
ಕಳೆದ ಶನಿವಾರ ಬೆಳಗಾವಿಯಿಂದ ದಿಲ್ಲಿ ವಿಮಾನವೇರಿ ಅಲ್ಲಿಂದ ಮತ್ತೊಂದು ವಿಮಾನ ಮೂಲಕ ಉತ್ತರ ಪ್ರದೇಶದ
ಅಯೋಧ್ಯೆ ತಲುಪಿದಾಗ ಮಧ್ಯಾನ್ಹ 3.30.
ನೇರವಾಗಿ ಟ್ಯಾಕ್ಸಿ ಮೂಲಕ ” ರಾಮ ಪಥ”
ಮಾರ್ಗದಲ್ಲಿರುವ ಶ್ರೀ ರಾಮ ಮಂದಿರಕ್ಕೆ
ಕೆಲವೇ ಹೆಜ್ಜೆಗಳಷ್ಟು ದೂರದಲ್ಲಿರುವ
ಹೊಟೆಲ್ ಅಯೋಧ್ಯೆ ಕಾಣಿಸಿತು.ಅಲ್ಲಿ
ಮೊದಲೇ ರೂಮ್ ಬುಕ್ ಆಗಿತ್ತು.ಎದುರಿಗೆ
ಬಂದು ಸ್ವಾಗತಿಸಿದ ಯುವಕ ನನ್ನನ್ನು
ಗುರುತು ಹಿಡಿದು ಸ್ವಾಗತಿಸಿ ಒಳಗೆ
ಕರೆದೊಯ್ದ.” ಸಾರ್ ನಿಮ್ಮನ್ನು ಕಳೆದ
30 ವರ್ಷಗಳಿಂದ ನೋಡುತ್ತಿದ್ದೇನೆ.ನಿಮ್ಮ
ಮನೆ ಭಡಕಲಗಲ್ಲಿಯಲ್ಲಿತ್ತು.ನಾನು ನಿಮ್ಮ
ಮಗ ಈರಣ್ಣ ಸೇರಿಯೇ ಜಿ.ಎ.ಹೈಸ್ಕೂಲ್
ನಲ್ಲಿ ಕಲಿತಿದ್ದೆವು.ಅಂದ ಹಾಗೆ ನಿಮ್ಮ
1989 ನೇ ಮಾಡೆಲ್ ಸುಝಕಿ ಬೈಕ್
ಎಲ್ಲಿದೆ? ” ಎಂದು ಕೇಳಿದ .ನನಗೂ
ಖುಷಿ ಮತ್ತು ಅಚ್ಚರಿ.
ಈ 40 ವರ್ಷದ ಯುವಕನ ಹೆಸರು
ರಾಘವೇಂದ್ರ ಶೆಟ್ಟಿ.ಕುಂದಾಪುರ
ಮೂಲದ ರಾಘವೇಂದ್ರ ಹುಟ್ಟಿ ಬೆಳೆದದ್ದು
ಬೆಳಗಾವಿಯಲ್ಲಿಯೇ.ಇವರ ತಂದೆ
ರೇಲ್ವೆ ನಿಲ್ದಾಣದ ರಸ್ತೆಯ ಅಂಬಾಭವನದ
ಎದುರು ಒಂದು ಸಣ್ಣ ಪಾನ್ ಅಂಗಡಿ
ಇಟ್ಟುಕೊಂಡು ಜೀವನ ಸಾಗಿಸಿದವರು.
ರಾಘವೇಂದ್ರ ಪ್ರಾಥಮಿಕ ಕನ್ನಡ
ಶಾಲೆ ಕಲಿತಿದ್ದು ಖಾಸಬಾಗದಲ್ಲಿ.ನಂತರ
ಜಿ.ಎ.ಮಾಧ್ಯಮಿಕ ಶಾಲೆ ಪ್ರವೇಶ.ಪಿಯುಸಿ
ಕಲಿತಿದ್ದೂ ಅಲ್ಲಿಯೇ.ನಂತರ ನೆಹರೂ
ನಗರದಲ್ಲಿರುವ ಸಮಿತಿ ಕಾಲೇಜಿನಲ್ಲಿ
ಬಿ.ಕಾಂ.ಪದವಿ.ಆಮೇಲೆ ಗೋವೆಗೆ
ಪ್ರಯಾಣ.ಅಲ್ಲಿ ಹೊಟೆಲ್ ಮ್ಯಾನೇಜ್ ಮೆಂಟ್ ನಲ್ಲಿ ಸ್ನಾತಕೋತ್ತರ ಪದವಿ.
ಇಷ್ಟೆಲ್ಲ ಓದಿದ ನಂತರ ಹಡಗಿನಲ್ಲಿ
ಹೊಟೆಲ್ ಗಳ ವ್ಯವಸ್ಥಾಪಕರ ಹುದ್ದೆಗೆ
ನೇಮಕಗೊಂಡ ರಾಘವೇಂದ್ರ12 ವರ್ಷಗಳ
ಕಾಲ ಅಲ್ಲಿಯೇ ಉಳಿದರು.ವಿಶ್ವದ
ಸುಮಾರು 100 ದೇಶಗಳನ್ನು ತಲುಪಿದರು.
” ಸಮುದ್ರವು ಎಷ್ಟು ದೇಶಗಳನ್ನು
ಹಂಚಿಕೊಂಡಿದೆಯೊ ಅವೆಲ್ಲ ದೇಶಗಳನ್ನು
12 ವರ್ಷಗಳಲ್ಲಿ ತಲುಪಿದೆ” ಎನ್ನುತ್ತಾರೆ
ರಾಘವೇಂದ್ರ.
