ಬೆಳಗಾವಿ: ಇಲ್ಲಿಯ ಸಾರ್ವಜನಿಕ ವಾಚನಾಲಯದ ವತಿಯಿಂದ ನೀಡಲಾಗುವ 2024ನೇ ಸಾಲಿನ ಉತ್ತಮ ಪತ್ರಕರ್ತ ಪ್ರಶಸ್ತಿ ಮರಾಠಿ ವಿಭಾಗದಲ್ಲಿ ಸಂಜಯ ಸೂರ್ಯವಂಶಿ ಅವರಿಗೆ ಲಭಿಸಿದೆ
ಸಂಜಯ ಸೂರ್ಯವಂಶಿ ಅವರ ಪರಿಚಯ : ಸಂಜಯ ಸೂರ್ಯವಂಶಿ ಅವರು, ಸಾಂಗ್ಲಿಯಲ್ಲಿ ತರುಣ ಭಾರತದಲ್ಲಿ ನಾಲ್ಕು ವರ್ಷಗಳ ಕಾಲ ನಗರ ವರದಿಗಾರಿಕೆ, ಬೆಳಗಾವಿ
ಸಕಾಳ ದಿನ ಪತ್ರಿಕೆಯಲ್ಲಿ ಹನ್ನೆರಡು ವರ್ಷ ವರದಿಗಾರಿಕೆ ಮತ್ತು ಉಪಸಂಪಾದಕರು, ಬೆಳಗಾವಿ
ಪುಡಾರಿ ದಿನ ಪತ್ರಿಕೆಯಲ್ಲಿ ಕಳೆದ ಆರು ವರ್ಷಗಳಿಂದ ಸುದ್ದಿ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮರಾಠಿ ಪತ್ರಿಕೋದ್ಯಮದಲ್ಲಿ ಕಳೆದ 22 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸೂರ್ಯವಂಶಿ ಅವರು ಬೆಳಗಾವಿಯಲ್ಲಿ ಕನ್ನಡ ಹಾಗೂ ಮರಾಠಿ ಪತ್ರಕರ್ತರ ನಡುವೆ ಸ್ನೇಹ ಸೇತುವೆಯಂತಿದ್ದಾರೆ.ಅಥಣಿ ತಾಲೂಕಿನ ಹುಲಗಬಾಳಿ ಗ್ರಾಮದವರಾದ ಅವರು ಸದ್ಯ ಬೆಳಗಾವಿ ಶಾಹುನಗರದ ನಿವಾಸಿಯಾಗಿದ್ದಾರೆ.
ಭಾರತಿ ವಿದ್ಯಾಪೀಠ ಸಾಂಗ್ಲಿಯಲ್ಲಿ
ಬಿಕಾಂ ಮುಗಿಸಿ, ಟಿಳಕ ಮಹಾರಾಷ್ಟ್ರ ವಿದ್ಯಾಪೀಠ ಪುಣೆಯಲ್ಲಿ ಪತ್ರಿಕೋದ್ಯಮ ಪದವಿ ಪಡೆದುಕೊಂಡು ಸದ್ಯ ಬೆಳಗಾವಿಯಲ್ಲಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸುತ್ತಾ ಜನರ ಧ್ವನಿಯಾಗಿದ್ದಾರೆ.ಕಬ್ಬಿಗೆ ಅತ್ಯಧಿಕ ಬೆಲೆ ಸಿಗುವಂತೆ ಮತ್ತು ಸಮಯಕ್ಕೆ ಸರಿಯಾಗಿ ಸಿಗುವಂತೆ ಖಚಿತಪಡಿಸಿಕೊಳ್ಳಲು ಬೆಳಗಾವಿ ಜಿಲ್ಲೆಯ ರೈತರು ಮತ್ತು ಕಬ್ಬು ಬೆಳೆಗಾರರ ಸಮಸ್ಯೆಗಳ ಕುರಿತು ವ್ಯಾಪಕ ಬರಹಗಳನ್ನು ಅವರು ಬರೆದಿದ್ದಾರೆ. ಬೆಳಗಾವಿ ನಗರ ಮತ್ತು ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಭೂ ಮಾಫಿಯಾ ಬಗ್ಗೆ ಬರೆಯುವುದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವವರೆಗೆ ಬರವಣಿಗೆಯ ಮೂಲಕ ನಿರಂತರ ಮೇಲ್ವಿಚಾರಣೆ, ಅಪರಾಧ ವಲಯದಲ್ಲಿನ ಬೆಳವಣಿಗೆಗಳ ಕುರಿತು ವರದಿ ಮಾಡುವುದು, ಬೆಳಗಾವಿ ನಗರದ ಪೊಲೀಸರಿಗೆ ಮನೆಗಳು ಸಿಗುವಂತೆ ಮಾಡುವಲ್ಲಿ ಅವರ ಬರಹಗಳು ಜನಪ್ರಿಯವಾಗಿವೆ.
ಸರ್ಕಾರಿ ಕಚೇರಿಗಳು, ಸರ್ಕಾರಿ ಅಧಿಕಾರಿಗಳು ಮತ್ತು ಸಹಕಾರಿ ಸಂಘಗಳು, ಕೃಷಿ ಸಾಲ ಬ್ಯಾಂಕುಗಳಲ್ಲಿನ ಭ್ರಷ್ಟಾಚಾರವನ್ನು ಬಹಿರಂಗಪಡಿಸುವ ಮೂಲಕ ಸಾಮಾನ್ಯ ಜನರಿಗೆ ನ್ಯಾಯ ಒದಗಿಸಲು ನಿರಂತರ ಪ್ರಯತ್ನಗಳನ್ನು ಮಾಡಿದ್ದಾರೆ. ಜನ ಸಾಮಾನ್ಯರಿಗೂ ಅರ್ಥವಾಗುವ ಸರಳ ಮತ್ತು ಸುಲಭ ಭಾಷೆಯಲ್ಲಿ ಬರೆಯುವ ಮೂಲಕ ಸದಾ ಜನಸಾಮಾನ್ಯರ ಧ್ವನಿಯಾಗಲು ಶ್ರಮಿಸುತ್ತಿದ್ದಾರೆ.ಜನರ ಸಮಸ್ಯೆಗಳ ಬಗ್ಗೆ ಅಪಾರ ಕಾಳಜಿ ಕಳಕಳಿ ಹೊಂದಿರುವ ಇವರು, ಅತ್ಯಂತ ಕಠಿಣ ಪರಿಶ್ರಮದ ಮೂಲಕ ಜೀವನದಲ್ಲಿ ಮೇಲೆ ಬಂದವರು. ಕ್ರಿಯಾಶೀಲ ಹಾಗೂ ಸ್ನೇಹ ಸಂಪನ್ನ ವ್ಯಕ್ತಿತ್ವದ ಮೂಲಕ ಎಲ್ಲರ ಪ್ರೀತಿ ಸಂಪಾದಿಸಿದ್ದಾರೆ.