Join The Telegram | Join The WhatsApp |
ನಾಗಪುರ :
ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಸಂಬಂಧ ಮಹಾ ವಿಕಾಸ್ ಅಘಾಡಿ ನೇತೃತ್ವದಲ್ಲಿ ಇಂದು ಶಾಸಕರು ನಾಗಪುರ ವಿಧಿ ಮಂಡಲ ಎದುರು ಪ್ರತಿಭಟನೆ ನಡೆಸಿದರು. ಮಹಾರಾಷ್ಟ್ರ ಸರಕಾರ ಗಡಿ ವಿಷಯದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಮುಂದಾಗುತ್ತಿಲ್ಲ. ಕರ್ನಾಟಕ ಸರಕಾರ ಈಗಾಗಲೇ ತನ್ನ ರಾಜ್ಯದ ಒಂದು ಇಂಚು ಭೂಮಿಯನ್ನು ಮಹಾರಾಷ್ಟ್ರಕ್ಕೆ ನೀಡುವುದಿಲ್ಲ ಎಂದು ಠರಾವ್ ಅಂಗೀಕರಿಸಿದೆ. ಆದರೆ, ಮಹಾರಾಷ್ಟ್ರ ಮಾತ್ರ ಕುಂಭಕರ್ಣ ನಿದ್ದೆಯಲ್ಲಿದೆ ಎಂದು ಮಹಾವಿಕಾಸ ಅಘಾಡಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಮಹಾರಾಷ್ಟ್ರ ಸರಕಾರ ಈ ಕೂಡಲೇ ಎಚ್ಚೆತ್ತು ಕರ್ನಾಟಕಕ್ಕೆ ತಕ್ಕ ಉತ್ತರ ನೀಡಬೇಕು ಎಂದು ಆಗ್ರಹಿಸಿ, ಕರ್ನಾಟಕ ಸರಕಾರ ವಿರುದ್ದ ಘೋಷಣೆ ಕೂಗಿದರು.
Join The Telegram | Join The WhatsApp |