Join The Telegram | Join The WhatsApp |
ಗದಗ :
ನಗರದ ಕೆ.ಎಲ್.ಇ. ಸಂಸ್ಥೆಯ ಎಸ್. ಎ. ಮಾನ್ವಿ ಕಾನೂನು ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕ ಮತ್ತು ಕಾನೂನು ಸೇವೆಗಳ ಕ್ಲಿನಿಕ್ ಹಾಗೂ ಅಡವಿ ಸೋಮಾಪೂರ ಗ್ರಾಮ ಪಂಚಾಯತಿ ಕಾರ್ಯಾಲಯದ ಆಶ್ರಯದಲ್ಲಿ
ಸಣ್ಣ ತಾಂಡ ಗ್ರಾಮದಲ್ಲಿ ಸಂವಿಧಾನ ದಿನಾಚರಣೆಯ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮನ್ನು ಸಸಿಗೆ ನೀರರೆವ ಮೂಲಕ ಚಾಲನೆ ನೀಡಲಾಯಿತು.
ಸಹಾಯಕ ಪ್ರಾಧ್ಯಾಪಕಿ ಜ್ಯೋತಿ. ಸಿ. ವಿ. ಮಾತನಾಡಿ ಭೂಮಿಗೆ ಸಂಬಧಿಸಿದ ಕಾನೂನುಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಅಲ್ಲದೇ ಸಂವಿಧಾನದ ಅಡಿಯಲ್ಲಿ ಸಾರ್ವಜನಿಕರಿಗೆ ಇರುವ ಹಕ್ಕುಗಳು ಮತ್ತು ಸವಲತ್ತುಗಳು, ನರೇಗಾ ಯೋಜನೆಯಡಿಯಲ್ಲಿ ಕಾರ್ಮಿಕರಿಗೆ ಇರುವ ಸವಲತ್ತುಗಳ ಬಗ್ಗೆ ವಿಸ್ತಾರವಾಗಿ ತಿಳಿಸಿದರು.
ಮಹಾವಿದ್ಯಾಲಯದ ವಿದ್ಯಾರ್ಥಿನಿ ನಿಖಿತಾ ಗುರುಬಸಣ್ಣವರ ಮೂಲಭೂತ ಹಕ್ಕುಗಳ ಬಗ್ಗೆ ನೆರೆದಿದ್ದ ಸಾರ್ವಜನಿಕರಿಗೆ ಅರಿವು ಮೂಡಿಸಿದರು. ಕು. ನಿವೇದಿತಾ ಮಾಡೋಳ್ಳಿ ಸಂವಿಧಾನದ ಅಡಿಯಲ್ಲಿ ನೀಡಿರುವ ಕರ್ತವ್ಯಗಳ ಬಗ್ಗೆ ತಿಳಿಸಿದರು.
ಪಂಚಾಯತಿ ಅಭಿವೃದ್ದಿ ಅಧಿಕಾರಿ ಮಡಿವಾಳರ ಕಾನೂನು ತಿಳಿದುಕೊಳ್ಳುವುದರ ಮಹತ್ವವನ್ನು ವಿವರಿಸಿದರು. ಉಪಾಧ್ಯಕ್ಷೆ ಬಸಮ್ಮಾ ಚಿ. ಕನ್ಯಾದ ಅವರು ಮಕ್ಕಳಿಗೆ ಶಿಕ್ಷಣ ಕೊಡಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.
ಅಡವಿ ಸೋಮಾಪೂರ ಗ್ರಾಮ ಪಂಚಾಯತಿ ಅಧ್ಯಕ್ಷ ಸುರೇಂದ್ರ ಡಂಬಳ ಇವರು ಕಾನೂನು ಅಡಿಯಲ್ಲಿ ಇರುವ ಹಕ್ಕುಗಳು ಮತ್ತು ಸವಲತ್ತುಗಳನ್ನು ಪ್ರತಿಯೊಬ್ಗ ನಾಗರಿಕರು ಉಪಯೋಗಿಸಿಕೊಳ್ಳಬೇಕು ಎಂದು ನುಡಿದರು.
ಗ್ರಾಮ ಪಂಚಾಯತಿಯ ಸದಸ್ಯರು ಮತ್ತು ಡಾ. ಸಿ. ಬಿ. ರಣಗಟ್ಟಿಮಠ, ಎನ್.ಎಸ್.ಎಸ್ ಸಂಯೋಜಕರು ಉಪಸ್ತಿತರಿದ್ದರು.
ಚೈತ್ರಾ ಗೌಡರ ಪ್ರಾರ್ಥನಾ ಗೀತೆಯೊಂದಿಗೆ ಸ್ವಾಗತಿಸಿದರು, ಬಿಬಿಹಜರಾ ನಾಲಬಂದ ನಿರೂಪಿಸಿದರು. ಮುಕ್ತಾ ಹಡಪದ ವಂದಿಸಿದರು.
Join The Telegram | Join The WhatsApp |