ಬೆಂಗಳೂರು : ಕರುನಾಡಿನ ಅತ್ಯಂತ ಜನಪ್ರಿಯ ಬಿಗ್ ಬಾಸ್ ಮನೆಗೆ ಇದೀಗ ಖ್ಯಾತ ಸುದ್ದಿ ವಾಚಕಿಯಾಗಿರುವ ರಾಧಾ ಹಿರೇಗೌಡರ್ ಎಂಟ್ರಿ ಕೊಟ್ಟಿದ್ದಾರೆ. ರಾಜಕೀಯ ಪಕ್ಷಗಳ ಸರಿ-ತಪ್ಪುಗಳನ್ನು ಅತ್ಯಂತ ಖಡಕ್ಕಾಗಿ ಪ್ರಶ್ನಿಸುವ ರಾಧಾ ಹಿರೇಗೌಡರ್ ತಮ್ಮದೇ ಆದ ಅಭಿಮಾನಿ ಬಳಗವನ್ನು ಕರುನಾಡಿನಲ್ಲಿ ಹೊಂದಿದ್ದಾರೆ. ತಮ್ಮ ಹರಿತ ಹಾಗೂ ಮನಸು ಮಾತುಗಳಿಂದ ಅವರು ರಾಜಕಾರಣಿಗಳಿಗೆ ನೀರು ಕುಡಿಸಿ ಜನಪ್ರಿಯರಾಗಿದ್ದಾರೆ.
ಬಿಗ್ ಬಾಸ್ ಮನೆಗೆ ರಾಧಾ ಹಿರೇಗೌಡರ್ ಬರುತ್ತಿದ್ದಂತೆ ಕನ್ನಡದ ಹೆಣ್ಣು ನಾನು. ಸಿಡಿದೆದ್ದರೆ ಮಿಷನ್ ಗನ್ನು ಹಾಡನ್ನು ಹಾಕಲಾಗಿದೆ. ಮನೆಗೆ ಬರುತ್ತಿದ್ದಂತೆ ಉಳಿದ ಸ್ಪರ್ಧಿಗಳು ಶಾಕ್ ಆಗಿದ್ದಾರೆ. ಇನ್ನು ಕೆಲವರು ಸ್ಪರ್ಧಿಗಳಲ್ಲಿ ಭಯ ಹುಟ್ಟಿಕೊಂಡಿದೆ. ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ರಾಧಾ ಹಿರೇಗೌಡರ್ ಸ್ಪರ್ಧಿಗಳಿಗೆ ಕೆಲವೊಂದು ಪ್ರಶ್ನೆಗಳನ್ನು ಕೇಳಿದ್ದಾರೆ. ರಾಧಾ ಹಿರೇಗೌಡರ್ ಅವರ ಪ್ರಶ್ನೆಗೆ ಉತ್ತರ ಕೊಡದೆ ಕೆಲ ಸ್ಪರ್ಧಿಗಳು ಕಕ್ಕಾಬಿಕ್ಕಿಯಾಗಿದ್ದಾರೆ. ಆದರೆ ರಾಧಾ ಹಿರೇಗೌಡರ್ ಸ್ಪರ್ಧಿಯಾಗಿ ಬಂದಿದ್ದಾರಾ ಅಥವಾ ಅತಿಥಿಯಾಗಿ ಬಂದಿದ್ದಾರಾ ಎಂದು ಇನ್ನಷ್ಟೇ ತಿಳಿದು ಬರಬೇಕಿದೆ.