Join The Telegram | Join The WhatsApp |
ಗೋಕಾಕ :
ರಾಜ್ಯದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿರುವ ಹಾಲುಮತ ಕುರುಬ ಸಮಾಜ ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಮುಂದೆ ಬರಲು ಎಸ್ ಟಿ ಮೀಸಲಾತಿ ಅಗತ್ಯವಿದ್ದು, ಈಗಾಗಲೇ ಸರ್ಕಾರ ಕುಲ ಶಾಸ್ತ್ರೀಯ ಅಧ್ಯಯನ ನಡೆಸಿ ವರದಿ ಪಡೆದುಕೊಂಡಿದ್ದು, ಕೂಡಲೇ ಕುರುಬ ಸಮಾಜಕ್ಕೆ ಮೀಸಲಾತಿ ನೀಡುವಂತೆ ಡಿ ೨೭ ರಂದು ಬೃಹತ್ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗಳಿಗೆ ಹಕ್ಕೋತ್ತಾಯ ಮಾಡಲಾಗುತ್ತದೆ ಎಂದು ಕುರುಬ ಸಂಘದ ಮಾಜಿ ರಾಜ್ಯಾಧ್ಯಕ್ಷ ಡಾ. ರಾಜೇಂದ್ರ ಸಣ್ಣಕ್ಕಿ ಹೇಳಿದರು. ಗುರುವಾರದಂದು ನಗರದ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿ ಅವರು ಮಾತನಾಡಿದರು.
ಹಲವು ದಶಕಗಳ ಕಾಲ ಹಾಲುಮತ ಕುರುಬ ಸಮಾಜದವರು ಎಸ್ಟಿ ಮೀಸಲಾತಿಗಾಗಿ ಹೋರಾಟ ನಡೆಸಿದ್ದಾರೆ. ಈಗಾಗಲೇ ಮೈಸೂರಿನ ಕುಲ ಶಾಸ್ತ್ರೀಯ ಅಧ್ಯಯನ ವಿಭಾಗ ಎಲ್ಲಾ ಜಿಲ್ಲೆಗಳಲ್ಲಿ ಸಂಚಾರ ಮಾಡಿ ಕುಲಶಾಸ್ತ್ರೀಯ ಅಧ್ಯಯನ ನಡೆಸಿದೆ. ಈಗಾಗಲೇ ಬೀದರ್, ಗುಲ್ಬರ್ಗ, ಯಾದಗಿರಿ ಹಾಗೂ ಕೊಡಗು ಭಾಗದಲ್ಲಿ ಕುರುಬರು ಎಸ್.ಟಿ. ಮೀಸಲಾತಿ ಪಡೆದಿದ್ದಾರೆ. ನಾವು ಹೊಸದಾಗಿ ಮೀಸಲಾತಿ ಕೊಡಿ ಎಂದು ಕೇಳುತ್ತಿಲ್ಲ. ಹಾಲಿ ಇರುವ ನಾಲ್ಕು ಜಿಲ್ಲೆಗಳನ್ನೂ ಸೇರ್ಪಡೆ ಮಾಡಿಕೊಂಡಂತೆ ರಾಜ್ಯದ ಎಲ್ಲಾ ಕುರುಬ ಸಮುದಾಯವನ್ನೂ ಎಸ್.ಟಿ.ಗೆ ಸೇರಿಸುವ ಒತ್ತಾಯ ನಮ್ಮದು ಎಂದ ಅವರು ಡಿಸೆಂಬರ್ ೨೭ ರಂದು ಬೆಳಗಾವಿಯಲ್ಲಿ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘ ಹಾಗೂ ಸಮಾಜದ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಬೃಹತ್ ಪ್ರತಿಭಟನೆ ನಡೆಯಿಸಿ ಹಕ್ಕೋತ್ತಾಯ ಮಾಡಲಾಗುವುದು ಸರಕಾರ ಬರುವ ಸಾರ್ವತ್ರಿಕ ಚುನಾವಣೆಯ ಒಳಗೆ ಕುರುಬ ಸಮಾಜಕ್ಕೆ ಎಸ್.