ಜಾರಕಿಹೊಳಿ ಕುಟುಂಬದ ಮೂರನೇ ತಲೆಮಾರು

ಬೆಳಗಾವಿ: ಪ್ರತಿಯೊಬ್ಬ ಸಾಧಕರ ಹಿಂದೆಯೂ ಒಬ್ಬ ಮಹಿಳೆ ಇರುತ್ತಾಳೆ ಎಂಬುವುದು ಸರ್ವೆ ಸಾಮಾನ್ಯ ಸಂಗತಿ. ಆದರೆ ಇಲ್ಲಿ ಪುತ್ರಿ ಸಾಧನೆ ಹಿಂದೆ ತಂದೆ ಇರುವುದು ಅಪರೂಪ.. ಅಂದ ಹಾಗೆ ನಾವು ಹೇಳುತ್ತಿರುವುದು ಬೇರ್ಯಾರದ ವಿಷಯವಲ್ಲ. ಅದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರ ಪುತ್ರಿ ಪ್ರಿಯಂಕಾ ಜಾರಕಿಹೊಳಿ ಸಾಧನೆ ಹಾಗೂ ಅವರ ಹಾದಿಯು ಕುರಿತು.
ಹೌದು… ಪ್ರಿಯಂಕಾ ಜಾರಕಿಹೊಳಿ ಯಾರು ಎನ್ನುವುದಕ್ಕೆ ಇಂಟ್ರೊಡಕ್ಷನ್‌ ಬೇಕಾಗಿಲ್ಲ. ಯಾಕೆಂದರೆ ಅವರ ತಂದೆ ಸತೀಶ್‌ ಜಾರಕಿಹೊಳಿ ಬೆಳಗಾವಿ ರಾಜಕಾರಣದ ಶಕ್ತಿಶಾಲಿ ಹೆಸರು. ಹಾಗಂತ, ಪ್ರಿಯಂಕಾ ಜಾರಕಿಹೊಳಿ ಕೇವಲ ಅಪ್ಪನ ನೆರಳಲ್ಲೇ ಬೆಳೆದು ಬಂದವರಲ್ಲ. ರಾಜಕಾರಣಿಯ ಮನೆಯಲ್ಲಿ ಹುಟ್ಟಿದ ಮಾತ್ರಕ್ಕೆ ಎಲ್ಲರೂ ಚತುರ ರಾಜಕಾರಣಿಗಳಾಗುವುದಿಲ್ಲ. ತಮ್ಮದೇ ಆದ ಪ್ರತಿಭೆ, ಶಕ್ತಿಯನ್ನು ಹೊಂದಿರಬೇಕಾಗುತ್ತದೆ. ಹಾಗೆ ತಮ್ಮದೇ ಆದ ಶೈಲಿಯ ಮೂಲಕ ರಾಜಕಾರಣದ ಪಟ್ಟುಗಳನ್ನು ಕಲಿತುಕೊಂಡು ಅಖಾಡಕ್ಕೆ ಇಳಿದು ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಗೆದ್ದು ಭಾರತದಲ್ಲಿ ಅತಿ ಕಿರಿಯ ಸಂಸದೆ ಎಂಬ ಕೀರ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ರಾಜಕಾರಣಿ ಮಕ್ಕಳು ಎಂದರೆ ಸಾಕು ದೌಲತ್ತಿನಲ್ಲೇ ಬದುಕು ಸಾಗಿಸುವವರು ಜಾಸ್ತಿ. ಅಂತಹದರಲ್ಲಿ ಸಾಮಾನ್ಯರಲ್ಲಿ ಅಸಾಮಾನ್ಯ ವ್ಯಕ್ತಿತ್ವ ರೂಪಿಸಿಕೊಂಡವರು ವಿರಳ. ಆದರೆ ಇವೆಲ್ಲದಕ್ಕೂ ಭಿನ್ನವಾಗಿ ನಿಂತಿರುವುದು ಸಚಿವ ಸತೀಶ್ ಜಾರಕಿಹೊಳಿ‌‌ ಕುಟುಂಬದ ಕುಡಿ. ಸದ್ಯ ಜಾರಕಿಹೊಳಿ ಕುಟುಂಬದ ಮೂರನೇ ತಲೆಮಾರು ಸಧ್ಯ ರಾಷ್ಟ್ರ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದು, ದೇಶದಲ್ಲೆ ಅತಿ ಚಿಕ್ಕ ವಯಸ್ಸಿನಲ್ಲಿಯೇ ಎಂಪಿಯಾಗಿ ದಾಖಲೆ ಬರೆದು ಪ್ರಿಯಂಕಾ ಜಾರಕಿಹೊಳಿ ಅವರು ಇನ್ನೊಬ್ಬರಿಗೆ ಸ್ಪೂರ್ತಿದಾಯಕರಾಗಿದ್ದಾರೆ.
