ಬೆಳಗಾವಿ: ಬೆಳಗಾವಿಯಲ್ಲಿ ಹೋಟೆಲ್ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಕರಾವಳಿ ಮೂಲದ ವ್ಯಕ್ತಿಯೊಬ್ಬರು ಗುರುವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸುಮಾರು 45 ವರ್ಷ ವಯಸ್ಸಿನ ರಘುವೀರ ಶೆಟ್ಟಿ ಎಂಬುವವರು ಕಳೆದ ಎರಡು ವರ್ಷಗಳಿಂದ ಬೆಳಗಾವಿಯ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಹೊಟೇಲಿನಲ್ಲಿ ಕೆಲಸ ಮಾಡುತ್ತಿದ್ದಾಗ ಅವರು ನನಗೆ ಸಂಬಂಧಿಕರು ಇಲ್ಲ ಎಂದು ಹೇಳಿಕೊಂಡಿದ್ದು ಯಾರಾದರೂ ಇದ್ದರೆ ಬೆಳಗಾವಿ ಟಿಳಕವಾಡಿ ಪೊಲೀಸರು ಅಥವಾ ಈ ಮೊಬೈಲ್ ಸಂಖ್ಯೆಗೆ +91 87928 71913 ಸಂಪರ್ಕಿಸಬಹುದು.