ಟಿ ಮೀಸಲಾತಿ ನೀಡಬೇಕು ಎಂದು ಸರಕಾರವನ್ನು ಒತ್ತಾಯಿಸಿದರು.ಕರುಬ ಸಂಘದ ಜಿಲ್ಲಾಧ್ಯಕ್ಷ ಮಡೆಪ್ಪ ತೋಳಿನವರ ಮಾತನಾಡಿ
ಈಗಾಗಲೇ ಪರಮ ಪೂಜ್ಯ ನಿರಂಜನಾನಂದಪುರಿ ಮಹಾಸ್ವಾಮಿಗಳು ನೇತೃತ್ವದಲ್ಲಿ ರಾಜ್ಯಾದ್ಯಂತ ವಿಭಾಗುವಾರು ಸಮಾವೇಶವನ್ನು ಮಾಡಿ ಸರಕಾರಕ್ಕೆ ಒತ್ತಾಯಿಸಿದ್ದೇವೆ. ಕುಲಶಾಸ್ತ್ರೀಯ ಅಧ್ಯಯನ ನಡೆಸಲಾಗಿದ್ದು, ಸರಕಾರ ಈ ವರದಿಯನ್ನು ತರಿಸಿ ಅದನ್ನು ಪರಿಗಣಿಸಿ , ಕ್ಯಾಬಿನೆಟ್ ನಲ್ಲಿ ಚರ್ಚಿಸಿ ಕೇಂದ್ರ ಸರಕಾರಕ್ಕೆ ಶೀಫಾರಸ್ಸು ಮಾಡಬೇಕು. ಡಿಸೆಂಬರ್ 27 ರಂದು ಬೆಳಗಾವಿ ಸುವರ್ಣ ಸೌಧ ಬಳಿಯ
ಕೊಂಡಸಕೊಪ್ಪ ಎ ಬ್ಲಾಕ್ ನಲ್ಲಿ ಹೋರಾಟಕ್ಕೆ ಜಿಲ್ಲಾಡಳಿತ ಅನುಮತಿ ನೀಡಿದ್ದು, ಅಂದು ಮುಂಜಾನೆ ೧೦ ಘಂಟೆಯಿಂದ ಸಾಯಂಕಾಲ ೫ ಘಂಟೆಯವರೆಗೆ ಬೃಹತ್ ಪ್ರತಿಭಟನೆ ನಡೆಯುತ್ತಿದ್ದು, ಈ ಹೋರಾಟದಲ್ಲಿ ರಾಜ್ಯಾದ್ಯಂತ ಸಾವಿರಾರು ಕುರುಬ ಸಮಾಜ ಬಾಂಧವರು ಭಾಗವಹಿಸಿಲ್ಲಿದ್ದಾರೆ. ಬೆಳಗಾವಿ ಜಿಲ್ಲೆಯ ಪ್ರತಿಯೊಂದು ತಾಲೂಕಿನಿಂದಲೂ ಸಹ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಕುರಬ ಸಮಾಜದ ಭಾಂಧವರು ಈ ಹೋರಾಟದಲ್ಲಿ ಭಾಗವಹಿಸುವಂತೆ ಜಿಲ್ಲಾಧ್ಯಕ್ಷ ಮಡೆಪ್ಪ ತೋಳಿನವರ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಕುರುಬರ ಸಮಾಜದ ಮುಖಂಡರುಗಳಾದ ಬಸವರಾಜ ಬಸಳಿಗುಂದಿ, ಅಶೋಕ್ ಮೆಟಗುಡ್ಡ, ವಿನಾಯಕ ಬನಹಟ್ಟಿ, ಬಸವರಾಜ ಬನತಿ, ಎಚ್.ಎಸ್. ನಸಲಾಪುರೆ, ಜಿ.ಜಿ.ಕಣವಿ, ಶಿವಪುತ್ರ ಹಾಡಕಾರ, ವಿಠಲ ಜಟಗನ್ನವರ ಸೇರಿದಂತೆ ಇತರರು ಉಪಸ್ಥಿತರಿದ್ದರು.
Join The Telegram | Join The WhatsApp |