ಬೆಂಗಳೂರು: ಆಸ್ಟ್ರೇಲಿಯಾ ವಿರುದ್ಧ ಭಾರತದಲ್ಲಿ ನಡೆಯುವ 19 ವರ್ಷದ ಒಳಗಿನವರ ಏಕದಿನ ಮತ್ತು ನಾಲ್ಕು ದಿನಗಳ ಟೆಸ್ಟ್ ಸರಣಿಗೆ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್ ದ್ರಾವಿಡ್ ಆಯ್ಕೆಯಾಗಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇಂದು ಭಾರತೀಯ ತಂಡವನ್ನು ಪ್ರಕಟಿಸಿದೆ. ಕರ್ನಾಟಕದ ಯುವ ಆಟಗಾರ ಸಮಿತ್ ಆಯ್ಕೆಯಾಗಿದ್ದು ಇದೀಗ ಭಾರತೀಯ ಕ್ರಿಕೆಟ್ ತಂಡದ ಪರವಾಗಿ ಭವಿಷ್ಯದಲ್ಲಿ ಅವರು ಸಾಧ್ಯತೆಗೆ ಮತ್ತೊಂದು ಅವಕಾಶ ಲಭಿಸಿದಂತಾಗಿದೆ. ದೇಶಿಯ ಕ್ರಿಕೆಟ್ ನಲ್ಲಿ ಇತ್ತೀಚಿಗೆ ಅವರು ರಾಹುಲ್ ದ್ರಾವಿಡ್ ಅವರಂತೆ ಸಿಕ್ಸರ್ ಬಾರಿಸಿ ಎಲ್ಲರ ಗಮನ ಸೆಳೆದಿದ್ದರು. ಕರ್ನಾಟಕದಿಂದ ಕಾರ್ತಿಕೇಯ ಕೆ.ಪಿ.,ಸಮರ್ಥ ಎನ್. ಮತ್ತು ಹಾರ್ದಿಕ್ ರಾಜ್ ಈ ಸರಣಿಗೆ ಆಯ್ಕೆಯಾಗಿದ್ದಾರೆ.