ವಿಜಯವಾಡ: ಖ್ಯಾತ ನಟ ರಾಮ್‌ ಚರಣ್‌ ಅವರ ಬಹುನಿರೀಕ್ಷಿತ ಗೇಮ್‌ ಚೇಂಜರ್‌ ಚಲನಚಿತ್ರ ಜ.10ಕ್ಕೆ ಬಿಡುಗಡೆ ಆಗಲಿದೆ. ಈ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ವಿಜಯವಾಡದಲ್ಲಿ ಅವರ 256 ಅಡಿ ಎತ್ತರದ ಬೃಹತ್‌ ಕಟೌಟ್‌ ಹಾಕಲಾಗಿದೆ. ಚಿತ್ರನಟನೊಬ್ಬನ ಅಭಿಮಾನದಿಂದ ಹಾಕಲಾಗಿರುವ ಈವರೆಗಿನ ಅತಿದೊಡ್ಡ ಕಟೌಟ್‌ ಇದು ಎಂದು ಹೇಳಲಾಗುತ್ತಿದೆ.ಆರ್‌ಆರ್‌ಆರ್‌ ಸಿನಿಮಾದ ಯಶಸ್ಸಿನ ನಂತರ ರಾಮ್ ಚರಣ್‌ ಅವರ ಬಹುನಿರೀಕ್ಷೆಯ ಚಿತ್ರ ಗೇಮ್‌ ಚೇಂಜರ್‌. ಬಿಗ್‌ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಪ್ಯಾನ್‌ ಇಂಡಿಯಾ ಸಿನಿಮಾವನ್ನು ಖ್ಯಾತ ನಿರ್ದೇಶಕ ಶಂಕರ್‌ ನಿರ್ದೇಶಿಸುತ್ತಿದ್ದಾರೆ. ಜ.10ರಂದು ಈ ಚಿತ್ರ ಬಿಡುಗಡೆಯಾಗಲಿದೆ. ಸಾಮಾಜಿಕ ಜಾಲತಾಣದಲ್ಲಿ ಕಟೌಟ್‌ನ ಫೋಟೋಗಳು ಹರಿದಾಡುತ್ತಿದ್ದು, ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಗೇಮ್‌ ಚೇಂಜರ್‌ನಲ್ಲಿ ರಾಮ್‌ ಚರಣ್‌ ಅ‍ವರು ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದು, ಬಾಲಿವುಡ್‌ ನಟಿ ಕಿಯಾರಾ ಅಡ್ವಾಣಿ ಈ ಚಿತ್ರದ ಹಿರೋಯಿನ್‌.