ನವದೆಹಲಿ: ಸಾರಾಬಾಯ್ ವರ್ಸಸ್ ಸಾರಾಭಾಯ್, ಅನುಪಮಾ ಧಾರಾವಾಹಿಗಳಲ್ಲಿ ತಮ್ಮ ಪಾತ್ರಗಳ ಮೂಲಕ ಖ್ಯಾತಿ ಗಳಿಸಿರುವ ಖ್ಯಾತ ಕಿರುತೆರೆ ನಟಿ ರೂಪಾಲಿ ಗಂಗೂಲಿ ಹಾಗೂ ಮಹಾರಾಷ್ಟ್ರದ ಪ್ರಖ್ಯಾತ ಜ್ಯೋತಿಷಿ ಅಮೇಯಾ ಜೋಶಿ ಬುಧವಾರ ಬಿಜೆಪಿ ಸೇರಿದ್ದಾರೆ. ಈ ನಡುವೆ ರೂಪಾಲಿ ಉತ್ತರಪ್ರದೇಶದ ರಾಯ್‌ಬರೇಲಿಯಲ್ಲಿ ಪ್ರಿಯಾಂಕಾ ಕಣಕ್ಕೆ ಇಳಿದರೆ ಅವರ ವಿರುದ್ಧ ರೂಪಾಲಿ ಅವರನ್ನು ಕಣಕ್ಕೆ ಇಳಿಸಲು ಬಿಜೆಪಿ ಚಿಂತಿಸಿದೆ ಎಂದು ವರದಿಗಳು ಹೇಳಿವೆ.

ನಟಿ ರೂಪಾಲಿ ಗಂಗೂಲಿ ಬುಧವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಎಲ್ಲರನ್ನೂ ಬಿಜೆಪಿಯತ್ತ ಆಕರ್ಷಿಸುವ ಏಕೈಕ ವ್ಯಕ್ತಿತ್ವ ಪ್ರಧಾನಿ ಮೋದಿ. ಅವರ ಕಾರ್ಯ ವೈಖರಿ ಮತ್ತು ನಮ್ಮ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ರೀತಿ ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಿದೆ. ಅಭಿವೃದ್ಧಿಯ ಈ ‘ಮಹಾಯಜ್ಞ’ವನ್ನು ನೋಡಿದಾಗ ನಾನು ಸಹ ಇದರಲ್ಲಿ ಪಾಲ್ಗೊಳ್ಳಬೇಕು ಎಂದು ನನಗೆ ಅನಿಸಿತು. ಹಾಗಾಗಿ ಬಿಜೆಪಿಗೆ ಸೇರಿದ್ದೇನೆ.
ನಾನು ಸಹ ‘ಮೋದಿ ಸೇನೆ’ಗೆ ಸೇರ್ಪಡೆಯಾಗುವ ಮೂಲಕ ದೇಶಕ್ಕೆ ನನ್ನದೇ ಆದ ಕೊಡುಗೆ ನೀಡಲು ಬಯಸುತ್ತೇನೆ ಎಂದು ರೂಪಾಲಿ ಗಂಗೂಲಿ ಹೇಳಿದ್ದಾರೆ.