ಹೆಬ್ರಿ : ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿ ಪೂರ್ವ ಕಾಲೇಜು ಹೆಬ್ರಿಯಲ್ಲಿ ವಿದ್ಯಾರ್ಥಿ ಗಳಿಗೆ ಹದಿಹರೆಯದ ಸಮಸ್ಯೆಗಳ ಅರಿವು ಕಾರ್ಯಕ್ರಮ ನಡೆಯಿತು.
ಮಾಹೆ ಮಣಿಪಾಲದ ಸೈಕ್ಯಾಟಿಸ್ಟ್ ವಿಭಾಗದ ಅಡಿಷನಲ್ ಪ್ರೊಫೆಸರ್ ಡಾ. ರವೀಂದ್ರ ಮುನೋಲಿ ಮಾತನಾಡಿ, ಹದಿಹರೆಯದ ವಯಸ್ಸಿನಲ್ಲಿ ಸಹಜವಾದ ಆಕರ್ಷಣೆಗಳು ಇರುತ್ತವೆ. ಆದರೆ ಅದನ್ನು ನಿಗ್ರಹಿಸದೆ ಹೋದರೆ ಜೀವನ ಹಾಳಾಗುವ ಸಾಧ್ಯತೆಗಳು ಇರುತ್ತವೆ. ಮದ್ಯಪಾನ , ದೂಮಪಾನ , ಡ್ರಗ್ಸ್ , ತಂಬಾಕು ಮುಂತಾದ ದುಶ್ಚಟಗಳಿಂದ ದೂರವಿರಬೇಕು. ಅತ್ಯಂತ ವೇಗವಾಗಿ ವಾಹನ ಓಡಿಸುವುದು , ಕುಡಿದು ವಾಹನ ಚಾಲನೆ , ಹೆಲ್ಮೆಟ್ ಧರಿಸದೆ ವಾಹನ ಚಾಲನೆ ಮಾಡುವುದು ಅಪರಾಧ ಮತ್ತು ಜೀವಕ್ಕೆ ಆಪತ್ತು ಏನ್ನುವುದನ್ನು ಅರಿತಿರಬೇಕು. ಈ ವಯಸ್ಸಿನಲ್ಲಿ ಹಾರ್ಮೋನುಗಳ ವ್ಯತ್ಯಾಸದಿಂದ ಆಗುವ ಗಂಡು- ಹೆಣ್ಣುಗಳ ನಡುವಿನ ಸಹಜ ಆಕರ್ಷಣೆಗಳನ್ನು ನಿಗ್ರಹಿಸಿ ಚೆನ್ನಾಗಿ ಓದಿನ ಕಡೆ ಗಮನ ಕೊಡಬೇಕು ಎಂದರು.

ಮಣಿಪಾಲ ನರ್ಸಿಂಗ್ ಕಾಲೇಜು ಉಪನ್ಯಾಸಕಿ ಮಂಜುಳಾ , ಉಪೇಂದ್ರ , ಪಿ. ಆರ್. ಓ. ವಿಜಯ್ ಕುಮಾರ್ ಶೆಟ್ಟಿ , ಉಪನ್ಯಾಸಕರು , ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಹಿರಿಯ ಉಪನ್ಯಾಸಕಿ ಅನುಸೂಯ ಮಲ್ಯ ಸ್ಮರಣಿಕೆ ನೀಡಿ ಗೌರವಿಸಿದರು. ಕನ್ನಡ ಉಪನ್ಯಾಸಕ ವೀಣೇಶ ಅಮೀನ್ ನಿರೂಪಿಸಿ ವಂದಿಸಿದರು.