ಪುತ್ತೂರು: ಪುತ್ತೂರು ಪಿಎಲ್ ಡಿ ಬ್ಯಾಂಕಿನ ಚುನಾವಣೆಯಲ್ಲಿ ಸ್ಪರ್ದಿಸಲು ಸಲ್ಲಿಸಲಾಗಿದ್ದ ನಾಮಪತ್ರಗಳ ಪೈಕಿ ಕಾಂಗ್ರೆಸ್ ಬೆಂಬಲಿತ ಇಬ್ಬರ ನಾಮಪತ್ರ ತಿರಸ್ಕಾರವಾಗಿದ್ದು ,ಈ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಅಶೋಕ ರೈ ಗರಂ ಆಗಿದ್ದು ಬ್ಯಾಂಕಿಗೆ ತೆರಳಿ ಚುನಾವಣಾ ಅಧಿಕಾರಿಯನ್ನು ತರಾಟೆಗೆ ಎತ್ತಿಕೊಂಡ ಘಟನೆ ನಡೆದಿದೆ.

ಪಿಎಲ್ ಡಿ ಬ್ಯಾಂಕಿನ ಚುನಾವಣೆಗೆ ಒಟ್ಟು ಸಲ್ಲಿಕೆಯಾಗಿದ್ದ ನಾಮಪತ್ರಗಳ ಪೈಕಿ ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ರಾಜಶೇಖರ ಜೈನ್ ಮತ್ಗು ಅಶೋಕ್ ರೈ ದೇರ್ಲ ಎಂಬವರ ನಾಮಪತ್ರವನ್ನು ಚುನಾವಣಾ ಅಧಿಜಾರಿ ಎಆರ್ ಒ ರಘು ಎಂಬವರು ತಿರಸ್ಕೃತಗೊಳಿಸಿದ್ದರು. ಸಕಾರಣವಿಲ್ಲದೆ ಮತ್ತು ಉದ್ದೇಶಪೂರ್ವಕವಾಗಿ ನಮ್ಮ ನಾಮಪತ್ರವನ್ನು ತಿರಸ್ಕಾರ ಮಾಡಿದ್ದಾರೆ ಎಂದು ಇಬ್ಬರು ಅಭ್ಯರ್ಥಿಗಳು ಬ್ಲಾಕ್ ಅಧ್ಯಕ್ಷರಾದ ಕೆ ಪಿ ಆಳ್ವರ ಗಮನಕ್ಕೆ ತಂದಿದ್ದಾರೆ. ಕೆ ಪಿ ಆಳ್ವರು ಶಾಸಕರ ಗಮನಕ್ಕೆ ತಂದು ಬಳಿಕ ಶಾಸಕರು ಬ್ಯಾಂಕಿಗೆ ತೆರಳಿ ಚುನಾವಣಾ ಅಧಿಕಾರಿ ಅವರನ್ನು ತರಾಟೆಗೆ ಎತ್ಗಿಕೊಂಡರು. ಸಲ್ಲಿಸಲಾಗಿದ್ದ ನಾಮಪತ್ರವನ್ನು ಪರಿಶೀಲನೆ ಮಾಡುವ ವೇಳೆ ಅದು ಸರಿಯಾಗಿಯೇ ಇತ್ತು, ಯಾವುದೇ ಕಾರಣವಿಲ್ಲದೆ ದುರುದ್ದೇಶದಿಂದ ಅಧಿಕಾರಿ ಈ ಕೆಲಸ ಮಾಡಿದ್ದಾರೆ ಎಂದು ಶಾಸಕರು ನೇರ ಆರೋಪ ಮಾಡಿದರು.

