ಚಿಕ್ಕಮಗಳೂರು : ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಯಲ್ಲಿ ಸೋಲು ಅನುಭವಿಸಿದ ಎನ್.ಡಿ.ಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಸೋಲು ಅವರ ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಕಟ್ಟಾ ಅಭಿಮಾನಿ ಒಬ್ಬರು ಆತ್ಮಹತ್ಯೆಗೆ ಪ್ರಯತ್ನಿಸಿದ ಬೆನ್ನಲ್ಲೇ ಇದೀಗ ಕಡೂರು ಮೂಲದ ಹರ್ಷಿತ್ ರಕ್ತದಲ್ಲಿ ಪತ್ರ ಬರೆದಿದ್ದಾರೆ.
ಜೆಡಿಎಸ್ ಎಂದು ರಕ್ತದಲ್ಲಿ ಬರೆದ ಪತ್ರದಲ್ಲಿ ನೀವು ಸೋತಿರಬಹುದು, ಆದರೆ ಜನರ ಮನಸ್ಸಿನಲ್ಲಿದ್ದೀರಾ. ಎಷ್ಟೋ ನಮ್ಮಂತ ನಿಷ್ಠಾವಂತ ಕಾರ್ಯಕರ್ತರಲ್ಲಿ ನಮ್ಮ ಪಕ್ಷದ ಉಸಿರಿದೆ. ಒಂದಲ್ಲ ಒಂದು ದಿನ ಒಳ್ಳೆತನ ಗೆದ್ದೇ ಗೆಲ್ಲುತ್ತದೆ. ನಿಮ್ಮ ಜೊತೆ ನಾವಿದ್ದೇವೆ. ಧೈರ್ಯವಾಗಿರಿ. ನನ್ನ ರಕ್ತದಲ್ಲಿ ಜೆಡಿಎಸ್ ಇದೆ ಎಂದು ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ.