ಬೆಳಗಾವಿ: ಬೆಳಗಾವಿ ತಾಲೂಕು ಪಂಚಾಯಿತಿ ನೂತನ ಕಾರ್ಯನಿರ್ವಾಹಕ ಅಧಿಕಾರಿಯಾಗಿ ರಾಮರಡ್ಡಿ ಪಾಟೀಲ ಮಂಗಳವಾರ ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಾರ್ಚ್ ಹತ್ತಿರ ಬರುತ್ತಿರುವುದರಿಂದ ಸಿಬ್ಬಂದಿಗಳು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಬೇಕು. ಯಾವುದೇ ಕಾರಣಕ್ಕೂ ಕಚೇರಿ ಕೆಲಸಗಳು ಬಾಕಿ ಉಳಿಯಬಾರದು ಎಂದು ಸಿಬ್ಬಂದಿಗಳಿಗೆ ಸೂಚಿಸಿದರು. ತಾಪಂ ವ್ಯವಸ್ಥಾಪಕ ರಾಜೇಂದ್ರ ಮೊರಬದ, ತಾಲೂಕು ಯೋಜನಾಧಿಕಾರಿ ಎನ್. ಎಸ್. ಹೂಗಾರ, ತಾಂತ್ರಿಕ ಸಂಯೋಜಕ ನಾಗರಾಜ ಯರಗುದ್ದಿ, ಎಂಐಎಸ್ ಸಂಯೋಜಕ ಶೀತಲ ಪಾಟೀಲ ತಾಐಇಸಿ ಸಂಯೋಜಕ ರಮೇಶ ಮಾದರ ಸೇರಿದಂತೆ ತಾಲೂಕು ತಾಂತ್ರಿಕ ಹಾಗೂ ಆಡಳಿತ ಸಿಬ್ಬಂದಿಗಳು ಉಪಸ್ಥಿತರಿದ್ದರು.