ಬೆಂಗಳೂರು : ಇಡೀ ಕನ್ನಡ ನಾಡು ಏಕೆ ? ಜಗತ್ತಿನ ಜನರ ಮನ ಗೆದ್ದ ಅತ್ಯಂತ ಖ್ಯಾತನಾಮ ಚಲನಚಿತ್ರ ನಟ ಪುನೀತ್ ರಾಜಕುಮಾರ್ ಅವರ ಮೂರನೇ ಪುಣ್ಯ ಸ್ಮರಣೆ ಇಂದು. ಅಕ್ಟೋಬರ್ 29, 2021.

ಬರ ಸಿಡಿಲಿನಂತೆ ಬಂದ ಸುದ್ದಿಯೊಂದು ಚಲನಚಿತ್ರ ಪ್ರೇಮಿಗಳ ಪಾಲಿಗೆ ಆಘಾತಕಾರಿಯಾಯಿತು. ಪುನೀತ್ ರಾಜ್‍ಕುಮಾರ್ ನಿಧನರಾಗಿದ್ದಾರೆ ಎಂಬ ಸುದ್ದಿಯನ್ನು ಇಂದಿಗೂ ಕನ್ನಡಿಗರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪುನೀತ್ ರಾಜಕುಮಾರ್ ನಮ್ಮನ್ನು ಅಗಲಿ ಇಂದಿಗೆ ಬರೋಬ್ಬರಿ 3 ವರ್ಷವಾಗಿದೆ.

ಆದರೆ, ಅವರ ನೆನಪು ಇಂದಿಗೂ ಹಚ್ಚಹಸಿರು. ಪುನೀತ್ ರಾಜಕುಮಾರ್ ಸಮಾಧಿಗೆ ಸತತ ಮೂರು ವರ್ಷಗಳಿಂದ ಅಭಿಮಾನಿಗಳು ಅಸಂಖ್ಯಾತ ಪ್ರಮಾಣದಲ್ಲಿ ಭೇಟಿ ನೀಡುತ್ತಿದ್ದಾರೆ. ಅಭಿಮಾನಿಗಳ ಪಾಲಿಗೆ ಅದು ಸಮಾಧಿಯಲ್ಲ. ದೇವಸ್ಥಾನ. ನವ ಜೋಡಿಗಳಿಂದ ಹಿಡಿದು ಮಗುವಿನ ನಾಮಕರಣವನ್ನು ಅಲ್ಲಿಯೇ ಮಾಡುವಷ್ಟರ ಮಟ್ಟಿಗೆ ಪುನೀತ್ ರಾಜಕುಮಾರ್ ಅವರ ಮೇಲೆ ಅಭಿಮಾನ ತೋರುತ್ತಿದ್ದಾರೆ. ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡ ಕನ್ನಡ ನಾಡು ತಬ್ಬಲಿ. ತಮ್ಮ ಮನೆಯ ಒಬ್ಬ ಸದಸ್ಯನನ್ನು ಕಳೆದುಕೊಂಡಂತ ಅನುಭವ. ಅದೇ ಕಾರಣಕ್ಕೆ ಪುನೀತ್ ಮಾಡಿದ ಅಪಾರ ಸಹಾಯಗಳು.

ಕನ್ನಡಿಗರ ಪಾಲಿಗೆ ಪುನೀತ್ ರಾಜಕುಮಾರ್ ಸದಾ ಇರುತ್ತಾರೆ. ಮುಂದೆಯೂ ಇರುತ್ತಾರೆ. ಅಷ್ಟೊಂದು ಪ್ರಮಾಣದಲ್ಲಿ ಅವರು ತಮ್ಮ ನೆನಪುಗಳನ್ನು ಕನ್ನಡಿಗರ ಜೊತೆ ಬಿಟ್ಟು ಹೋಗಿದ್ದಾರೆ.