ಅಧಿಕಾರಿ ಹೇಳಿದ ಕಾರಣ..
ನಾಮಪತ್ರ ಸಲ್ಲಿಸುವ ವೇಳೆ ಸ್ಪರ್ದಿಸುವ ಅಭ್ಯರ್ಥಿ ಯಾವ ಕೆಟಗರಿಯಲ್ಲಿ ಸ್ಪರ್ದೆ ಮಾಡುತ್ತಿದ್ದಾನೆ ಎಂಬ ವಿಚಾರವನ್ನು ನಾಮಪತ್ರದಲ್ಲಿ‌ ನಮೂದಿಸಬೇಕು, ನಮೂದಿಸಿದ ಬಳಿಕ ಉಳಿದ ಕೆಟಗರಿ ಹೆಸರನ್ನು ಅಳಿಸಬೇಕು, ಅಳಿಸದ ಕಾರಣ ನಾಮಪತ್ರ ತಿರಸ್ಕಾರ ಮಾಡಿದ್ದೇನೆ ಎಂದು‌ಶಾಸಕರಲ್ಲಿ ತಿಳಿಸಿದ್ದಾರೆ. ಆದರೆ ಕಾನೂನು ಪ್ರಕಾರ ಅಭ್ಯರ್ಥಿಯು ತಾನು ಸ್ಪರ್ಧಿಸುವ ವಿಭಾಗಕ್ಕೆ ರೈಟ್ ಗುರುತು ಹಾಕಬೇಕು ಎಂದು ಇದ್ದು ಉಳಿದ ಕೆಟಗರಿಯನ್ನು ಅಳಿಸಬೇಕೆಂಬ ನಿಯಮವಿರುವುದಿಲ್ಲ ಆದರೆ ಅಧಿಕಾರಿ ಈ ವಿಚಾರದಲ್ಲಲಿ ತಪ್ಪು ಮಾಡಿರುವುದು  ಎಂದು  ಹೇಳಿದರು.

ಎಷ್ಟು ತಗೊಂಡಿದ್ದೀರಿ?
ನಾಮಪತ್ರ ತಿರಸ್ಕಾರ ಮಾಡಲು ಎಷ್ಟು ಲಂಚ‌ ತಗೊಂಡಿದ್ದೀರಿ ಎಂದು ಅಧಿಕಾರಿ ರಘು ಅವರನ್ನು ಪ್ರಶ್ನಿಸಿದ ಶಾಸಕ ಅಶೋಕ್ ರೈ ಅವರು ಪುತ್ತೂರಿನಲ್ಲಿ ಯಾರಿಗೂ ಅನ್ಯಾಯ ಆಗಲು ಬಿಡುವುದಿಲ್ಲ. ಲಂಚ ತಗೊಂಡು ಮೋಸ ಮಾಡಲು ಬಿಡುವುದಿಲ್ಲ. ಉದ್ದೇಶಪೂರ್ವಕವಾಗಿ ಈ ಕೃತ್ಯ ಮಾಡಿದ್ದೀರಿ ಎಂದು ಮತ್ತೆ ಅಧಿಕಾರಿಯನ್ನು‌ತರಾಟೆಗೆ ಎತ್ತಿಕೊಂಡರು.

ನಿಮ್ಮ‌ಮೇಲೆ ದೂರು ಮೊದಲೇ ಇತ್ತು
ನಿಮ್ಮ‌ಮೇಲೆ‌ ಮೊದಲೇ ನನಗೆ ದೂರು ಬಂದಿತ್ತು, ಸುದಾರಿಸಬಹುದು ಎಂದು ಸುಮ್ಮನಿದ್ದೆ ಈಗ ಬಣ್ಣ ಬಯಲಾಯಿತು ಎಂದು ಶಾಸಕರು ಅಧಿಕಾರಿಯ ಎಚ್ಚರಿಸಿದರು.

ನಮ್ಮ ನಾಮಪತ್ರ ಸರಿ ಇದೆ
ಸ್ಪರ್ಧಿಗಳಾದ ರಾಜಶೇಖರ್ ಜೈನ್ ಮಾತನಾಡಿ ನಮ್ಮ ಇಬ್ಬರ ನಾಮಪತ್ರ ಸರಿಯಾಗಿಯೇ ಇದೆ ಕಾರಣವಿಲ್ಲದೆ ತಿರಸ್ಕಾರ ಮಾಡಿದ್ದಾರೆ. ಇದಕ್ಕಾಗಿ ನಾವು ಶಾಸಕರಲ್ಲಿ ದೂರು ನೀಡಿರುವುದಾಗಿ ಹೇಳಿದರು.

ಸಸ್ಪೆಂಡ್ ಮಾಡ್ತೇನೆ
ಲಂಚತಗೊಂಡು‌,ಅನ್ಯಾಯ‌ಮಾಡಿದ‌ನಿಮ್ಮ‌ನ್ನು‌ ಸಸ್ಪೆಂಡ್ ಮಾಡಿಸ್ತೇನೆ.‌ನಿಮಗೆ ಬೇಕಾದ ಹಾಗೆ ಕಾನೂನು ಬದಲಾವಣೆ ಮಾಡುವ ಅಧಿಕಾರ ನಿಮಗಿಲ್ಲ ಎಂದು ಅಧಿಕಾರಿಗೆ ಶಾಸಕರು‌ಎಚ್ಚರಿಸಿದರು.