ಬೆಳಗಾವಿ :
ಸ್ತೀ ಸಂವೇದನೆಗೆ ಭಾಷೆಗಳ ಗಡಿ ಇರುವುದಿಲ್ಲ. ಸ್ತ್ರೀ ಸಂವೇದನೆಯುಳ್ಳ ಕಾವ್ಯವು ಪ್ರಸ್ತುತ ಸಾಹಿತ್ಯ ವಲಯದಲ್ಲಿ ಹೆಚ್ಚು ಚರ್ಚೆಗೊಳಗಾಗುತ್ತಿದೆ ಎಂದು ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯ ಮುಖ್ಯಸ್ಥ ಪ್ರೊ. ಎಸ್ . ಎಂ. ಗಂಗಾಧರಯ್ಯ ಅಭಿಪ್ರಾಯಪಟ್ಟರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯು ಪಂಪ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ನಿಮಿತ್ತ ಬಹುಭಾಷಾ ಕಾವ್ಯೋತ್ಸವದಲ್ಲಿ ಮಾತನಾಡಿದರು.
ಕಾವ್ಯಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಪ್ರೊ. ಎಸ್. ಎಂ. ಗಂಗಾಧರಯ್ಯ ಮಾತನಾಡಿ, ಭಾರತೀಯ ಎಲ್ಲಾ ಭಾಷೆಗಳಲ್ಲೂ ಸ್ತೀ ಸಂವೇದನೆ ಇಂದಿನ ಕಾವ್ಯದ ಮೂಲ ಧಾತುವಾಗಿದೆ. ಸ್ತ್ರೀಯನ್ನು ಎರಡನೆಯ ದರ್ಜೆಯಲ್ಲಿ ನೋಡುವ ದೃಷ್ಟಿಕೋನವು ಬದಲಾಗಬೇಕಾಗಿದೆ. ಮಹಿಳೆಯೆಂದು ಸ್ತ್ರೀಯನ್ನು ನೋಡುವುದಕ್ಕಿಂತ ಮುಖ್ಯವಾಗಿ ಮಾನವೀಯ ನೆಲೆಯ ಮೂಲಕ ಮಹಿಳೆಯನ್ನು ನೋಡುವ ದೃಷ್ಟಿಕೋನ ಪ್ರಸ್ತುತ ಸಂದರ್ಭದಲ್ಲಿ ಬರಬೇಕಾಗಿದೆ. ಇಂದು ವಾಚನ ಮಾಡಿದ ಕವಿತೆಗಳು ಸ್ತ್ರೀ ಸಂವೇದನೆಯ ಪ್ರಮೇಯವನ್ನು ಕೇಂದ್ರವಾಗಿಟ್ಟುಕೊಂಡು ನಿರೂಪಿತವಾಗಿವೆ. ಸ್ತ್ರೀಯ ಸಾಮರ್ಥ್ಯ ಸಂವರ್ಧನೆಯ ಭಾಗವಾಗಿ ಇಂದು ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದರು.
ಕಾವ್ಯೋತ್ಸವದಲ್ಲಿ ಆರು ಭಾಷೆಗಳ ಮೂವತ್ತಕ್ಕೂ ಹೆಚ್ಚು ಕವಿಗಳು ಪಾಲ್ಗೊಂಡಿದ್ದರು. ಕನ್ನಡ, ಇಂಗ್ಲಿಷ್, ಮರಾಠಿ, ಹಿಂದಿ ಹಾಗೂ ಉರ್ದು ಭಾಷೆಗಳಲ್ಲಿ ಕವಿತೆಗಳನ್ನು ವಾಚನ ಮಾಡಿದರು. ಈ ಎಲ್ಲಾ ಕವಿತೆಗಳು ಸ್ತ್ರೀ ಸಂವೇದನೆಯ ವಿಭಿನ್ನ ನೆಲೆಗಳ ಮೇಲೆ ಬೆಳಕು ಚೆಲ್ಲಿದವು.
ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಪ್ರೊ. ಎಸ್. ಬಿ. ಆಕಾಶ, ಭಾಷಾ ನಿಕಾಯದ ಡೀನ್ ಪ್ರೊ. ವಿ. ಎಫ್. ನಾಗಣ್ಣವರ, ಮರಾಠಿ ವಿಭಾಗದ ಪ್ರೊ. ಸಿ. ಎನ್. ವಾಘಮಾರೆ, ಪ್ರೊ. ಮನೀಷಾ ನೇಸರಕರ, ಡಾ. ಮೈಜುದ್ದೀನ ಮುತಾವಲಿ ಹಾಗೂ ಡಾ. ಸಂಜಯ ಕಾಂಬಳೆ, ಅಪರಾಧಶಾಸ್ತ್ರ ವಿಭಾಗದ ಪ್ರೊ. ರಿಯಾಜಅಹ್ಮದ ಮನಗೂಳಿ, ಶ್ರೀ. ಚಂದ್ರಶೇಖರ ಎಸ್. ವಿ., ಸಮಾಜ ಕಾರ್ಯ ವಿಭಾಗದ ಪ್ರೊ. ಅಶೋಕ ಡಿಸೋಜಾ, ಕನ್ನಡ ವಿಭಾಗದ ಪ್ರೊ. ಗುಂಡಣ್ಣ ಕಲಬುರ್ಗಿ, ಡಾ. ಗಜಾನನ ನಾಯ್ಕ, ದ್ವಿತೀಯ ದರ್ಜೆ ಗುಮಾಸ್ತ ಫಕೀರಪ್ಪ ಸೊಗಲದ, ಇಂಗ್ಲೀಷ್ ವಿಭಾಗದ ಡಾ. ಮಧುಶ್ರೀ ಕಳ್ಳಿಮನಿ ಹಾಗೂ ಡಾ. ಪೂಜಾ ಹಲ್ಯಾಳ, ಸಂಶೋಧನಾರ್ಥಿಗಳಾದ ಶ್ರೀದೇವಿ ಭಾವಿ, ಸಂತೋಷ ನಾಯಿಕ, ಸ್ನಾತಕೋತ್ತರ ಕನ್ನಡ ವಿಭಾಗದ ವಿದ್ಯಾರ್ಥಿಗಳಾದ ಚೈತ್ರಾ ಪಾಟೀಲ ಹಾಗೂ ಮಲ್ಲಿಕಾರ್ಜುನ ಪೂಜಾರಿ, ಮರಾಠಿ ವಿಭಾಗದ ವಿದ್ಯಾರ್ಥಿಗಳಾದ ಸುವರ್ಣಾ ಪಾಟೀಲ, ಪೂಜಾ ಕಾಂಬಳೆ, ಸುಲೋಚನಾ ಜಾಧವ, ಇಂಗ್ಲೀಷ ವಿಭಾಗದ ಅಂಬರೀಷ, ಸುಶ್ಮಿತಾ, ಪ್ರವೀಣ, ಅರ್ಥಶಾಸ್ತ್ರ ವಿಭಾಗದ ಅನಿಲ ತಳ್ಳಿ ಅವರು ತಮ್ಮ ಕವನಗಳನ್ನು ವಾಚಿಸಿದರು.
ಬಹುಭಾಷಾ ಕಾವ್ಯೋತ್ಸವದ ಸಂಚಾಲಕ ಡಾ. ಶೋಭಾ ನಾಯಕ ಕವಿತೆಯನ್ನು ಓದುವುದರ ಜೊತೆಗೆ ಕಾರ್ಯಕ್ರಮವನ್ನು ನಿರೂಪಿಸಿದರು. ಇತ್ತೀಚಿಗೆ ಪ್ರಕಟವಾದ ಅವರ ಶಯ್ಯಾಗೃಹದ ಸುದ್ದಿಗಳು ಎಂಬ ಕವನ ಸಂಕಲನವು ಹೊಸ ಸಂವೇದನೆಯನ್ನೊಳಗೊಂಡ ಕಾವ್ಯವಾಗಿದೆ. ಇದು ಕರ್ನಾಟಕದಲ್ಲಿ ಅತೀ ಹೆಚ್ಚು ಚರ್ಚೆಗೊಳಗಾಗುವುದರ ಜೊತೆಗೆ ಹಲವು ಪ್ರಶಸ್ತಿಗಳಿಗೆ ಭಾಜನವಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಸನ್ಮಾನಿಸಲಾಯಿತು. ವಿಜ್ಞಾನ ನಿಕಾಯದ ಹಿರಿಯ ಪ್ರಾಧ್ಯಾಪಕ ಪ್ರೊ. ವಿ. ಎಸ್. ಶಿಗೇಹಳ್ಳಿ, ಕನ್ನಡ ವಿಭಾಗದ ಅಧ್ಯಾಪಕರಾದ ಡಾ. ಹನುಮಂತಪ್ಪ ಸಂಜೀವಣ್ಣನವರ, ಡಾ. ಮಹೇಶ ಗಾಜಪ್ಪನವರ, ಡಾ. ಪಿ. ನಾಗರಾಜ ಕಾವ್ಯೋತ್ಸವದಲ್ಲಿ ಉಪಸ್ಥಿತರಿದ್ದರು. ವಿಶ್ವವಿದ್ಯಾಲಯದ ವಿವಿಧ ಸ್ನಾತಕೋತ್ತರ ವಿಭಾಗಗಗಳ ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.