Join The Telegram | Join The WhatsApp |
ಬೆಳಗಾವಿ :
ಜೈನ ಧರ್ಮದ ಅತೀ ಪ್ರಾಚೀನ ಧರ್ಮಪೀಠದ ಪೀಠಾಧೀಶ ಹಾಗೂ ದೆಹಲಿ, ಕೊಲ್ಲಾಪುರ, ಜಿನಕಂಚಿ, ಪಿನಗೊಂಡಿ, ರಾಯಬಾಗ, ಹೊಸೂರ ( ಬೆಳಗಾವಿ) ಸಂಸ್ಥಾನಮಠದ ಪೀಠಾಧೀಶರಾದ ಸ್ವಸ್ತಿ ಶ್ರೀ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿಗಳ ಹೊಸೂರ ಬೆಳಗಾವಿ ಪುರಪ್ರವೇಶ ಕಾರ್ಯಕ್ರಮ ಡಿ. 29 ರಂದು ಮಧ್ಯಾಹ್ನ 3 ಗಂಟೆಗೆ ನೆರವೇರಲಿದೆ.
ಡಿ.29 ರಂದು ಮಧಾಹ್ನ 3 ಗಂಟೆಗೆ ಹಿಂದವಾಡಿಯ ಗೋಮಟೇಶ ವಿದ್ಯಾಪೀಠದಿಂದ ಶೋಭಾಯಾತ್ರೆಯ ಮೂಲಕ ಭಟ್ಟಾರಕ ಸ್ವಾಮೀಜಿಯವರನ್ನು 1008 ಮಂಗಲ ಕಳಶ, ಆನೆ ಕುದುರೆ, ಹಾಗೂ ರಥದೊಂದಿಗೆ ಮೆರವಣಿಗೆಯ ಮೂಲಕ ಶ್ರೀಗಳನ್ನು ಭವ್ಯವಾಗಿ ಸ್ವಾಗತಿಸಲಾಗುವುದು.
ಗೋಮಟೇಶ ವಿದ್ಯಾಪೀಠದಿಂದ ಆರಂಭವಾಗುವ ಮೆರವಣಿಗೆಯು ಹಿಂದವಾಡಿ, ಮಹಾವೀರ ಭವನ, ಗೋವಾವೇಸ್ ಸರ್ಕಲ್, ಎಸ್.ಪಿಎಂ.ರೋಡ, ಹೊಸುರ ಮಠಗಲ್ಲಿಯ ಮೂಲಕ ಮಹಾತ್ಮಾ ಫುಲೆ ರಸ್ತೆಯಲ್ಲಿನ ಮೈದಾನದಲ್ಲಿ ಸ್ವಾಗತ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮದ ಸಾನಿಧ್ಯವನ್ನು ನಾಂದಣಿ ಮಠದ ಸ್ವಸ್ತಿಶ್ರೀ ಜಿನಸೇನ ಭಟ್ಟಾರಕ ಸ್ವಾಮೀಜಿಗಳು ವಹಿಸಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಗಮಿಸಲಿದ್ದಾರೆ. ಈ ಎಲ್ಲ ಕಾರ್ಯಕ್ರಮಕ್ಕೆ ಶ್ರಾವಕ-ಶ್ರಾವಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿರಬೇಕೆಂದು ಶಾಸಕ ಅಭಯ ಪಾಟೀಲ , ಮಾಜಿ ಶಾಸಕ ಸಂಜಯ ಪಾಟೀಲ ಹಾಗೂ ಸಮಸ್ತ ಜೈನ ಸಮಾಜದ ವತಿಯಿಂದ ಕೋರಲಾಗಿದೆ.
Join The Telegram | Join The WhatsApp |