ದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರೇ ಟಿಕ್ ಟಾಕ್ ಮೇಲಿನ ನಿಷೇಧವನ್ನು ತೆಗೆದುಹಾಕಿ. ಎಲ್ಲರೂ ಟಿಕ್ ಟಾಕ್ ಬಳಸಿ ದುಡಿಯುತ್ತಿದ್ದಾರೆ. ಇಲ್ಲದಿದ್ದರೆ ನಾನು ಪಾಕಿಸ್ತಾನಕ್ಕೆ ತೆರಳಿ ಪಾಕಿಸ್ತಾನಿ ಪ್ರಜೆಯನ್ನು ಮದುವೆಯಾಗುತ್ತೇನೆ. ನಾನು ಪಾಕಿಸ್ತಾನ ವಿಮಾನ ನಿಲ್ದಾಣದಲ್ಲಿ ಇದ್ದೇನೆ. ನಾನು ಪಾಕಿಸ್ತಾನಕ್ಕೆ ಹೋಗುತ್ತೇನೆ. ಅಲ್ಲಿ ಹಲ್ವಾ ಪೂರಿ ತಿನ್ನುತ್ತೇನೆ. ನಮ್ಮ ದೇಶದಲ್ಲಿ ನಿರುದ್ಯೋಗಿಗಳಿದ್ದಾರೆ, ಟಿಕ್ ಟಾಕ್ ಮೂಲಕ ದುಡಿಯಬಹುದು. ನಾನು ದುಬೈಯಲ್ಲಿ ಕೂತು ಟಿಕ್ ಟಾಕ್ ನಿಂದ ಹಣ ಗಳಿಸುತ್ತಿದ್ದೇನೆ. ನನಗೆ ಭಾರತಕ್ಕೆ ಬಂದು ಟಿಕ್ ಟಾಕ್ ನಿಂದ ಹಣ ಗಳಿಸ ಬೇಕು ಎಂದು ಖ್ಯಾತ ನಟಿ ರಾಖಿ ಸಾವಂತ್ ಹೇಳಿದ್ದಾರೆ.

ರಾಖಿಯ ಈ ಮಾತಿನ ಆಡಿಯೋ ಅನ್ನು ಬಳಸಿಕೊಂಡು ಪಾಕಿಸ್ತಾನದ ನಟಿ ಹನಿಯಾ ಅವರು ಟಿಕ್ ಟಾಕ್ ಮಾಡಿದ್ದಾರೆ. ಇದರ ನಂತರ ರಾಖಿ ಪ್ರತಿಕ್ರಿಯೆ ನೀಡಿದ್ದು ಪ್ರಧಾನಿ ಮೋದಿ ಅವರ ಬಳಿ ಟಿಕ್ ಟಾಕ್ ಮೇಲಿನ ನಿಷೇಧ ತೆರವಿಗೆ ಮನವಿ ಮಾಡಿದ್ದಾರೆ.