Join The Telegram | Join The WhatsApp |
ರಾಯಬಾಗ-
ಜೈನ ಧರ್ಮದ ಅನಾದಿನಿದನ ಪರಮ ಪಾವನ ಕ್ಷೇತ್ರವಾದ ಸಮ್ಮೇದ ಶಿಖರ್ಜಿಯು ಜಾರ್ಖಂಡ್ ರಾಜ್ಯದ ಗಿರಡಿ ಜಿಲ್ಲೆಯಲ್ಲಿದೆ. ಈ ತೀರ್ಥಕ್ಷೇತ್ರ ಜೈನರ 20 ತೀರ್ಥಂಕರರು ಮುಕ್ತಿ ಹೊಂದಿದ ಸ್ಥಳವಾಗಿದೆ. ಜೈನರಿಗೆ ಈ ಕ್ಷೇತ್ರದ ದರ್ಶನ ಮಾಡಿದರೆ ಸಕಲ ಪಾಪಗಳು ಕಳೆದು ಹೋಗುತ್ತದೆ ಎಂಬ ನಂಬಿಕೆ ಇದೆ. ಈ ಕ್ಷೇತ್ರದ ದರ್ಶನಕ್ಕಾಗಿ ವಿಶ್ವದ ನಾನಾಭಾಗಗಳಿಂದ ಜೈನರು ಧಾವಿಸಿ ಬರುತ್ತಿದ್ದಾರೆ. ವಘೇಲಾ ರಾಜವಂಶದ ವಿರಾಢವಲ ಮತ್ತು ವಿಶಾಲದೇವನ ಆಳ್ವಿಕೆಯಲ್ಲಿ ಪ್ರಧಾನಮಂತ್ರಿಯಾಗಿದ್ದ ವಾಸ್ತುಪಾಲನು ಶಿಖರವನ್ನು ಜೈನರ ತೀರ್ಥಕ್ಷೇತ್ರವೆಂದು ಘೋಷಿಸಿದ್ದಾನೆ. ಮೊಗಲ್ ದೊರೆ ಅಕ್ಬರನು ಕೂಡ ಇತಿಹಾಸದ ದಾಖಲೆಗಳನ್ನು ಪರಿಶೀಲಿಸಿ ಇದು ಜೈನರ ತೀರ್ಥಕ್ಷೇತ್ರ ಎಂದು ಆದೇಶ ಹೊರಡಿಸಿದ್ದಾನೆ. ಬ್ರಿಟಿಷರೂ ಕೂಡ ಸಮ್ಮೇದ ಶಿಖರ್ಜಿ ಜೈನರ ಪುಣ್ಯಕ್ಷೇತ್ರ ಎಂದು ಆದೇಶ ನೀಡಿದ್ದಾರೆ.
ಆದರೆ ಸ್ವಾತಂತ್ರ್ಯ ನಂತರದ ಬಂದ ಸರಕಾರಗಳು ಅಲ್ಪಸಂಖ್ಯಾತರಲ್ಲಿ ಅಲ್ಪಸಂಖ್ಯಾತರಾದ ಜೈನರ ತೀರ್ಥಕ್ಷೇತ್ರದ ವಿಚಾರದಲ್ಲಿ ಅಭದ್ರತೆಯ ವಾತಾವರಣ ನಿರ್ಮಿಸುತ್ತಿವೆ. ಜೈನರ ಪ್ರತಿರೋಧದ ನಡುವೆಯೂ ಜಾರ್ಖಂಡ್ ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರ ಈ ಪವಿತ್ರ ಸ್ಥಳವನ್ನು ಪ್ರವಾಸಿತಾಣವನ್ನಾಗಿ ಘೋಷಿಸುವ ಮೂಲಕ ಅಪವಿತ್ರಗೊಂಡಂತಾಗಿದೆ. ಜೈನ ತೀರ್ಥಕ್ಷೇತ್ರ ಅಪವಿತ್ರಗೊಳಿಸುವ ಕಾರ್ಯ ಮಾಡಿದರೆ ಗಂಭೀರ ಪರಿಣಾಮ ಸರ್ಕಾರಗಳು ಎದುರಿಸಬೇಕಾದಿತು, ಈಗಾಗಲೇ ಗುಜರಾತಿ ಕ್ಷೇತ್ರ ಗಿರಿನಾರದಲ್ಲಿ ಜೈನ ಸಮಾಜಕ್ಕೆ ಅನ್ಯಾಯವಾಗುತ್ತಿದೆ ಎಂದು ಜೈನ ಸಮಾಜದ ಯುವನಾಯಕ ರಾಜು ಐತವಾಡೆ ಆರೋಪಿಸಿದ್ದಾರೆ.
ಭಾರತದ ಸಂವಿಧಾನದ ಪ್ರಕಾರ ಭಾರತದಲ್ಲಿ ಜೈನರು ಹೊಂದಿರುವ ಮಹಾತೀರ್ಥಕ್ಷೇತ್ರದ ಪಾವಿತ್ರತೆಯನ್ನು ರಕ್ಷಿಸುವುದು ಭಾರತ ಸರಕಾರದ ಕರ್ತವ್ಯವಾಗಿದೆ. ಹೇಗೆ ಅನ್ಯರ ತೀರ್ಥಕ್ಷೇತ್ರಗಳ ಬಗೆಗೆ ಸರಕಾರ ಕಾಳಜಿಯನ್ನು ಹೊಂದಿದೆಯೋ ಅದೇ ರೀತಿ ಜೈನರ ಕ್ಷೇತ್ರಗಳ ಕಾಳಜಿಯನ್ನು ಭಾರತ ಸರಕಾರ ವಹಿಸಿಕೊಳ್ಳಬೇಕಾದದ್ದು ತಮ್ಮ ಕರ್ತವ್ಯವಾಗಿದೆ ಎಂದು ಜೈನ ಸಮಾಜದ ಯುವನಾಯಕ ರಾಜು ಐತವಾಡೆ ಆಗ್ರಹಿಸಿದ್ದಾರೆ
Join The Telegram | Join The WhatsApp |