Join The Telegram | Join The WhatsApp |
ನವದೆಹಲಿ :
ರಾಜ್ಯ ಚುನಾವಣಾ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು ರಾಜಕೀಯ ಪಕ್ಷಗಳು ರಾಜಕೀಯ ರಣರಂಗಕ್ಕೆ ಸಿದ್ಧವಾಗುತ್ತಿವೆ. ಈ ಮಧ್ಯೆ ಕೋಲಾರದಿಂದ ಸ್ಪರ್ಧೆ ಮಾಡಲು ಮನಸ್ಸು ಮಾಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಕೋಲಾರದಿಂದ ಸ್ಪರ್ಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲಹೆ ನೀಡಿದ್ದಾರೆ ಎಂದು ವರದಿಯಾಗಿದೆ.
ಕೋಲಾರ ಕ್ಷೇತ್ರದ ವರದಿಗಳು ಅಲ್ಲಿ ನೀವು ಸ್ಪರ್ಧಿಸುವುದು ಸೂಕ್ತವೆಂದು ಎನಿಸುತ್ತಿಲ್ಲ ಮತ್ತೊಮ್ಮೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಿ ಎಂದು ರಾಹುಲ್ ಗಾಂಧಿ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಶುಕ್ರವಾರ ದೆಹಲಿಯಲ್ಲಿ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ ಸಂದರ್ಭದಲ್ಲಿ ರಾಹುಲ್ ಗಾಂಧಿ ಸಿದ್ದರಾಮಯ್ಯ ಅವರಿಗೆ ಈ ಸಲಹೆ ನೀಡಿದ್ದಾರೆ ಎನ್ನಲಾಗಿದ್ದು, ವರುಣಾ ಕ್ಷೇತ್ರದಿಂದಲೇ ಸ್ಪರ್ಧಿಸಿ ಎಂದು ಎನ್ನಲಾಗಿದೆ. ಸಿಇಸಿ ಸಭೆ ಬಳಿಕ ಸಿದ್ಧರಾಮಯ್ಯ ಜೊತೆ ರಾಹುಲ್ ಗಾಂಧಿ 10 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದರು.
ರಾಹುಲ್ ಗಾಂಧಿ ಸಲಹೆ ಕುರಿತು ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಪಕ್ಷದ ಹೈಕಮಾಂಡ್ ಹೇಳಿದ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಕಳೆದ ತಿಂಗಳು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ (ಕೆಪಿಸಿಸಿ) ಸಲ್ಲಿಸಿದ ಔಪಚಾರಿಕ ಅರ್ಜಿಯಲ್ಲಿ ಸಿದ್ದರಾಮಯ್ಯ ಅವರು ಬಾದಾಮಿ, ವರುಣಾ ಮತ್ತು ಕೋಲಾರವನ್ನು ತಾವು ಆಯ್ಕೆ ಮಾಡುವ ಮೂರು ಕ್ಷೇತ್ರಗಳೆಂದು ಉಲ್ಲೇಖಿಸಿದ್ದರು.
ಕ್ಷೇತ್ರದ ಆಯ್ಕೆಯಲ್ಲಿ ತಿಂಗಳುಗಟ್ಟಲೆ ವಿಳಂಬ ಮಾಡಿದ ನಂತರ, ಸಿದ್ದರಾಮಯ್ಯ ಅವರು ಕೋಲಾರಕ್ಕೆ ತರಾತುರಿಯಲ್ಲಿ ಭೇಟಿ ನೀಡಿದರು ಮತ್ತು ಕೋಲಾರದಿಂದ ಸ್ಪರ್ಧಿಸಲು ನಾನು “ಮನಸ್ಸು ಮಾಡಿದ್ದೇನೆ” ಎಂದು ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಘೋಷಿಸಿದ್ದರು.
ಪ್ರಸ್ತುತ ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸಿದ್ದರಾಮಯ್ಯ ಅವರಿಗೆ ಸ್ಪರ್ಧಿಸುವಂತೆ ಚುನಾವಣೆಗೆ ಸ್ಪರ್ಧಿಸಲು ವಿವಿಧ ಕ್ಷೇತ್ರಗಳಿಂದ ಹಲವಾರು ಒತ್ತಾಯಗಳು ಬಂದಿದ್ದವು. ಆದರೆ ಮಾಜಿ ಮುಖ್ಯಮಂತ್ರಿಗಳು ತಮ್ಮ ನಿಕಟವರ್ತಿಗಳೊಂದಿಗೆ ವಿಸ್ತೃತ ಚರ್ಚೆಯ ನಂತರ ಈ ವರ್ಷದ ಜನವರಿಯಲ್ಲಿ ಕೋಲಾರದಲ್ಲಿ ನಿರ್ಧರಿಸುವುದಾಗಿ ಘೋಷಿಸಿದ್ದರು.
Join The Telegram | Join The WhatsApp |