ಬೆಳಗಾವಿ : ಬೆಳಗಾವಿ ಕನ್ನಡಿಗರು ಧರ್ಮಸಂಕಟಕ್ಕೆ ಸಿಲುಕಿದ್ದಾರೆ. ಈ ಸಲದ ಕನ್ನಡ ರಾಜ್ಯೋತ್ಸವ ದೀಪಾವಳಿಯ ದಿನ ಬಂದಿರುವುದು ಕನ್ನಡಿಗರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ.
ರಾಜ್ಯೋತ್ಸವದ ಮೆರವಣಿಗೆಯಲ್ಲಿ ಭಾಗವಹಿಸುವುದೇ
ಅಥವಾ ದೀಪಾವಳಿ ಹಬ್ಬ ಮಾಡುವುದೇ ಎಂದು. ಈಗಾಗಲೇ ಜಿಲ್ಲಾಡಳಿತ ಕನ್ನಡ ಸಂಘಟನೆಗಳ ಮಾತಿಗೆ ಬೆಲೆ ಕೊಡದೇ ನವೆಂಬರ್ 1 ರಂದೇ ಮೆರವಣಿಗೆ ಮಾಡಲು ನಿರ್ಧರಿಸಿದ್ದಾರೆ. ಕಾರಣ ಈ ಬಗ್ಗೆ ಚರ್ಚಿಸಲು ಶನಿವಾರ ದಿ.19 ರಂದು ಎಲ್ಲ ಸಂಘಟನೆಗಳ ಸಭೆಯನ್ನು ಸಂಜೆ 7 ಗಂ. ಮಠಬೀದಿಯ ಪದ್ಮಾ ಮಂಗಲ ಕಾರ್ಯಾಲಯದಲ್ಲಿ ಕರೆಯಲಾಗಿದೆ. ಸಭೆಯಲ್ಲಿ ನವೆಂಬರ 3 ರಂದು ರಾಜ್ಯೋತ್ಸವದ ಮೆರವಣಿಗೆ ಮಾಡಿದರೆ ಎಲ್ಲರಿಗೂ ಅನುಕೂಲ ಆಗಬಹುದೇ ಎಂದು ಚರ್ಚೆ ಮಾಡುವುದಿದೆ.
ಕಾರಣ ಬೆಳಗಾವಿ ಹಾಗೂ ಸುತ್ತಮುತ್ತಲಿನ ಗ್ರಾಮದ ಕನ್ನಡ ಸಂಘಟನೆ ಪ್ರಮುಖರು ಉಪಸ್ಥಿತರಿರಬೇಕು ಎಂದು ಚಾಣಕ್ಯ ಯುವಕ ಮಂಡಳದ ಸಂಸ್ಥಾಪಕ ಪದ್ಮರಾಜ ವೈಜಣ್ಣವರ ಮನವಿ ಮಾಡಿದ್ದಾರೆ.