ಕೇವಲ 27 ವರ್ಷಕ್ಕೇ ಎಂಪಿಯಾದ ಪ್ರಿಯಂಕಾ: ಭಾರತದಲ್ಲಿ ಕಿರಿಯ ವಯಸ್ಸಿನ ಎಂಪಿಯಾಗಿ ಪ್ರಿಯಂಕಾ ಜಾರಕಿಹೊಳಿ ದಾಖಲೆ ಮಾಡುವ ಮೂಲಕ ಎಲ್ಲರನ್ನು ಹುಬ್ಬೆರಿಸುವಂತೆ ಮಾಡಿದ್ದಾರೆ. ಚುನಾವಣೆಯಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದ್ದರೂ, ಕೇವಲ 27 ನೇ ವಯಸ್ಸಿನಲ್ಲಿ, ಅವರು ಚಿಕ್ಕೋಡಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ್‌ ಜೊಲ್ಲೆ ಅವರನ್ನು ಸೋಲಿಸಿ ಭಾರತದಲ್ಲಿ ಅತಿ ಕಿರಿಯ ಸಂಸದೆ ಎಂಬ ಕೀರ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಪ್ರಿಯಂಕಾಗೆ ಈ ಹೆಸರು ಇಟ್ಟಿದ್ದು ಯಾಕೆ? ಪ್ರಿಯಂಕಾ ಜಾರಕಿಹೊಳಿ ಅವರು ರಾಜ್ಯ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾಗಿರುವ ಸತೀಶ್‌ ಜಾರಕಿಹೊಳಿ ಮತ್ತು ಶಕುಂತಲಾ ದಂಪತಿಯ ಪುತ್ರಿ. ಪ್ರಿಯಂಕಾ ಅವರಿಗೆ ರಾಹುಲ್‌ ಜಾರಕಿಹೊಳಿ ಎಂಬ ತಮ್ಮ ಇದ್ದಾರೆ. ಸತೀಶ್‌ ಜಾರಕಿಹೊಳಿ ಅವರು ತಮ್ಮ ಮಕ್ಕಳಿಗೆ ಪ್ರಿಯಂಕಾ ಮತ್ತು ರಾಹುಲ್‌ ಎಂಬ ಹೆಸರನ್ನು ಇಟ್ಟಿರುವುದರ ಹಿಂದೆ ರಾಜೀವ್‌ ಮತ್ತು ಸೋನಿಯಾ ಗಾಂಧಿ ಅವರ ಪ್ರಭಾವವಿದೆ ಎನ್ನಲಾಗಿದೆ. ಸೋನಿಯಾ ಗಾಂಧಿ ಅವರ ಮಕ್ಕಳಾದ ಪ್ರಿಯಂಕಾ ಮತ್ತು ರಾಹುಲ್‌ ಅವರ ಹೆಸರನ್ನೇ ಇವರಿಗೂ ಇಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಪ್ರಿಯಂಕಾ ಜಾರಕಿಹೊಳಿ ವಿವಿರ: ನೂತನ ಎಂಪಿಯಾಗಿ ಆಯ್ಕೆಯಾಗಿರುವ ಪ್ರಿಯಂಕಾ ಜಾರಕಿಹೊಳಿ ಅವರಿಗೆ ಈಗ 27 ವರ್ಷ. ಅವರು ಹುಟ್ಟಿದ್ದು 1997ರ ಏಪ್ರಿಲ್‌ 16ರಂದು. ಪ್ರಿಯಂಕಾ ಓದಿದ್ದು ಎಂಬಿಎ. ಪದವಿದರೆ. ಬೆಳಗಾವಿ ರಾಜಕಾರಣದ ದೊಡ್ಮನೆ ಹುಡುಗಿಯಾದರೂ ಆಕೆ ಮನೆಯ ಮುದ್ದಿನ ಮಗಳಾಗಿ ಮನೆಯೊಳಗೇ ಬೆಳೆದಿಲ್ಲ. ಎಂಬಿಎ ವಿದ್ಯಾಭ್ಯಾಸದ ಮೂಲಕ ಅವರು ವ್ಯವಹಾರ ಚತುರತೆಯನ್ನೂ ಬೆಳೆಸಿಕೊಂಡಿದ್ದಾರೆ. ಸತೀಶ ಶುಗರ್ ಲಿಮಿಟೆಡ್, ಬೆಳಗಮ್ ಶುಗರ್ ಪ್ರೈವೇಟ್ ಲಿಮಿಟೆಡ್, ಗಾಡಿಗಾಂವ್ ರೆಸಾರ್ಟ್ ಪ್ರೈವೇಟ್ ಲಿಮಿಟೆಡ್, ವೆಸ್ಟರ್ನ್ ಗ್ರಾಟ್ಸ್ ಇನ್ಫ್ರಾ ಲಿಮಿಟೆಡ್, ನೇಚರ್ ನೆಸ್ಟ್ ಹಾರ್ಟಿಕಲ್ಚರ್, ಆಂಡ್ ಫಾರ್ಮ್ಸ್ ಪ್ರೈವೇಟ್ ಲಿಮಿಟೆಡ್ ಸೇರಿ 14 ಸಂಘ ಸಂಸ್ಥೆಗಳ ನಿರ್ದೇಶಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಸದ್ಯ ನೂತನ ಸಂಸದೆಯಾಗಿ ಆಯ್ಕೆಯಾಗುವ ಮೂಲಕ ದಾಖಲೆ ಬರೆದಿದ್ದಾರೆ.

ತಂದೆಯ ಹಾಗೆ ಸರಳತೆಯಲ್ಲಿ ಅತಿ ಸರಳ ಪ್ರಿಯಂಕಾ: ಪ್ರಿಯಂಕಾ ಬಡವರ ಬಗ್ಗೆ ಕಾಳಜಿ ಹೊಂದಿರುವ ಹುಡುಗಿ. ಜನ ಕಲ್ಯಾಣಕ್ಕಾಗಿ ಎನ್‌ಜಿಒಗಳನ್ನು ನಡೆಸುತ್ತಿದ್ದಾರೆ. ಅದರ ಜತೆಗೆ ಪರಿಸರಕ್ಕಾಗಿಯೂ ಎನ್‌ಜಿಒಗಳಿವೆ. ಒಬ್ಬ ಹಿರಿಯ ನಾಯಕರ ಮಗಳಾಗಿದ್ದರೂ ಅವರ ಜನರ ನಡುವೆ ಸಿಂಪಲ್‌ ಆಗಿ ವ್ಯವಹರಿವುದು ವಿಶೇಷ. ಹೆಚ್ಚು ಒಡವೆ ಧರಿಸದೆ ಸಾಮಾನ್ಯ ದಿರಿಸಿನಲ್ಲೇ ಸಾಮಾಜಿಕವಾಗಿ ಕಾಣಿಸಿಕೊಳ್ಳುವ ಈ ಹುಡುಗಿ. ಸಿಂಪ್ಲಿಸಿಟಿ ಯಾಗಿರುವುದು ಪ್ರಿಯಂಕಾ ಇನ್ನೊಂದು ವಿಶೇಷತೆ. ಸಚಿವ ಸತೀಶ ಜಾರಕಿಹೊಳಿ ಅವರಂತೆ ಪ್ರಿಯಂಕಾ ಜಾರಕಿಹೊಳಿಯವರು ಅತ್ಯಂತ ಆದರ್ಶಮಯ-ಪರಿಪೂರ್ಣವಾದ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡು ಬಂದಿದ್ದಾರೆ. ತಮ್ಮ ತಂದೆಯವರು ಹಾಕಿಕೊಟ್ಟ ದಾರಿಯಲ್ಲಿ ಮುನ್ನೆಡೆಯುತ್ತಿದ್ದು, ಬಡವರು, ಜನ ಸಾಮಾನ್ಯರ ಜತೆ ಸಾಮಾನ್ಯರಂತೆ ಬೆರೆಯುವ ಅಪರೂಪದ ಗುಣವನ್ನು ಪ್ರಿಯಂಕಾ ಜಾರಕಿಹೊಳಿಯವರು ಮೈಗೂಡಿಸಿಕೊಂಡಿದ್ದಾರೆ. ಜನತೆಯ ಕಷ್ಟಕ್ಕೆ ಸದಾ ಮಿಡಿಯುವ ಯುವ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ಯುವಜನರಿಗೆ ಉತ್ಸಾಹಿ, ಸ್ಫೂರ್ತಿದಾಯಕ ಯುವತಿಯಾಗಿ ಹೊರಹೊಮ್ಮಿದ್ದಾರೆ.

