
ಉಪ್ಪಿನಂಗಡಿ: ಇಲ್ಲಿನ ನಟ್ಟಿಬೈಲ್‌ನಲ್ಲಿರುವ ಶ್ರೀರಾಮ
ಶಾಲೆಯಲ್ಲಿ ಜ.22 ರಂದು ಸ್ಥಾಪನೆಗೊಳ್ಳಲಿರುವ ಹನುಮಂತ ಸಹಿತ ಶ್ರೀ ರಾಮನ ಮೂರ್ತಿಯ ಪುರ ಪ್ರವೇಶ ಕಾರ್ಯಕ್ರಮ ಮೆರವಣಿಗೆಯೊಂದಿಗೆ ನಡೆಯಿತು.ಅಯೋಧ್ಯೆಯಲ್ಲಿ ಶ್ರೀರಾಮ ದೇವಾಲಯವು ಲೋಕಾರ್ಪಣೆಗೊಂಡು ಪ್ರತಿಷ್ಠಾ ವಾರ್ಷಿಕೋತ್ಸವ ನಡೆಯುತ್ತಿರುವ ಸಂದರ್ಭದಲ್ಲಿ ರಾಮಭಕ್ತ ಹನುಮಂತ ಸಹಿತ ಶ್ರೀರಾಮನ ವಿಗ್ರಹವನ್ನು ಶಾಲಾ ಆವರಣದಲ್ಲಿ ಸ್ಥಾಪಿಸಲು ಶಾಲಾ ಆಡಳಿತ ತೀರ್ಮಾನಿಸಿದೆ. ಈ ಸಂಬಂಧ ವಿಗ್ರಹವನ್ನು ಸಹಸ್ರಲಿಂಗೇಶ್ವರ ದೇವಾಲಯದ ವಠಾರದಿಂದ ಮೆರವಣಿಗೆಯಲ್ಲಿ ಶಾಲಾ ಆವರಣಕ್ಕೆ ತರಲಾಯಿತು.
ಶ್ರೀ ರಾಮ ಶಾಲೆ ಅಧ್ಯಕ್ಷ ಸುನಿಲ್ ಅನಾವು, ವಿಶ್ವಹಿಂದೂ ಪರಿಷತ್ ಅಧ್ಯಕ್ಷ ಸುದರ್ಶನ, ಗೆಳೆಯರು-94 ಸಂಘಟನೆಯ ಅಧ್ಯಕ್ಷ ರಾಧಾಕೃಷ್ಣ ಬೊಳ್ಳಾವು, ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಸುಧಾಕರ ಶೆಟ್ಟಿ, ಮಾಧವ ಶಿಶು ಮಂದಿರ ಸಮಿತಿ ಅಧ್ಯಕ್ಷ ಮನೋಜ್ ಶೆಟ್ಟಿ, ಪ್ರಮುಖರಾದ ಯು.ಜಿ.ರಾಧಾ, ಸುರೇಶ್ ಜಿ., ಗುಣಕರ ಅಗ್ನಾಡಿ, ಗಣೇಶ್ ಕುಲಾಲ್, ರವೀಂದ್ರ ಆಚಾರ್ಯ, ಕಂಗೈ ವಿಶ್ವನಾಥ ಶೆಟ್ಟಿ, ಹರಿರಾಮಚಂದ್ರ, ಅಶೋಕ್ ಕುಮಾರ್ ರೈ, ಸುರೇಶ್ ಅತ್ರಮಜಲು, ವಿದ್ಯಾಧರ ಜೈನ್, ಗೀತಾಲಕ್ಷ್ಮಿ ತಾಳ್ತಜೆ, ಕೈಲಾರ್ ರಾಜಗೋಪಾಲ ಭಟ್, ಅನುರಾಧಾ ಆರ್.ರೈ, ಜಯಂತ ಪೊರೋಳಿ ಭಾಗವಹಿಸಿದ್ದರು.