ಆ ನಂತರ ತಾವೇ ಸ್ವಂತ ಬಿಜಿನೆಸ್
ಮಾಡಬೇಕೆಂದು ಧಾರವಾಡದಲ್ಲಿ ಒಂದು
ವೈನ್ ಶಾಪ್ ಆರಂಭಿಸಿದರು.ತಮ್ಮ
ಬಿಜಿನೆಸ್ ನ್ನು ಹೊರರಾಜ್ಯಕ್ಕೆ ಏಕೆ
ವಿಸ್ತರಿಸಬಾರದು ಎಂಬ ವಿಚಾರ ಅವರಲ್ಲಿ
ಮೊಳಕೆ ಒಡೆಯಿತು.ಅವರ ಹೊಸ
ಚಿಂತನೆ ಅವರನ್ನು ಅಯೋಧ್ಯೆ ಕಡೆಗೆ
ಕರೆದೊಯ್ದಿತು.ಅದರ ಫಲವಾಗಿ
ಅಲ್ಲಿಯ ರಾಮ ಪಥದಲ್ಲಿ ಒಂದು ದೊಡ್ಡ
ಕಟ್ಟಡವನ್ನೇ 15 ವರ್ಷಗಳವರೆಗೆ
ಲೀಜ್ ಪಡೆದರು.ಅದನ್ನೇ ಲಾಜ್ ಮತ್ತು
ರೇಸ್ಟಾರೆಂಟ್ ಆಗಿ ಚೆನ್ನಾಗಿ
ಪರಿವರ್ತಿಸಿದರು.ಎಸಿ ರೂಮುಗಳೂ
ಇವೆ.ಉತ್ತರ ಭಾರತದ ಜೊತೆಗೆ ದಕ್ಷಿಣ
ಭಾರತದ ಊಟ,ತಿಂಡಿಯನ್ನೂ ಅವರು
ಕೊಡುತ್ತಿದ್ದಾರೆ.ಇಡ್ಲಿ,ವಡೆ,ದೋಸೆ,ಉಪ್ಪಿಟ್ಟು,
ಎಲ್ಲವೂ ಇದೆ. ಪುರಿ,ಚಪಾತಿ ಊಟವೂ
ಇಲ್ಲಿ ಲಭ್ಯ.
ರಾಘವೇಂದ್ರ ಅವರ ಸೌಜನ್ಯದ
ನಡವಳಿಕೆ ಅವರ ಬಿಜಿನೆಸ್ ಭರ್ಜರಿಯಾಗಿ
ನಡೆಯಲು ಕಾರಣವಾಗಿದೆ.60 ಜನರಿಗೆ
ಉದ್ಯೋಗ ಕೊಟ್ಟಿರುವದು ಸಣ್ಣ ಮಾತಲ್ಲ.
ಅಯೋಧ್ಯೆಯ ಅನೇಕ ಕೆಲಸಗಾರರು
ಸ್ವಲ್ಪ ಕನ್ನಡವನ್ನೂ ಮಾತನಾಡಲು
ಆರಂಭಿಸಿದ್ದಾರೆ.” ಸಾರ್ ಒಂದು ಕನ್ನಡ
ನಾಮಫಲಕವನ್ನೂ ಹಾಕಲು
ಯೋಜಿಸಿದ್ದೇನೆ” ಎಂದು ತಮ್ಮ
ಕನ್ನಡಾಭಿಮಾನ ಪ್ರದರ್ಶಿಸಿದರು ” ರಘು”!
ಬೆಳಗಾವಿಯ ಈ ಹುಡುಗ ಬೆಳೆದ
ರೀತಿ,ಪಡೆದ ಯಶಸ್ಸು ಕಂಡು
ನಾನೇ ಚಕಿತಗೊಂಡೆ.ರಘು ಇನ್ನೂ
ಹೆಚ್ಚು ಬೆಳೆಯಲಿ ಎಂದು ಹಾರೈಸಿದೆ.
ಕರ್ನಾಟಕದ ಎಲ್ಲೆಡೆಯಿಂದ ಅಯೋಧ್ಯೆಗೆ
ಭೆಟ್ಟಿ ನೀಡುವ ಕನ್ನಡಿಗರು ಹೆಚ್ಚಿನ
ಸಂಖ್ಯೆಯಲ್ಲಿ ಇವರ ಹೊಟೆಲ್ಲಿಗೆ
ಹೋಗುತ್ತಿರುವದಕ್ಕೆ ಇವರ ಸಭ್ಯತೆ
ಮತ್ತು ಸೌಜನ್ಯವೇ ಕಾರಣವಾಗಿರುವದು
ಸ್ಪಷ್ಟ.
ರಾಘವೇಂದ್ರ ಶೆಟ್ಟಿ ಅವರ
ಮೊಬೈಲ್ ಸಂಖ್ಯೆ:9880098149ಬರಹ : ಅಶೋಕ ಚಂದರಗಿ
ಹಿರಿಯ ಪತ್ರಕರ್ತರು ಹಾಗೂ
ಅಧ್ಯಕ್ಷರು,ಬೆಳಗಾವಿ ಜಿಲ್ಲಾ
ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ
ಬೆಳಗಾವಿ
ಮೊ:9620114466