ಜನರ ಮನದಲ್ಲಿ ಮಿಂಚುತ್ತಿರುವ ನಾಯಕಿ: ಸಂಕಷ್ಟಕ್ಕೆ ಸ್ಪಂದಿಸುವಂತ ಸಹೃದಯಿ, ಕಲೆ, ಸಾಹಿತ್ಯ, ಕ್ರೀಡೆ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿ ಉತ್ತರ ಕರ್ನಾಟಕದ ಪ್ರತಿಭೆಗಳಿಗೆ ರಾಜ್ಯಮಟ್ಟದ ವೇದಿಕೆ ಕಲ್ಪಿಸಿಕೊಟ್ಟು ಸರ್ವರಿಗೂ ಚಿರಪರಿಚಿತವಾದ ಯುವತಿ ಕಣ್ಮಣಿಯೇ ಪ್ರಿಯಂಕಾ ಜಾರಕಿಹೊಳಿ. ಲೋಕೋಪಯೋಗಿ ಸಚಿವ, ಯಮಕನಮರಡಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಸತೀಶ ಜಾರಕಿಹೊಳಿ ಅವರ ಸುಪುತ್ರಿಯಾದ ಪ್ರಿಯಂಕಾ ಅವರು ರಾಜಕೀಯ ಪ್ರತಿಷ್ಠಿತ ಕುಟುಂಬದಿಂದ ಬಂದರೂ ಸಾಮಾಜಿಕ ಸೇವೆಯಿಂದಲೇ ಜಿಲ್ಲೆಯಲ್ಲಿ ಜನರ ಮನದಲ್ಲಿ ಯುವರಾಣಿಯಾಗಿ ಮಿಂಚುತ್ತಿದ್ದಾರೆ. ಒಟ್ಟಾರೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಮತ ಪಡೆಯುವ ಮೂಲಕ ಜೊಲ್ಲೆ ಅವರನ್ನು ಕಣದಿಂದ ಹೊರಗಟ್ಟಿ ಸಾಧನೆ ಮಾಡುವ ಮೂಲಕ ದೇಶದಲ್ಲೇ ಅತಿ ಚಿಕ್ಕ ವಯಸ್ಸಿನ ಸಂಸದೆ ಎಂಬ ದಾಖಲೆಯನ್ನ ತಮ್ಮದಾಗಿಸಿಕೊಂಡು ಉತ್ತರ ಕರ್ನಾಟಕದ ಹೆಸರು ರಾರಾಜಿಸುವಂತೆ ಮಾಡಿದ್ದಾರೆ. ಇವರ ಈ ಸಾಧನೆಗೆ ಹಿರಿಯರಿಂದ ಹಿಡಿದು ಕಿರಿಯರವರೆಗೆ ಶುಭಾಷಯಗಳ ಮಹಾಪೂರವೇ ಹರಿದು ಬರುತ್ತಿದೆ