ಮಂಗಳೂರು: ಬೆಂಗಳೂರು ಬಿಎಂಟಿಸಿಯಲ್ಲಿ ಖಾಲಿ ಇರುವ ಸುಮಾರು 50 ಹುದ್ದೆಗಳ ಭರ್ತಿಗೆ ಕರಾವಳಿಯ ಯುವಕರಿಗೆ ಪುತ್ತೂರು ಶಾಸಕ ಅಶೋಕ ಕುಮಾರ್ ರೈ ಅವರು ಅರ್ಜಿ ಸಲ್ಲಿಸಲು ವಿಶೇಷವಾಗಿ ವಿನಂತಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಅವರು ವಿಡಿಯೋ ಮೂಲಕ ಮನವಿಯನ್ನು ಮಾಡಿಕೊಂಡಿದ್ದಾರೆ.
ಪುತ್ತೂರು, ಸುಳ್ಯ, ಬಂಟ್ವಾಳ, ಬೆಳ್ತಂಗಡಿ, ಮಂಗಳೂರು ಮತ್ತು ಉಡುಪಿಯ ಯುವಕರು ಯಾರಿದ್ದಾರೋ ಅವರು ಚಾಲಕ ವೃತ್ತಿಯಲ್ಲಿರುವ ಯುವಕರಿಗೆ ಬೆಂಗಳೂರಿನ ಬಿಎಂಟಿಸಿಯಲ್ಲಿ ಕೆಲಸ ಮಾಡಲು ಅವಕಾಶ ಇದೆ. ಒಂದು ವರ್ಷದ ಅನುಭವ ಹೊಂದಿದ್ದವರಿಗೆ ಸುಮಾರು 50 ಹುದ್ದೆ ತುಂಬಲು ಈಗ ಅವಕಾಶ ಕಲ್ಪಿಸಲಾಗಿದೆ. ಟಾಟಾ ಎಲೆಕ್ಟ್ರಿಕಲ್ ಜೊತೆ ಕೆಎಸ್ ಆರ್ ಟಿ ಸಿಯ ಬಿಎಂಟಿಸಿ ಈ ಕೆಲಸ ಕೊಡಲಿದೆ. ಅರ್ಹರು ಯಾರು ಸಹಾ ಅರ್ಜಿ ಸಲ್ಲಿಸಬಹುದು. ಒಂದು ವರ್ಷದ ಹೆವಿ ಡ್ರೈವಿಂಗ್ ಅನುಭವ ಹೊಂದಿದವರಿಗೆ ಅರ್ಜಿ ಸಲ್ಲಿಸಲು ಅವಕಾಶ ಇದ್ದು, ತಿಂಗಳಿಗೆ ಸುಮಾರು ₹ 28,000 ಸಂಬಳ ಸಿಗಲಿದೆ. ಆಸಕ್ತರು ರೈ ಎಸ್ಟೇಟ್ ಚಾರಿಟೆಬಲ್ ಟ್ರಸ್ಟ್, ಪುತ್ತೂರು ಇವರನ್ನು ಸಂಪರ್ಕಿಸಿದರೆ ಬೆಂಗಳೂರು ಬಿಎಂಟಿಸಿಯಲ್ಲಿ ಕೆಲಸ ಕೊಡಿಸುವ ನಿಟ್ಟಿನಲ್ಲಿ ಮಾರ್ಗದರ್ಶನ ಮಾಡಲಿದೆ (ಮಾಹಿತಿಗೆ ಸುದೇಶ್ ಶೆಟ್ಟಿ ಮೊಬೈಲ್ :9731461380 ಮತ್ತು ಲಿಂಗಪ್ಪ 8296915918 ಅವರನ್ನು ಸಂಪರ್ಕಿಸಬಹುದು) ಎಂದು ಶಾಸಕ ಅಶೋಕ ಕುಮಾರ್ ರೈ ತಿಳಿಸಿದ್ದಾರೆ.