ಬೆಳಗಾವಿ :
ಬೆಳಗಾವಿಯ ಕೆಪಿಟಿಸಿಎಲ್ ಸಭಾಂಗಣದಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ವಿದ್ಯಾರ್ಥಿನಿ ಕಾವ್ಯ ಬಡಿಗೇರ ಇವರು ಕಾತಾ ಮತ್ತು ಕುಮಿತ ವಿಭಾಗದಲ್ಲಿ 02 ಚಿನ್ನ, 01ಬೆಳ್ಳಿ ಪದಕ ಪಡೆಯುವುದರ ಮೂಲಕ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ.

ವಿದ್ಯಾರ್ಥಿನಿಯ ಈ ಸಾಧನೆಗೆ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಶಂಕರ ಎಸ್. ತೇರದಾಳ ಪ್ರಶಂಸಿದ್ದಾರೆ. ಸಾಂಸ್ಕೃತಿಕ ವೇದಿಕೆಯ ಸಂಯೋಜಕ ಡಾ. ಅರ್ಜುನ ಜಂಬಗಿ, ಐ ಕ್ಯೂ ಎ ಸಿ ಸಂಯೋಜಕ ಡಾ. ಆದಿನಾಥ ಉಪಾಧ್ಯೆ, ಎನ್ ಎಸ್ ಎಸ್ ಘಟಕದ ಸಂಚಾಲಕ ಡಾ. ಮುಕುಂದ ಮುಂಡರಗಿ ಮತ್ತು ಸಹಾಯಕ ದೈಹಿಕ ಶಿಕ್ಷಣ ನಿರ್ದೇಶಕ ಬಸವರಾಜ ಕುಮಶಿ ಮತ್ತು ಬೋಧಕ- ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.