Join The Telegram | Join The WhatsApp |
ಬೆಳಗಾವಿ :
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಫುಟ್ಬಾಲ್ ಪಂದ್ಯಾವಳಿಯನ್ನು ಬೆಂಗಳೂರಿನ ರಾಮಯ್ಯ ಕಾಲೇಜ್ ಆಫ್ ಲಾನಲ್ಲಿ ಆಯೋಜಿಸಲಾಗಿತ್ತು. ಇದರಲ್ಲಿ ಫುಟ್ಬಾಲ್ ಪಂದ್ಯಾವಳಿಯಲ್ಲಿ ಕೆಎಲ್‌ಎಸ್ ರಾಜಾ ಲಖಮಗೌಡ ಕಾನೂನು ಕಾಲೇಜಿನ ವಿದ್ಯಾರ್ಥಿಗಳು ತೃತೀಯ ಬಹುಮಾನ ಪಡೆದರು. ಕರ್ನಾಟಕದಾದ್ಯಂತ 18 ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು.
ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ತೇಜಸ್ ಇಂಚಲ, ಅಮೋಲ್ ಶಿಂಧೆ, ಶುಭಂ ಕುಸಲಾಪುರ, ದುರ್ಗಾಪ್ರಸಾದ ಪಾಟೀಲ, ತುಷಾರ ಪವಾರ್, ಆಕಾಶ ಸರದೇಶಪಾಂಡೆ, ಸಾಯಿ ಮಜುಕರ್, ವೃಷಬ್ ಲೆಂಗಡೆ, ಪುರುಷೋತ್ತಮ ಒಡೆಯರ್, ರವಿತೇಜ್ ಹಿರೇಮಠ, ರಾಂಚೋಡ್ ಶಹಾಪುರಕರ,
ಚಾಣಕ್ಯ ಸೋಮಣ್ಣವರ, ಮತಿನ ಪೀರಜಾದೆ, ತುಷಾರ ಚವ್ಹಾಣ್ ಪಾಟೀಲ, ಆರ್ಯನ್ ಬಾಗಿ ಫುಟ್ಬಾಲ್ ತಂಡದ ಆಟಗಾರರಾಗಿದ್ದಾರೆ.
ಕರ್ನಾಟಕ ಲಾ ಸೊಸೈಟಿಯ ಅಧ್ಯಕ್ಷ ಅನಂತ ಮಂಡಗಿ, ಚೇರಮನ್ ಪಿ.ಎಸ್.ಸಾವ್ಕರ್, ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಎಂ.ಆರ್.ಕುಲಕರ್ಣಿ, ಪ್ರಾಚಾರ್ಯ ಡಾ.ಎ.ಎಚ್.ಹವಾಲ್ದಾರ್, ಜಿಮಖಾನಾ ಅಧ್ಯಕ್ಷ ಡಾ.ಪ್ರಸನ್ನ ಕುಮಾರ್, ನಿರ್ದೇಶಕ ಪ್ರೊ.ಅಮಿತ್ ಜಾಧವ್, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಆಟಗಾರರನ್ನು ಅಭಿನಂದಿಸಿದರು.
Join The Telegram | Join The WhatsApp |